ಬಿಎಸ್‌ಎನ್‌ಎಲ್, ಏರ್‌ ಇಂಡಿಯಾ ಮತ್ತು ಎಂಟಿಎನ್‌ಎಲ್ ನಷ್ಟ ಪ್ರಮಾಣ ಹೆಚ್ಚಳ

ಶೇ.97.04ರಷ್ಟು ತಲುಪಿದ ನಷ್ಟದ ಪ್ರಮಾಣ

Team Udayavani, Feb 12, 2020, 5:19 PM IST

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್), ಏರ್‌ ಇಂಡಿಯಾ ಮತ್ತು ಮಹಾನಗರ ಟೆಲಿಫೋನ್‌ ನಿಗಮ್‌ ಲಿಮಿಟೆಡ್‌ (ಎಂಟಿಎನ್‌ಎಲ್) ಸತತ ಮೂರನೇ ವರ್ಷವೂ ಅತಿಹೆಚ್ಚು ನಷ್ಟ ಅನುಭ ವಿಸಿವೆ.

ಸಾರ್ವಜನಿಕ ಉದ್ದಿಮಗಳ ಇಲಾಖೆ, ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾಲಯ ಪ್ರತಿ ವರ್ಷ ಜಂಟಿಯಾಗಿ ತಯಾರಿಸುವ ಕೇಂದ್ರೋದ್ಯಮಗಳ ಹಣಕಾಸು ಸಾಧನೆಗೆ ಸಂಬಂಧಿಸಿದ ವರದಿಯಿಂದ ಈ ಮಾಹಿತಿ ತಿಳಿದುಬಂದಿದೆ.

ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕಂಪನಿಗಳ ಹೊರತಾಗಿ ಒಎನ್‌ಜಿಸಿ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಮತ್ತು ಎನ್‌ಟಿಪಿಸಿ ಅಂತಹ ಕೇಂದ್ರೋದ್ಯಮಗಳು 2018-19ರ ಸಾಲಿನಲ್ಲಿ ಲಾಭ ಗಳಿಸಿವೆ ಎಂದು ವರದಿ ತಿಳಿಸಿದೆ.

70 ಕಂಪನಿಗಳು ನಷ್ಟದಲ್ಲಿ
ನಷ್ಟದಲ್ಲಿರುವ ಒಟ್ಟಾರೆ 70 ಕಂಪನಿಗಳಲ್ಲಿ 10 ಕಂಪನಿಗಳ ನಷ್ಟದ ಪ್ರಮಾಣವೇ ಶೇ.97.04ರಷ್ಟು ಇದೆ. ಇನ್ನೂ ಆದಾಯ ಗಳಿಸಿರುವ ಒಎನ್‌ಜಿಸಿ, ಇಂಡಿಯನ್‌ ಆಯಿಲ್‌ ಮತ್ತು ಎನ್‌ಟಿಪಿಸಿ ಕ್ರಮವಾಗಿ ಶೇ.15.3ರಷ್ಟು, ಶೇ.9.68ರಷ್ಟು ಹಾಗೂ 6.73ರಷ್ಟು ಲಾಭಾಂಶ ಮಾಡಿಕೊಂಡಿವೆ.

ಸರಕಾರಕ್ಕೆ ಲಾಭ
ಎಕ್ಸಿಸ್‌, ಕಸ್ಟಮ್ ಸುಂಕ, ಜಿಎಸ್‌ಟಿ, ಕಾರ್ಪೊರೇಟ್‌ ತೆರಿಗೆ, ಲಾಭಾಂಶ, ಸಾಲದ ಮೇಲಿನ ಬಡ್ಡಿದರ ಮತ್ತು ಇತರೆ ಸುಂಕ ಮತ್ತು ತೆರಿಗೆಗಳಿಂದ ಸರಕಾರದ ಬೊಕ್ಕಸಕ್ಕೆ 2018-19ರಲ್ಲಿ 3,68,803 ಕೋಟಿ ರೂ. ಬಂದಿದೆ. 2017-18ರಲ್ಲಿ 3,52,361 ಕೋಟಿ ರೂ. ಬಂದಿತ್ತು. ಇದಕ್ಕೆ ಹೋಲಿಸಿದರೆ ಆದಾಯದ ಮೊತ್ತದಲ್ಲಿ ಶೇ.4.67ರಷ್ಟು ಏರಿಕೆಯಾಗಿದೆ.

348 ಕೇಂದ್ರೋದ್ಯಮಗಳು
ಕೇಂದ್ರೋದ್ಯಮಗಳ ಮಾಹಿತಿಯಲ್ಲಿ 348 ಕಂಪನಿಗಳಿವೆ. ಇದರಲ್ಲಿ 249 ಕಾರ್ಯಚರಣೆ ನಡೆಸುತ್ತಿವೆ. 86 ನಿರ್ಮಾಣ ಹಂತದಲ್ಲಿವೆ. 13 ಮುಚ್ಚುವ ಹಂತದಲ್ಲಿವೆ ಎಂದು ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