ತಮಿಳುನಾಡಿಗೆ 31.24 ಟಿಎಂಸಿ ಕಾವೇರಿ ನೀರು?
Team Udayavani, Jun 12, 2020, 5:53 AM IST
ಚೆನ್ನೈ/ನವದೆಹಲಿ: ತಮಿಳುನಾಡಿಗೆ ಹಾಲಿ ತಿಂಗಳು ಮತ್ತು ಜುಲೈಗೆ ಅನ್ವಯವಾಗುವಂತೆ 31.24 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮೇಕೆದಾಟುವಿನಲ್ಲಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಯೋಜನೆಯ ಬಗ್ಗೆ ತಮಿಳುನಾಡು ಮತ್ತು ಪುದುಚೇರಿ ಸರ್ಕಾರದ ಪ್ರತಿನಿಧಿಗಳು ಪ್ರಬಲ ವಿರೋಧ ವ್ಯಕ್ತಪಡಿಸಿದರು.
ಹೀಗಾಗಿ, ಬುಧವಾರ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರವನ್ನು ಸಭೆಯಲ್ಲಿ ಪರಿಗಣಿಸಲೇ ಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಕೆಲ ದಿನಗಳ ಹಿಂದೆ ಕೇಂದ್ರ ಜಲಶಕ್ತಿ ಖಾತೆ ಸಚಿವಾಲಯಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ದೇಶಾದ್ಯಂತ ಕೋವಿಡ್ 19 ಸ್ಥಿತಿ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ 2018ರಲ್ಲಿ ರಚನೆಗೊಂಡ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಕರ್ನಾಟಕದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಪ್ರಾಧಿಕಾರದ ಸದಸ್ಯ ನವೀನ್ ಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ್ಞಾನವಾಪಿ ಮಸೀದಿ ಸಮೀಕ್ಷೆ ಪ್ರಕರಣ ವಾರಾಣಸಿ ಕೋರ್ಟ್ ಗೆ ವರ್ಗ: ಸುಪ್ರೀಂ ಆದೇಶ
ಹೈದರಾಬಾದ್ ಅತ್ಯಾಚಾರಿಗಳ ಎನ್ ಕೌಂಟರ್ ‘ಪೊಲೀಸರ ಪೂರ್ವಯೋಜಿತ ಕೃತ್ಯ’: ಸುಪ್ರೀಂ ಗೆ ವರದಿ
ಏರ್ ಇಂಡಿಯಾ ವಿಮಾನದ ಎಂಜಿನ್ ಸ್ಥಗಿತ !: ಮುಂಬೈಯಲ್ಲಿ ತುರ್ತು ಭೂಸ್ಪರ್ಶ
ಹಲ್ಲೆ ಪ್ರಕರಣ: ಶರಣಾಗಲು 2 ವಾರಗಳ ಕಾಲಾವಕಾಶ ಕೊಡಿ: ಸುಪ್ರೀಂಕೋರ್ಟ್ ಗೆ ಸಿಧು
ತಮಿಳುನಾಡು: ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ..!