Udayavni Special

ದುಬಾರಿಯಾಗುತ್ತಿರುವ ಚಿನ್ನವನ್ನು ನಮ್ಮ ಸಂಪತ್ತನ್ನಾಗಿಸುವುದೇಗೆ?

ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಗಳು ಶೇ. 42ಕ್ಕಿಂತ ಹೆಚ್ಚಾಗಿದೆ. ಆಗಸ್ಟ್‌ 2019ರಂದು ಚಿನ್ನದ ಬೆಲೆ 38,950 ರೂ. ಆಗಿತ್ತು. ಇದೀಗ 10 ಗ್ರಾಂ.ಗೆ 55,500 ರೂ. ಆಗಿದೆ. ಕೊರೊನಾ ಕಾಲದಲ್ಲಿ ಇದೇ ಅನಿಶ್ಚಿತತೆ ಮುಂದುವರಿದರೆ ಅದರ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.

Team Udayavani, Aug 6, 2020, 4:17 PM IST

gold soverign

Representative Image used, ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ.

ಮಣಿಪಾಲ: ಚಿನ್ನದ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಸದ್ಯ ಚಿನ್ನದ ಬೆಲೆ 10 ಗ್ರಾಂ.ಗೆ 55,500 ರೂಪಾಯಿಗಳನ್ನು ದಾಟಿದೆ.

ಇಂತಹ ಕಠಿನ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡುವುದು ಸುಲಭದ ಮಾತಾಗಿಲ್ಲ.

ಅದರಲ್ಲೂ ಬಡ ಮತ್ತು ಮಧ್ಯಮ ವರ್ಗಕ್ಕೆ ಚಿನ್ನ ಕೈಗಟುಕದ ಲೋಹವಾಗಿದೆ. ಆದರೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇದು ಒಂದರ್ಥದಲ್ಲಿ ಪ್ರಸಕ್ತ ಸಮಯವಾಗಿದೆ. ಅಂದರೆ ಮಾರುಕಟ್ಟೆ ಬೆಲೆಗಿಂತ ಅಗ್ಗದ ದರದಲ್ಲಿ ಚಿನ್ನವನ್ನು ಖರೀದಿಸಲು ಸರಕಾರ ಅವಕಾಶ ನೀಡುತ್ತಿದೆ.

ಹೌದು. ಸಾವರೀನ್‌ ಗೋಲ್ಡ್‌ ಬಾಂಡ್‌ ಯೋಜನೆಯಡಿ ಆಗಸ್ಟ್‌ 7ರ ವರೆಗೆ, 10 ಗ್ರಾಂ. ಗೆ 53,340 ರೂ. ಪಾವತಿಸಿ ಚಿನ್ನ ಖರೀದಿಸಬಹುದಾಗಿದೆ. ಅಂದರೆ ಈಗಿನ ಮಾರುಕಟ್ಟೆ ಈ ಬೆಲೆಗಿಂತ 2,160 ರೂ.ಗಳು ಕಡಿಮೆ. ಈ ಅವಕಾಶ ಪ್ರಸ್ತುತ ಕೋವಿಡ್‌ನ‌ಂತಹ ಪರಿಸ್ಥಿತಿಯಲ್ಲಿ ತುಂಬಾ ಪ್ರಯೋಜಕಾರಿಯಾಗಿದೆ.

ಏನಿದು ಬಾಂಡ್‌?
ಸಾರ್ವಭೌಮ ಗೋಲ್ಡ್ ಅಥವ ಸಾವರೀನ್‌ ಗೋಲ್ಡ್‌ ಬಾಂಡ್‌ ಸರಕಾರದ ಬಾಂಡ್‌ ಆಗಿದೆ. ಇದನ್ನು ಡಿಮ್ಯಾಟ್‌ ರೂಪದಲ್ಲಿ ಪರಿವರ್ತಿಸಬಹುದಾಗಿದೆ. ಇದರ ಮೌಲ್ಯವನ್ನು ರೂಪಾಯಿ ಅಥವಾ ಡಾಲರ್‌ಗಳ ಮುಖಬೆಲೆಯಲ್ಲಿ ಅಳೆಯಲಾಗುವುದಿಲ್ಲ. ಬದಲಾಗಿದೆ ಚಿನ್ನದ ಮಾರುಕಟ್ಟೆಯ ಮೂಲಕ ದರ ನಿಗದಿ ಪಡಿಸಲಾಗುತ್ತದೆ. ಬಾಂಡ್‌ 5 ಗ್ರಾಂ. ಚಿನ್ನದ್ದಾದ್ದರೆ, ಐದು ಗ್ರಾಂ ಚಿನ್ನದ ಬೆಲೆ ಬಾಂಡ್‌ ಬೆಲೆಗೆ ಸಮನಾಗಿರುತ್ತದೆ. ಸಾವರೀನ್‌ ಗೋಲ್ಡ್‌ ಬಾಂಡ್‌ಗಳನ್ನು ಸೆಬಿ (SEBI) ಡೀಲರ್‌ಗಳ ಮೂಲಕ ಖರೀದಿಸಬೇಕು. ಬಾಂಡ್‌ ಅನ್ನು ರಿಡೀಮ್‌ ಮಾಡುವ ಸಮಯದಲ್ಲಿ ಹಣವನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಬಾಂಡ್‌ ಅನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನೀಡುತ್ತದೆ.

