ಹೆಲಿಕಾಫ್ಟರ್ ಮನಿ ; ಅರ್ಥಶಾಸ್ತ್ರಜ್ಞರ ಎಚ್ಚರಿಕೆಯ ಧ್ವನಿ


Team Udayavani, Apr 18, 2020, 6:14 AM IST

ಹೆಲಿಕಾಫ್ಟರ್ ಮನಿ ; ಅರ್ಥಶಾಸ್ತ್ರಜ್ಞರ ಎಚ್ಚರಿಕೆಯ ಧ್ವನಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

‘ಹೆಲಿಕಾಪ್ಟರ್‌ ಮನಿ’ ಎಂಬುದು ಕೆಲ ದಿನಗಳಿಂದ ನಮ್ಮ ನಡುವೆ ಸದ್ದು ಮಾಡುತ್ತಿರುವ, ಚರ್ಚೆ ಹುಟ್ಟು ಹಾಕುತ್ತಿರುವ ವಿಷಯ. ಮೊದಲನೆಯದಾಗಿ ಇದರ ಅರ್ಥ ನಿಜಕ್ಕೂ ಹೆಲಿಕಾಪ್ಟರ್‌ನಿಂದ ದುಡ್ಡನ್ನು ಕೆಳಕ್ಕೆ ಎಸೆಯುವುದು’ ಎಂದಲ್ಲ.

ಇದೊಂದು ಅರ್ಥಶಾಸ್ತ್ರದ ಪರಿಕಲ್ಪನೆಯಾಗಿದ್ದು, ಜನರ ಕೈಯಲ್ಲಿ ಹೆಚ್ಚು ದುಡ್ಡು ಓಡಾಡುವಂತೆ ಮಾಡಬಹುದಾದ ವಿಧಾನವಾಗಿದೆ. ಆದರೆ, ಇದರಿಂದ ಲಾಭಕ್ಕಿಂತ ನಷ್ಟವೇ ಅಧಿಕ ಎನ್ನುವುದು ಕಾಲಕಾಲಕ್ಕೆ ರುಜುವಾತಾಗುತ್ತಲೇ ಬಂದಿದೆ.

ನೆರೆಪೀಡಿತ ಪ್ರದೇಶಗಳಲ್ಲಿ, ಯುದ್ಧಪೀಡಿತ ಪ್ರದೇಶಗಳಲ್ಲಿ ಆಹಾರ ಮತ್ತು ಅಗತ್ಯ ಸಾಮಗ್ರಿಯನ್ನು ಸೇನೆಯ ಹೆಲಿಕಾಪ್ಟರ್‌ನಿಂದ ಕೆಳಕ್ಕೆ ಎಸೆಯುವುದನ್ನು ಟಿ.ವಿ.ಗಳಲ್ಲಿ ನೀವು ನೋಡಿರಬಹುದು. ಅದೇ ರೀತಿ ಆರ್ಥಿಕತೆಗೆ ಪೆಟ್ಟು ಬಿದ್ದಾಗ, ಅರ್ಥ ವ್ಯವಸ್ಥೆ ಮಹಾ ಕುಸಿತದ ಹಾದಿಯಲ್ಲಿದ್ದಾಗ ಅದನ್ನು ಸರಿದಾರಿಗೆ ತರಲು ಉಳಿದ ಕಟ್ಟ ಕಡೆಯ ಅಸ್ತ್ರವೇ ಹೆಲಿಕಾಪ್ಟರ್‌ ಮನಿ.

ಇದನ್ನು ‘ಹೆಲಿಕಾಪ್ಟರ್‌ ಡ್ರಾಪ್‌’ ಎಂದೂ ಕರೆಯುವರು. ಹೆಲಿಕಾಪ್ಟರ್‌ ಎನ್ನುವುದು ಇಲ್ಲಿ ರೂಪಕ. ವಾಸ್ತವದಲ್ಲಿ “ಹೆಲಿಕಾಪ್ಟರ್‌  ಮನಿ’ಯ ನಿಜವಾದ ಅರ್ಥ – ಜನರ ಕೈಗೆ ನೇರವಾಗಿ ಹಣವನ್ನು ತಲುಪಿಸುವುದು ಎಂದು. ಅಂದರೆ, ಹೆಚ್ಚಿನ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುವುದು.

ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ಕೋವಿಡ್‌-19ನಿಂದಾಗಿ ಪೆಟ್ಟು ತಿನ್ನುತ್ತಿರುವ ಆರ್ಥಿಕತೆಯನ್ನು ಮತ್ತೆ ಹಳಿಯೇರಿಸಲು ಈ ಮಾರ್ಗವನ್ನು ಅನುಸರಿಸಬೇಕು, ಆರ್‌ಬಿಐ ಜಿಡಿಪಿಯ 5 ಪ್ರತಿಶತ ಮೊತ್ತವನ್ನು ಬಿಡುಗಡೆ ಮಾಡಿ ಕ್ವಾಂಟಿಟೇಟಿವ್‌ ಈಸಿಂಗ್‌ಗೆ ಅನುವು ಮಾಡಿಕೊಡಬೇಕು ಎಂಬ ಸಲಹೆ ನೀಡಿದ್ದರು.

ಆಗಿನಿಂದ ದೇಶಾದ್ಯಂತ ಹೆಲಿಕಾಪ್ಟರ್‌ ಮನಿಯ ಬಗ್ಗೆ ಚರ್ಚೆಯಾಗಲಾರಂಭಿಸಿದೆ. ಚರ್ಚೆಗಳು ಕಟ್ಟುಕತೆಗಳಿಗೆ ಹಾದಿಮಾಡಿಕೊಡಲಾರಂಭಿಸಿವೆ. ಸರಕಾರ ಹೆಲಿಕಾಪ್ಟರ್‌ನಿಂದ ಹಣ ಎಸೆಯುತ್ತದೆ ಎಂಬ ತಪ್ಪು ವ್ಯಾಖ್ಯಾನಗಳು ಆರಂಭವಾಗಿವೆ!

ಪದದ ಮೊದಲ ಪ್ರಯೋಗ
ಹೆಲಿಕಾಪ್ಟರ್‌ ಡ್ರಾಪ್‌ ಪದಪ್ರಯೋಗವನ್ನು ಮೊದಲು ಹುಟ್ಟು ಹಾಕಿದವರು ಅಮೆರಿಕದ ಅರ್ಥಶಾಸ್ತ್ರಜ್ಞ ಮಿಲ್ಟನ್‌ ಫ್ರೀಡ್‌ ಮನ್‌. 1960ರಲ್ಲಿ ಅವರು ‘ದಿ ಆಪ್ಟಿಮಮ್‌ ಕ್ವಾಂಟಿಟಿ ಆಫ್ ಮನಿ’ ಎಂಬ ಪ್ರಬಂಧವೊಂದನ್ನು ಮಂಡಿಸಿದ್ದರು. ಅದರಲ್ಲಿ ಅವರು ಮೊತ್ತ ಮೊದಲ ಬಾರಿಗೆ ‘ಹೆಲಿಕಾಪ್ಟರ್‌ ಮನಿ’ಯ ಕಾನ್ಸೆಪ್ಟನ್ನು ಹೊರಜಗತ್ತಿಗೆ ಪರಿಚಯಿಸಿದ್ದರು.

ಇಲ್ಲಿಯವರೆಗೂ ಅದನ್ನು ಅಸಾಂಪ್ರದಾಯಿಕ ವಿಧಾನ ಎಂದೇ ಕರೆಯಲಾಗಿದೆ. ಯಾವುದೇ ಉದ್ಯಮ ಕ್ಷೇತ್ರ ಆರ್ಥಿಕ ಸಂಕಷ್ಟ ಎದುರಿಸಿದಾಗ ಸರಕಾರ ಅದರ ಪುನಶ್ಚೇತನಕ್ಕಾಗಿ ಉತ್ತೇಜನ ಫ‌ಂಡ್‌ ಅನ್ನು ಪ್ಯಾಕೇಜ್‌ ರೂಪದಲ್ಲಿ ಬಿಡುಗಡೆಗೊಳಿಸುತ್ತದೆ (ಸ್ಟಿಮ್ಯುಲಸ್‌ ಪ್ಯಾಕೇಜ್). ಹೆಲಿಕಾಪ್ಟರ್‌ ಮನಿ ಕೂಡಾ ಅದೇ ರೀತಿ ಆರ್ಥಿಕ ಪುನಶ್ಚೇತನಕ್ಕಾಗಿ ನಾಗರಿಕರಿಗೆ ಹಣ ಬಿಡುಗಡೆಗೊಳಿಸುವ ಪ್ರಕ್ರಿಯೆ.

