ಮುಂಬೈ ಶೇರುಪೇಟೆ; ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ
Team Udayavani, May 25, 2017, 5:30 PM IST
ಮುಂಬೈ:ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಹಿಂದಿನ ದಾಖಲೆಯನ್ನು ಮುರಿದಿದ್ದು, ಗುರುವಾರ ಸೆನ್ಸೆಕ್ಸ್ 448 ಅಂಕಗಳ ಏರಿಕೆ ಕಾಣುವ ಮೂಲಕ 30, 774ರಲ್ಲಿ ವಹಿವಾಟು ಅಂತ್ಯಕಂಡಿದೆ. ಕೇವಲ ಒಂದೇ ದಿನದಲ್ಲಿ ( ಕಳೆದ 2 ತಿಂಗಳಿನಲ್ಲಿ) ಗರಿಷ್ಠ ದಾಖಲೆಯ ಮಟ್ಟ ತಲುಪಿದಂತಾಗಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡಾ 9,500 ಅಂಕಗಳ ಗಡಿ ರೇಖೆ ಕಾಯ್ದುಕೊಂಡಿದೆ. ದಿನದ ವಹಿವಾಟಿನ ಮಧ್ಯಂತರದಲ್ಲಿ ಸೆನ್ಸೆಕ್ಸ್ ಸೂಚ್ಯಂಕ 30,793 ಅಂಕಗಳ ಗಟಿ ದಾಟಿ ಏರಿಕೆ ಕಾಣುವ ಮೂಲಕ ಮೇ 19ರ( 30,712.35) ದಾಖಲೆಯನ್ನು ಹಿಂದಿಕ್ಕಿತ್ತು.
ದಿನದ ಅಂತ್ಯದ ವಹಿವಾಟಿನಲ್ಲಿಯೂ 448 ಅಂಕಗಳೊಂದಿಗೆ 30, 774.03ರಲ್ಲಿ ವಹಿವಾಟು ಅಂತ್ಯಕಂಡಿದೆ. ಇದು ಮೇ 17ರ ದಿನದ ಅಂತ್ಯದ ವಹಿವಾಟಿನ ದಾಖಲೆ ಮುರಿದಿದೆ. ಮೇ 17ರಂದು 30,658.77ರಲ್ಲಿ ವಹಿವಾಟು ಅಂತ್ಯ ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್