ಎಂಸಿಎಕ್ಸ್‌ ಪ್ರಕಾರ, ಆಗಸ್ಟ್‌ 6ರಂದು ಚಿನ್ನದ ದರವು 10 ಗ್ರಾಂ.ಗೆ 55,500 ರೂ. ದಾಟುವ ಸಾಧ್ಯತೆ ಇದೆ. ಅದರ ಅನ್ವಯ 1 ಗ್ರಾಂ. ಚಿನ್ನದ ಬೆಲೆ 5,550 ರೂ. ಆಗಲಿದ್ದು, ಸಾವರೀನ್‌ ಗೋಲ್ಡ್‌ ಬಾಂಡ್‌ ಯೋಜನೆಯಡಿಯಲ್ಲಿ ಪ್ರತಿ ಗ್ರಾಂ.ಗೆ 5,334 ರೂ. ಎಂದು ನಿಗದಿಪಡಿಸಲಾಗಿದೆ. ಅಂದರೆ ಪ್ರತಿ ಗ್ರಾಂ.ಗೆ 216 ರೂ. ಕಡಿಮೆ ಪಾವತಿಸಬೇಕಾಗುತ್ತದೆ.

ಶೇ. 4ರ ಮರುಪಾವತಿ ಇದೆ
ಆಗಸ್ಟ್‌ 3ರಿಂದ ಆಗಸ್ಟ್‌ 7ರ ವರೆಗೆ ನಡೆಯಲಿರುವ ಸಾವರೀನ್‌ ಗೋಲ್ಡ್‌ಬಾಂಡ್‌ಗಳ ಮಾರಾಟವನ್ನು ಆರ್‌ಬಿಐ ಪ್ರಾರಂಭಿಸಲಿದೆ. ಇದರನ್ವಯ ಕೇವಲ 3 ದಿನಗಳಲ್ಲಿ ಶೇ. 4ರ ಲಾಭವನ್ನು ನೀಡಲಿದೆ. ಸ್ಥಿರ ಠೇವಣಿಗಳ ಮೇಲೆ ಒಂದು ವರ್ಷದಲ್ಲಿ ಇದರ ಲಾಭ ದೊರೆಯಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಮತ್ತು ಡಿಜಿಟಲ್‌ ಪಾವತಿ ಮೂಲಕ ಪಾವತಿಸುವವರು ಪ್ರತಿ ಗ್ರಾಂ.ಗೆ 50 ರೂಪಾಯಿ ರಿಯಾಯಿತಿ ಪಡೆಯಲಿದ್ದಾರೆ.

ಶೇ. 2.50 ಬಡ್ಡಿ
ಸಾವರೀನ್‌ ಗೋಲ್ಡ್‌ ಬಾಂಡ್‌ಗಳು ಪ್ರತಿವರ್ಷ ಶೇ. 2.50ರಷ್ಟು ಬಡ್ಡಿಯನ್ನು ತಂದುಕೊಡಲಿವೆ. ಈ ಹಣವನ್ನು ಪ್ರತಿ 6 ತಿಂಗಳಿಗೊಮ್ಮೆ ಸ್ವಯಂಚಾಲಿತವಾಗಿ ಖರೀದಿದಾರನ ಖಾತೆಗೆ ಜಮಾ ಮಾಡಲಾಗುತ್ತದೆ. ಸದ್ಯಕ್ಕೆ ಇಂತಹ ಲಾಭ ಬೇರೆಯಾವುದೇ ಬಾಂಡ್‌ ಯೋಜನೆಗಳಲ್ಲಿ ಇಲ್ಲ. ಎನ್‌ಎಸ್‌ಇ ಮಾಹಿತಿಯ ಪ್ರಕಾರ, 8 ವರ್ಷಗಳ ಮುಕ್ತಾಯದ ಅವಧಿಯ ಬಳಿಕ ಸಾವರೀನ್‌ ಗೋಲ್ಡ್‌ ಬಾಂಡ್‌ಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಅಲ್ಲದೆ ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸುವ ಬಡ್ಡಿಗೆ ಯಾವುದೇ ಟಿಡಿಎಸ್‌ ಇರುವುದಿಲ್ಲ.

