ಉಧಾಂಪುರ: ಮೆಟಾಡರ್ ಪಲ್ಟಿಯಾಗಿ 26 ಮಂದಿಗೆ ಗಾಯ
Team Udayavani, Jan 20, 2018, 5:41 PM IST
ಜಮ್ಮು : ಜಮ್ಮು ಕಾಶ್ಮೀರದ ಉಧಾಂಪುರ ಜಿಲ್ಲೆಯಲ್ಲಿಂದು ಮೆಟಾಡರ್ ವಾಹನವೊಂದು ಮಗುಚಿ ಬಿದ್ದ ಪರಿಣಾಮ 26 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ಮೆಟಾಡರ್ ವಾಹನ ಜನರನ್ನು ತುಂಬಿಕೊಂಡು ಮಜಾಲ್ತಾ ಕಡೆಗೆ ಹೋಗುತ್ತಿತ್ತು. ಗಾಯಾಳುಗಳನ್ನು ತತ್ಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು.