ಮುಚ್ಚಿದ ಖಾತೆಗಳ ವಿವರ ಮೊದಲ ಕಂತಿನಲ್ಲಿ?

Team Udayavani, Sep 9, 2019, 5:18 AM IST

ಹೊಸದಿಲ್ಲಿ:ಸ್ವಿಸ್‌ ಬ್ಯಾಂಕ್‌ನಿಂದ ಭಾರತೀಯರ ಬ್ಯಾಂಕ್‌ ಖಾತೆಗಳ ಮೊದಲ ಕಂತಿನ ಮಾಹಿತಿಯಲ್ಲಿ, ತಜ್ಞರ ಪ್ರಕಾರ ಬಹುತೇಕ ಮುಕ್ತಾಯಗೊಂಡಿರುವ ಖಾತೆಗಳ ಮಾಹಿತಿಯೇ ಇರಲಿದೆ.

2016ರಲ್ಲಿ ಭಾರತ ಮತ್ತು ಸ್ವಿಜರ್ಲೆಂಡ್‌ ಮಾಡಿಕೊಂಡ ಒಪ್ಪಂದವು ಈ ವರ್ಷದ ಸೆಪ್ಟಂಬರ್‌ನಿಂದ ಜಾರಿಗೆ ಬಂದಿದೆ. 2018ರ ಖಾತೆಗಳ ವಿವರವನ್ನು ಸ್ವಿಸ್‌ ಹಂಚಿಕೊಳ್ಳಲಿದೆ. ಕಳೆದ ಕೆಲವು ವರ್ಷಗಳಿಂದ ಕಪ್ಪು ಹಣದ ಬಗ್ಗೆ ನಡೆಯುತ್ತಿರುವ ಭಾರಿ ಚರ್ಚೆ ಹಿನ್ನೆಲೆಯಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿ ಇಟ್ಟಿರುವ ಹಣವನ್ನು ಬಹುತೇಕರು ಹಿಂಪಡೆದಿರುವ ಸಾಧ್ಯತೆಯಿದ್ದು, ಇಂತಹ ಖಾತೆಗಳ ಮಾಹಿತಿಯೇ ಇದರಲ್ಲಿ ಇರಲಿದೆ ಎನ್ನಲಾಗಿದೆ.

ಖಾತೆಗಳನ್ನು ಹೊಂದಿರುವವರ ಹೆಸರು, ವಿಳಾಸ, ಖಾತೆಯಲ್ಲಿನ ನಡೆದ ಪ್ರತಿ ವಹಿವಾಟಿನ ವಿವರವನ್ನೂ ಈ ಮಾಹಿತಿ ಒಳಗೊಂಡಿರಲಿದೆ. ಇದರಿಂದ, ತೆರಿಗೆ ಅಧಿಕಾರಿಗಳಿಗೆ ಈ ಮಾಹಿತಿ ಅತ್ಯಂತ ಪ್ರಮುಖವಾಗಿರಲಿದೆ. ಈ ಖಾತೆಗಳನ್ನು ಹೊಂದಿರುವವರ ಜೊತೆಗೆ ರಾಜಕೀಯ ಮುಖಂಡರು ಸಂಪರ್ಕದಲ್ಲಿದ್ದಾರೆಯೇ ಎಂಬುದನ್ನೂ ಅಧಿಕಾರಿಗಳು ವಿಶ್ಲೇಷಿಸಲು ನೆರವಾಗಲಿದೆ. ಕಳೆದ ತಿಂಗಳು ಭಾರತಕ್ಕೆ ಆಗಮಿಸಿದ್ದ ಸ್ವಿಸ್‌ ಅಧಿಕಾರಿಗಳ ನಿಯೋಗವು ಮಾಹಿತಿ ಹಂಚಿಕೆ ಕುರಿತು ಅಂತಿಮ ಸಿದ್ಧತೆಯನ್ನು ಪರಿಶೀಲಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