ಎಷ್ಟು ಚಿನ್ನವನ್ನು ಖರೀದಿಸಬಹುದು?
ಒಬ್ಬ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ ಕನಿಷ್ಠ 1 ಗ್ರಾಂ. ಮತ್ತು ಗರಿಷ್ಠ 4 ಕೆ.ಜಿ.ಯ ಬಾಂಡ್‌ಗಳನ್ನು ಖರೀದಿಸಬಹುದು. ಆದರೆ ಒಂದು ಟ್ರಸ್ಟ್‌ ಅಥವ ಸಂಸ್ಥೆ ಪ್ರತಿವರ್ಷ ಗರಿಷ್ಠ 20 ಕೆ.ಜಿ. ಬಾಂಡ್‌ಗಳನ್ನು ಖರೀದಿಸಬಹುದಾಗಿದೆ. ಇದು 8 ತಿಂಗಳ ಅವಧಿಯನ್ನು ಹೊಂದಿದೆ. ಆದರೆ ಹೂಡಿಕೆದಾರ 5 ವರ್ಷಗಳ ಬಳಿಕ ಅಥವ 3 ವರ್ಷದ ಮೊದಲೇ ನಿರ್ಗಮಿಸಬಹುದಾಗಿದೆ. ಅಂತಹ ಸಂದರ್ಭದಲ್ಲಿ ಅದನ್ನು ನಗದು ರೂಪದಲ್ಲಿ ಪಡೆದುಕೊಳ್ಳಬಹುದು. ಎನ್‌ಎಸ್‌ಇ ಪ್ರಕಾರ, ಸಾವರೀನ್‌ ಗೋಲ್ಡ್‌ ಬಾಂಡ್‌ಗಳನ್ನು ಬ್ಯಾಂಕ್‌ ಸಾಲ ತೆಗೆದುಕೊಳ್ಳುವ ಸಂದರ್ಭ ಆಸ್ತಿಯ ರೂಪದಲ್ಲಿ ಬಳಸಬಹುದು.

ಶೇ. 42ರಷ್ಟು ಆದಾಯ
ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಗಳು ಶೇ. 42ಕ್ಕಿಂತ ಹೆಚ್ಚಾಗಿದೆ. ಆಗಸ್ಟ್‌ 2019ರಂದು ಚಿನ್ನದ ಬೆಲೆ 38,950 ರೂ. ಆಗಿತ್ತು. ಇದೀಗ 10 ಗ್ರಾಂ.ಗೆ 55,500 ರೂ. ಆಗಿದೆ. ಕೊರೊನಾ ಕಾಲದಲ್ಲಿ ಇದೇ ಅನಿಶ್ಚಿತತೆ ಮುಂದುವರಿದರೆ ಅದರ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Capitals-01

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ  ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ ಪತ್ತೆ

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

ಪೃಥ್ವಿ ಶಾ ಅರ್ಧ ಶತಕ: ಚೆನೈಗೆ ಗೆಲುವಿಗೆ 176 ರನ್ ಗಳ ಗುರಿ 

ಪೃಥ್ವಿ ಶಾ ಅರ್ಧ ಶತಕದಾಟ: ಚೆನೈಗೆ ಗೆಲುವಿಗೆ 176 ರನ್ ಗಳ ಗುರಿ! 

ಡ್ರಗ್ಸ್‌ ಪ್ರಕರಣ : ನಾಳೆಯಾದರೂ ಸಿಸಿಬಿ ಪೋಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆಯೇ ಅನುಶ್ರೀ

ಡ್ರಗ್ಸ್‌ ಪ್ರಕರಣ : ನಾಳೆಯಾದರೂ ಸಿಸಿಬಿ ಪೋಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆಯೇ ಅನುಶ್ರೀ?

ಮೂಡುಬಿದಿರೆ : ವಾಲ್ಪಾಡಿ ಪಂಚಾಯತ್ ಕಟ್ಟಡಕ್ಕೆ ಬೆಂಕಿ ಅಪಾರ ನಷ್ಟ

ಮೂಡುಬಿದಿರೆ : ವಾಲ್ಪಾಡಿ ಪಂಚಾಯತ್ ಕಟ್ಟಡಕ್ಕೆ ಬೆಂಕಿ ಅಪಾರ ನಷ್ಟ

instagram

ಎಚ್ಚರ…ನಿಮ್ಮ Insta ಅಕೌಂಟ್ ಹ್ಯಾಕ್ ಆಗಬಹುದು ! ಹೇಗಂತೀರಾ ? ಇದನ್ನು ಓದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ

ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ

ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ

ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ: ಅ.28 ರಿಂದ ನ. 7ವರಗೆ 3 ಹಂತದಲ್ಲಿ ಮತದಾನ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

MUST WATCH

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣಹೊಸ ಸೇರ್ಪಡೆ

Capitals-01

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್

63

ಹೆಣ್ಣೊಬ್ಬಳ ಕಾನೂನು ಹೋರಾಟದ ಕಥನ ಲಾ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ  ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ ಪತ್ತೆ

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

book talk 8

ಸಂಧ್ಯಾರಾಗದೊಳಗೆ ತಾಳ್ಮೆಯ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.