ಮುಂಬಯಿ ಶೇರು 289 ಅಂಕ ಏರಿಕೆ, ನಿಫ್ಟಿ ದಾಖಲೆ ಎತ್ತರಕ್ಕೆ
Team Udayavani, Apr 3, 2017, 4:58 PM IST
ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರ ಹಾಗೂ ಎಪ್ರಿಲ್ ತಿಂಗಳ ಮೊದಲ ದಿನದ ವಹಿವಾಟನ್ನು 289.72 ಅಂಕಗಳ ಭರ್ಜರಿ ಗಳಿಕೆಯೊಂದಿಗೆ 29,910.22 ಅಂಕಗಳ ಮಟ್ಟದಲ್ಲಿ, ಉಜ್ವಲ ಭರವಸೆಯೊಂದಿಗೆ, ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ದಿನದ ವಹಿವಾಟನ್ನು 64.10 ಅಂಕಗಳ ಭರ್ಜರಿ ಏರಿಕೆಯೊಂದಿಗೆ 9,237.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ 2,071 ಶೇರುಗಳು ಮುನ್ನಡೆ ಸಾಧಿಸಿದರೆ 805 ಶೇರುಗಳು ಹಿನ್ನಡೆಗೆ ಗುರಿಯಾದವು. 158 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.
ಇಂದಿನ ವಹಿವಾಟಿನಲ್ಲಿ ರಿಲಯನ್ಸ್, ಲಾರ್ಸನ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ, ಎಸ್ಬಿಐ ಶೇರುಗಳು ಅತ್ಯಂತ ಸಕ್ರಿಯವಾಗಿದ್ದವು.
ಇಂದಿನ ಟಾಪ್ ಗೇನರ್ಗಳು : ಲಾರ್ಸನ್, ಡಾ. ರೆಡ್ಡೀಸ್ ಲ್ಯಾಬ್, ರಿಲಯನ್ಸ್, ಎಚ್ ಡಿ ಎಫ್ ಸಿ. ಟಾಪ್ ಲೂಸರ್ಗಳು : ಭಾರ್ತಿ ಏರ್ಟೆಲ್, ಬಿಪಿಸಿಎಲ್, ವಿಪ್ರೋ, ಇಂಡಸ್ ಇಂಡ್ ಬ್ಯಾಂಕ್, ಇನ್ಫೋಸಿಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market Business: ಷೇರು ವಹಿವಾಟು-ದಕ್ಷಿಣ ಭಾರತ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ!
Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ
Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್
Air India: ಪೈಲಟ್ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್ ಇಂಡಿಯಾ ವಿಮಾನ ಸಂಚಾರ ರದ್ದು
Share Market; ರೇಖಾ ಜುಂಜುನ್ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!