ಕಿಯಾ ಮೋಟಾರ್ ಈಗ ದೇಶದ 5ನೇ ಅತಿದೊಡ್ಡ ವಾಹನ ತಯಾರಕ ಕಂಪನಿ

ಅಕ್ಟೋಬರ್‌ ತಿಂಗಳಲ್ಲಿ 26,840 ಕಾರು ಮಾರಾಟ

Team Udayavani, Nov 5, 2019, 7:48 PM IST

ಮುಂಬಯಿ: ವಿಶ್ವದ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಕಿಯಾ ಮೋಟಾರ್ ಕಳೆದ ಎರಡು ತಿಂಗಳಲ್ಲಿ ದಾಖಲೆ ಮಟ್ಟದ ವಹಿವಾಟು ನಡೆಸುವ ಮೂಲಕ ಭಾರತದ ಐದನೇ ಅತಿದೊಡ್ಡ ವಾಹನ ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಿಯಾ ಆಗಸ್ಟ್‌ ತಿಂಗಳಿನಲ್ಲಿ ಮಧ್ಯಮ ಶ್ರೇಣಿಯ ಕಿಯಾ ಸೆಲ್ಟೋಸ್‌ ಎಸ್‌ಯುವಿ ಕಾರನ್ನು ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಬಿಡುಗಡೆಯಾದ ದಿನದಿಂದಲೂ ವಾಹನದ ಕುರಿತು ಉತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದು, ಕಳೆದ ಎರಡು ತಿಂಗಳಿನಲ್ಲಿ ಅಧಿಕ ಸಂಖ್ಯೆಯ ವಾಹನ ಮಾರಾಟವಾಗಿದೆ ಎಂದು ಕಂಪನಿ ತಿಳಿಸಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಕಂಪನಿಯು ಒಟ್ಟು 26,840 ಸೆಲ್ಟೋಸ್‌ ಕಾರುಗಳನ್ನು ಮಾರಾಟ ಮಾಡಿದ್ದು, ಹಬ್ಬದ ಹಿನ್ನಲೆ ಆಫ‌ರ್‌ಗಳನ್ನು ನೀಡಿದ್ದರ ಪರಿಣಾಮ 12,859 ಕಾರುಗಳ ಮಾರಾಟವಾಗಿದೆ ಎಂದು ಕಂಪೆನಿ ಹೇಳಿದೆ.

ದೇಶದ ಮಾರುಕಟ್ಟೆಯಲ್ಲಿ ಈಗಾಗಲೇ 60 ಸಾವಿರಕ್ಕೂ ಹೆಚ್ಚು ಕಿಯಾ ಮೋಟಾರ್ಸ್‌ನ ಸೆಲ್ಟೋಸ್‌ ಕಾರುಗಳು ಬುಕ್‌ ಆಗಿದ್ದು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಶಾಖೆಗಳನ್ನು ವಿಸ್ತರಣೆ ಮಾಡುತ್ತೇವೆ ಎಂದು ಅದು ಹೇಳಿದೆ.

ಹೆಸರಾಂತ ಕಂಪನಿಗಳಾದ ಫೋರ್ಡ್‌, ವೋಕ್ಸ್‌ವ್ಯಾಗನ್‌, ನಿಸ್ಸಾನ್‌ ಮತ್ತು ರೆನೋಗೆ ಹೋಲಿಸಿದರೆ, ಕಿಯಾ ಕಾರುಗಳು ಎರಡು ತಿಂಗಳಲ್ಲಿ ಉತ್ತಮ ಮಾರಾಟ ಕಂಡಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