ಈ ರಾಜ್ಯದಲ್ಲಿ ಡಿ.8ರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ರೆ ಪೆಟ್ರೋಲ್ ಇಲ್ಲ!
ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿರುವುದಾಗಿ ವರದಿ ಹೇಳಿದೆ.
Team Udayavani, Dec 5, 2020, 4:20 PM IST
ಕೋಲ್ಕತಾ:ಡಿಸೆಂಬರ್ 8ರಿಂದ ಒಂದು ವೇಳೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇದ್ದರೆ ಪೆಟ್ರೋಲ್ ಬಂಕ್ ನಲ್ಲಿ ಅವರಿಗೆ ಪೆಟ್ರೋಲ್ ಇಲ್ಲ…ಇದು ಕೋಲ್ಕತಾ ಪೊಲೀಸರು ನೂತನವಾಗಿ ಜಾರಿಗೆ ತಂದ ಆದೇಶವಾಗಿದೆ ಎಂದು ವರದಿ ತಿಳಿಸಿದೆ.
ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೋಲ್ಕತಾ ಪೊಲೀಸ್ ಕಮಿಷನರ್ ಅಂಜು ಶರ್ಮಾ ತಿಳಿಸಿದ್ದು, ಒಂದು ವೇಳೆ ದ್ವಿಚಕ್ರ ವಾಹನದ ಹಿಂಬದಿ ಸವಾರ ಕೂಡಾ ಹೆಲ್ಮೆಟ್ ಧರಿಸದೇ ಪೆಟ್ರೋಲ್ ಬಂಕ್ ಗೆ ಆಗಮಿಸಿದರೂ ಕೂಡಾ ಈ ಕಾನೂನು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸದೇ ಯಾವುದೇ ದ್ವಿಚಕ್ರ ವಾಹನ ಸವಾರರು ಕೋಲ್ಕತಾ ಪೊಲೀಸ್ ಸರಹದ್ದಿನೊಳಗಿರುವ ಪೆಟ್ರೋಲ್ ಬಂಕ್ ಗೆ ಆಗಮಿಸಿದಲ್ಲಿ ಅವರಿಗೆ ಪೆಟ್ರೋಲ್ ಇಲ್ಲ. ಅಷ್ಟೇ ಅಲ್ಲ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿರುವುದಾಗಿ ವರದಿ ಹೇಳಿದೆ.
ಈ ಆದೇಶ ಡಿಸೆಂಬರ್ 8ರಿಂದ 2021ರ ಫೆಬ್ರುವರಿ2ರವರೆಗೆ ಜಾರಿಯಲ್ಲಿರಲಿದೆ. ಆರ್ಥಿಕವಾಗಿ ಹೆಲ್ಮೆಟ್ ಖರೀದಿಸಲು ಅಸಾಧ್ಯವಾಗಿರುವವರಿಗೆ ಸರ್ಕಾರವೇ ಹೆಲ್ಮೆಟ್ ನೀಡಲಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಇದನ್ನೂ ಓದಿ:ರೈತರ ಪ್ರತಿಭಟನೆ ಕುರಿತ ಹೇಳಿಕೆ: ಕೆನಡಾ ನೇತೃತ್ವದ ಕೋವಿಡ್ 19 ಸಭೆಗೆ ಭಾರತ ಗೈರು
ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ. ಮಾಸ್ಕ್ ಧರಿಸದಿದ್ದರೆ 2000 ಸಾವಿರ ರೂಪಾಯಿ ದಂಡ ಕಟ್ಟಿ ಎಂದು ಹೇಳುವ ಸರ್ಕಾರದಂತೆ ನಾನು ನಡೆದುಕೊಳ್ಳಲ್ಲ. ಎಲ್ಲರೂ ಮಾಸ್ಕ್ ಧರಿಸಿ ಎಂಬುದಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೆನ್ಸೆಕ್ಸ್ 531 ಅಂಕ ಕುಸಿತ, ನಿಫ್ಟಿ 133 ಅಂಕ ಇಳಿಕೆ ; IT ಕ್ಷೇತ್ರದ ಷೇರುಗಳಿಗೆ ನಷ್ಟ
ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆ
2021ರ ಮಾರ್ಚ್ ನಂತರ 100, 10 ಹಾಗೂ 5 ರೂಪಾಯಿ ನೋಟುಗಳ ಚಲಾವಣೆ ರದ್ದು?: ಆರ್ ಬಿಐ
ರೈಲ್ವೆ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ನಲ್ಲಿ ಶೇ.10ರಷ್ಟು ರಿಯಾಯ್ತಿ, ಏನಿದು ಆಫರ್!
ಗ್ರಾಹಕರ ಗಮನಕ್ಕೆ: ರಾತ್ರಿ 1ರಿಂದ 3ರವರೆಗೆ ಹಣ ವರ್ಗಾವಣೆಗೆ ಯುಪಿಐ ಬಳಸಬೇಡಿ: NPCI