ಮಿಲ್ಟನ್‌ ಥಿಯರಿ ಪ್ರಕಾರ
ದೇಶವೊಂದಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾದಾಗ ಜನರ ಕೈಯಲ್ಲಿ ಹಣವೂ ಇರುವುದಿಲ್ಲ. ಆಗ ಅವರು ಖರೀದಿಸುವುದನ್ನು ಕಡಿಮೆ ಮಾಡುತ್ತಾರೆ. ಆಗ ಬೇಡಿಕೆ ತಾನಾಗಿಯೇ ಕುಗ್ಗುತ್ತದೆ. ಆಗ ಕಾರ್ಖಾನೆಗಳು ತಮ್ಮ ಉತ್ಪಾದನೆಯ ಸಾಮರ್ಥ್ಯವನ್ನು ಇಳಿಸುವವು. ಇದರಿಂದ ಇನ್ನಷ್ಟು ಉದ್ಯೋಗ ನಷ್ಟ ಸಂಭವಿಸುತ್ತದೆ. ಇದರಿಂದಾಗಿ ಒಟ್ಟಾರೆ ದೇಶೀಯ ಉತ್ಪನ್ನವು ನೆಗೆಟಿವ್‌ ಆಗ‌ಬಹುದು.

ಆರ್ಥಿಕತೆಯನ್ನು ಕುಸಿತದಿಂದ ತಡೆಯಲು ಹಲವಾರು ಮಾರ್ಗಗಳಿವೆ. ದೇಶದ ಆರ್ಥಿಕತೆ ಯಾವ ಹಂತದಲ್ಲಿದೆ ಎನ್ನುವುದರ ಆಧಾರದ ಮೇಲೆ ರಕ್ಷಣಾ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಹೆಲಿಕಾಪ್ಟರ್‌ ಮನಿ ಎನ್ನುವುದು ನಿಜಕ್ಕೂ ಅಸಂಪ್ರದಾಯಿಕ ವಿತ್ತೀಯ ನೀತಿಯಾಗಿದೆ.

ಈ ಅರ್ಥಶಾಸ್ತ್ರದ ಪರಿಕಲ್ಪನೆಯ ಪ್ರಕಾರ, ಕ್ಲಿಷ್ಟ ಸಮಯದಲ್ಲಿ ದೇಶವೊಂದರ ಸೆಂಟ್ರಲ್‌ ಬ್ಯಾಂಕ್‌ ದೊಡ್ಡ ಮೊತ್ತದ ಹಣವನ್ನು ಪ್ರಿಂಟ್‌ ಮಾಡಬೇಕು. ಮುದ್ರಿತವಾದ ಹಣವನ್ನು ಸೆಂಟ್ರಲ್‌ ಬ್ಯಾಂಕ್‌ ಉಚಿತವಾಗಿ ಸರಕಾರಕ್ಕೆ ನೀಡಬೇಕು. ಸರಕಾರ ಅದನ್ನು ಜನರಿಗೆ ತಲುಪಿಸುವ ವ್ಯವಸ್ಥೆ ರೂಪಿಸುತ್ತದೆ. ಜನರು ಈ ಹಣವನ್ನು ವಾಪಸ್‌ ಕೊಡಬೇಕೆಂದಿಲ್ಲ. ಒಂದೇ ಷರತ್ತು ಎಂದರೆ ಜನರು ಈ ಹಣವನ್ನು ಉಳಿಸಿಕೊಳ್ಳದೆ ಖರ್ಚು ಮಾಡಬೇಕು.

ತಜ್ಞರಲ್ಲಿ ಸಹಮತವಿಲ್ಲ
ಹೆಲಿಕಾಪ್ಟರ್‌ ಮನಿ ವಿಷಯದಲ್ಲಿ ಪರಿಣತರಲ್ಲಿ ಸಹಮತವಿಲ್ಲ. ಆಪತ್ಕಾಲದಲ್ಲಿ ಜನಕ್ಕೆ ಹೆಚ್ಚು ಹಣ ಕೊಟ್ಟರೆ ಅವರು ಹೆಚ್ಚು ಖರ್ಚು ಮಾಡುತ್ತಾರೆ ಎನ್ನುವುದೇ ತಪ್ಪು ಯೋಚನೆ ಎನ್ನುತ್ತಾರೆ ಹಾರ್ವರ್ಡ್‌ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ| ಜಾನ್‌ ಡಿನೋ.

