ಮುಂಬಯಿ ಶೇರು ಪೇಟೆಯಲ್ಲೀಗ ಗೂಳಿ ಪ್ರತಾಪ: 231 ಅಂಕ ಏರಿಕೆ
Team Udayavani, May 4, 2017, 5:06 PM IST
ಮುಂಬಯಿ : ಭಾರತ ಸಹಿತ ವಿಶ್ವದ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳಲ್ಲಿ ಬಂಡವಾಳ ಹೂಡುವುದೇ ಹೆಚ್ಚು ಲಾಭಕರವೆಂದು ವಿದೇಶೀ ಹೂಡಿಕೆದಾರರು ಮತ್ತೂಮ್ಮೆ ಮನಗಂಡಿರುವ ಕಾರಣ ವಿದೇಶೀ ನೇರ ಹೂಡಿಕೆಯ ಒಳ ಹರಿವು ಹೆಚ್ಚಿರುವುದರಿಂದ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಗೂಳಿಯ ಪ್ರತಾಪ ಈಗ ಎಗ್ಗಿಲ್ಲದೆ ಮುಂದುವರಿದಿದೆ.
ಅಂತೆಯೇ ಇಂದು ಗುರುವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 231.41 ಅಂಕಗಳ ಅಮೋಘ ಏರಿಕೆಯೊಂದಿಗೆ 39,126.21 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.95 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,359.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಹಾಗಿದ್ದರೂ ಇಂದಿನ ವಹಿವಾಟಿನಲ್ಲಿ ಎಚ್ ಡಿ ಎಫ್ ಸಿ ಶೇರು ಕುಸಿದದ್ದು ಒಂದು ದಾಖಲೆ ಎನಿಸಿತು. ಇದಕ್ಕೆ ಕಾರಣ ನಾಲ್ಕನೇ ತ್ತೈಮಾಸಿಕದಲ್ಲಿ ಅದರ ಲಾಭ ಶೇ.22ರಷ್ಟು ಕೊರೆದು ಹೋಗಿರುವುದು (2,044 ಕೋಟಿ ರೂ.). ಇದೇ ವೇಳೆ ಎನ್ಐಐ ಶೇರುಗಳು ಶೇ.26ರಷ್ಟು ಏರಿರುವುದು ಕೂಡ ಗಮನಾರ್ಹ ಎನಿಸಿತು.
ಭಾರತದ ಶೇರು ಮಾರುಕಟ್ಟೆಯ ರಾಲಿಯಲ್ಲಿ ಈಗಿನ್ನು ವಿದೇಶೀ ಹೂಡಿಕೆದಾರರು ಸೇರಲಿರುವುದರಿಂದ ಈ ವರ್ಷ ದೀಪಾವಳಿಯ ಹೊತ್ತಿಗೆ ನಿಫ್ಟಿ 10,000 ಅಂಕಗಳ ಮಟ್ಟವನ್ನು ದಾಟುವುದು ನಿಶ್ಚಿತವೆಂದು ಶೇರು ಪರಿಣತರು ಹೇಳಿದರು.
ಇಂದಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಐಸಿಐಸಿ ಬ್ಯಾಂಕ್, ಎಚ್ ಡಿ ಎಫ್ ಸಿ, ಎಕ್ಸಿಸ್ ಬ್ಯಾಂಕ್, ಎಸ್ಬಿಐ, ರಿಲಯನ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್