
2024ಕ್ಕೆ ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷ: 1ಲಕ್ಷ ಆರ್‌ಎಸ್‌ಎಸ್ ಶಾಖೆ ಹೊಂದುವ ಗುರಿ
Team Udayavani, Feb 22, 2023, 7:32 AM IST

ಹೊಸದಿಲ್ಲಿ: 2024ರ ಅಂತ್ಯಕ್ಕೆ ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಒಂದು ಲಕ್ಷ ಶಾಖೆಗಳನ್ನು ಹೊಂದುವ ಗುರಿಯನ್ನು ಸಂಘ ಹೊಂದಿದೆ.
“ಪ್ರಸ್ತುತ 60,000 ಸ್ಥಳಗಳಲ್ಲಿ 85,000ಕ್ಕೂ ಹೆಚ್ಚು ಆರ್‌ಎಸ್‌ಎಸ್ ಶಾಖೆಗಳಿವೆ. 2024ರಲ್ಲಿ ಸಂಘವು ಶತಮಾನೋತ್ಸವ ಆಚರಿಸಲಿದೆ. 2025ರ ವೇಳೆಗೆ ಶಾಖೆಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಈಗಾಗಲೇ 3 ವರ್ಷಗಳ ರೂಪುರೇಷೆ ಸಿದ್ಧವಾಗಿದ್ದು, ಅದರಂತೆ ಯೋಜನೆಗಳು ಜಾರಿಯಲ್ಲಿವೆ’ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
“ಸದ್ಯ ದೇಶದ ಶೇ.50ರಷ್ಟು ಮಂಡಲಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳಿವೆ. ಇದನ್ನು ಎಲ್ಲ ಮಂಡಲಗಳಿಗೂ ವಿಸ್ತರಿಸುವ ಯೋಜನೆಯಿದೆ. ಶತಮಾನೋತ್ಸವ ಸಮಾರಂಭವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ‘ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