‘ಸಾಮಾನ್ಯವಾಗಿ, ಯುದ್ಧ ಅಥವಾ ಆರ್ಥಿಕ ಬಿಕ್ಕಟ್ಟು ಎದುರಾದಾಗ ಜನರಲ್ಲಿ ಹಣವನ್ನು ಖರ್ಚು ಮಾಡುವುದಕ್ಕಿಂತ ಉಳಿಸುವುದಕ್ಕೆ, ಭವಿಷ್ಯದ ಭದ್ರತೆಗಾಗಿ ಕೂಡಿಡುವ ಮನೋಭಾವ ಅಧಿಕವಿರುತ್ತದೆ’ ಎಂದೂ ಹೇಳುವ ಜಾನ್‌ ಡಿನೋ, ‘ಸರಕಾರಗಳು ಏಕಾಏಕಿ ಅಧಿಕ ಪ್ರಮಾಣದ ಹಣವನ್ನು ಹಂಚುವುದರಿಂದಾಗಿ, ಲಾಭಕ್ಕಿಂತ ನಷ್ಟವಾದ ಉದಾಹರಣೆಗಳೇ ಅಧಿಕವಿವೆ. ಹಣದ ಮೌಲ್ಯವೇ ಕುಸಿಯುವ ಹಾಗೂ ಹಣದುಬ್ಬರ ಅಧಿಕವಾಗುವ ಅಪಾಯವಿರುತ್ತದೆ. ಎಂದು ಎಚ್ಚರಿಸುತ್ತಾರೆ.

ಮನೋವಿಜ್ಞಾನದ ಆಧಾರವಿದೆಯೇ?
ಸಾಲವು ಕಡಿಮೆ ಬಡ್ಡಿಯದೇ ಇರಬಹುದು ಆದರೆ ಅದನ್ನು ಇಂದಲ್ಲ ನಾಳೆ ಯಾರ ಬಳಿ ಸಾಲ ಪಡೆದಿದ್ದೇವೋ ಅವರಿಗೆ ಹಿಂದಿರುಗಿಸಲೇಬೇಕು. ಹೀಗಾಗಿ ಆ ಹಣವನ್ನು ಸಲೀಸಾಗಿ ಖರ್ಚುಮಾಡುವುದಿಲ್ಲ. ಸ್ವಂತ ಹಣವನ್ನು ಜನರು ಅಷ್ಟು ಸುಲಭವಾಗಿ ಬಿಚ್ಚುವುದಿಲ್ಲ ಎನ್ನುತ್ತಾರಲ್ಲ ಹಾಗೆ.

ಅದೇ ಉಚಿತವಾಗಿ ಕೊಟ್ಟ ಹಣವನ್ನು ಜನರು ಖರ್ಚು ಮಾಡಲು ಯೋಚಿಸುವುದಿಲ್ಲ ಎನ್ನುವುದು ಹೆಲಿಕಾಪ್ಟರ್‌ ಮನಿ ಕಾನ್ಸೆಪ್ಟ್ ಹಿಂದಿರುವ ವಿಚಾರ. ಒಂದೇ ಮಾತಿನಲ್ಲಿ ಹೇಳಬಹುದಾದರೆ ಹೆಲಿಕಾಪ್ಟರ್‌ ಮನಿ ಎನ್ನುವುದು ಮಾರ್ಕೆಟ್‌ನಲ್ಲಿ ಹಣ ಓಡಾಡುತ್ತಿರುವಂತೆ ಮಾಡುವ ಒಂದು ವಿಧಾನ.

ಸೈಡ್‌ ಎಫೆಕ್ಟ್
ಹೆಲಿಕಾಪ್ಟರ್‌ ಮನಿ ಅಸಾಂಪ್ರದಾಯಿಕ ವಿಧಾನ. ಇದನ್ನು ಅಳವಡಿಸಿಕೊಳ್ಳುವುದರಿಂದ ಅಡ್ಡಪರಿಣಾಮಗಳೂ ಉಂಟಾಗಬಹುದು. ಅವು ಯಾವುವು ಎಂದರೆ ಅಧಿಕ ಹಣದುಬ್ಬರ (ಹೈಪರ್‌ ಇನ್‌ಫ್ಲೇಷನ್‌) ಮತ್ತು ಕರೆನ್ಸಿ ಮೌಲ್ಯ ಕುಸಿತ.  ಹೈಪರ್‌ ಇನ್‌ಫ್ಲೇಷನ್‌  ಎಂದರೆ ನಿಯಂತ್ರಣಕ್ಕೆ ಸಿಗದಂತೆ ವಸ್ತುಗಳ ಬೆಲೆಯಲ್ಲಿ ಏರಿಕೆ. ಕರೆನ್ಸಿ  ಮೌಲ್ಯ ಕುಸಿತ  ಎಂದರೆ ಕರೆನ್ಸಿಯ ಕೊಳ್ಳುವ ಸಾಮರ್ಥ್ಯದಲ್ಲಿ ಇಳಿಕೆ.

ಉದಾಹರಣೆಗೆ ಒಂದು ಡಾಲರ್‌ ಭಾರತದ 76 ರೂ. ಗೆ ಸಮ. ಅದೇ ಜಿಂಬಾಬ್ವೆ ಕರೆನ್ಸಿಯ ಮೌಲ್ಯ ಎಷ್ಟು ಕುಸಿದಿದೆಯೆಂದರೆ ಅಮೆರಿಕದ 40 ಪೈಸೆ (ಸೆಂಟ್ಸ್‌), ಜಿಂಬಾಬ್ವೆಯ 100 ಟ್ರಿಲಿಯನ್‌  ಡಾಲರ್‌ಗೆ ಸಮ (ಒಂದರ ಮುಂದೆ 12 ಸೊನ್ನೆ!). ಇದು ಹೈಪರ್‌ ಇನ್‌ಫ್ಲೇಷನ್‌ ಫ‌ಲ.

2016ರಲ್ಲಿ ಜಪಾನ್‌ ದೇಶದ ಆರ್ಥಿಕತೆ ಅಭಿವೃದ್ಧಿ ಕಾಣದೇ ಹೋದಾಗ ಸರಕಾರ ಹೆಲಿಕಾಪ್ಟರ್‌ ಮನಿ ಮಾರ್ಗಕ್ಕೆ ಮೊರೆ ಹೋಗಲು ಯೋಚಿಸಿತ್ತು. ಆದರೆ ಅಲ್ಲಿನ ಉದ್ಯಮ ಪರಿಣತರು ಅದರಿಂದಾಗಿ  ಅಧಿಕ ಹಣದುಬ್ಬರ ಉಂಟಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದಾಗಿ ಅಲ್ಲಿನ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು.

ಖರೀದಿ ಸಾಮರ್ಥ್ಯ ಹೆಚ್ಚಿಸುವುದು
ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವುದೇ ಆರ್ಥಿಕತೆಯನ್ನು ಮೇಲೆತ್ತುವ ಉತ್ತಮ ಮಾರ್ಗ. ಅದಕ್ಕಾಗಿ ಆಯಾ ದೇಶಗಳ ಸೆಂಟ್ರಲ್‌ ಬ್ಯಾಂಕು ಮೊದಲಿಗೆ ಹಲವು ಮಾರ್ಗಗಳನ್ನು ಅನುಸರಿಸುತ್ತವೆ. ಸಾಲದ ಬಡ್ಡಿ ಪ್ರಮಾಣವನ್ನು ಇಳಿಸುವ ಮೂಲಕ ಜನರ ಹೆಚ್ಚು ಸಾಲ ಪಡೆಯಲು ಪ್ರೋತ್ಸಾಹಿಸುವುದು, ಅದೂ ಆಗಲಿಲ್ಲವೆಂದರೆ ಬಡ್ಡಿ ದರವನ್ನು ಝೀರೊ ಪರ್ಸೆಂಟ್‌ಗೆ ತರುವುದು (ಕೆಲ ದೇಶಗಳಲ್ಲಿ ರೆಪೊ ರೇಟ್‌ ಸೊನ್ನೆ ಶೇಕಡ ಇದೆ).

ಅಲ್ಲದೆ ಮಾರುಕಟ್ಟೆಯಲ್ಲಿ ಬ್ಯಾಂಕು ಬಾಂಡ್‌ ಗಳನ್ನು ಖರೀದಿಸಿ (ಕ್ವಾಂಟಿಟೇಟಿವ್‌ ಈಸಿಂಗ್‌) ಅದಕ್ಕೆ ಪ್ರತಿಯಾಗಿ ಸರಕಾರಕ್ಕೆ ಹಣವನ್ನು ನೀಡುವುದು. ಇವೆಲ್ಲಾ ಮಾರ್ಗಗಳನ್ನು ಕೈಗೊಳ್ಳಬಹುದು. ಒಟ್ಟಿನಲ್ಲಿ ಹಣದ ಹರಿವನ್ನು ಹೆಚ್ಚಿಸಬೇಕೆನ್ನುವುದು ಇವೆಲ್ಲದರ ಉದ್ದೇಶ. ಈ ಸಾಂಪ್ರದಾಯಿಕ ಮಾರ್ಗಗಳು ಯಾವುವೂ ಫ‌ಲ ನೀಡದೇ ಹೋದಾಗ ಕಡೆಯಲ್ಲಿ ಕೈಗೊಳ್ಳಬಹುದಾದ ಮಾರ್ಗಗಳಲ್ಲಿ ಹೆಲಿಕಾಪ್ಟರ್‌ ಮನಿಯೂ ಒಂದು.

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.