ಗುರ್ಮೀತ್ಗೆ ಪದ್ಮ ಪ್ರಶಸ್ತಿ ಕೊಡಿ: 4,208 ಶಿಫಾರಸು
Team Udayavani, Sep 1, 2017, 7:45 AM IST
ಹೊಸದಿಲ್ಲಿ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸ್ವಘೋಷಿತ ದೇವಮಾನವ ಗುರ್ಮೀತ್ ರಾಂ ರಹೀಂ ಸಿಂಗ್ಗೆ ಪದ್ಮ ಪ್ರಶಸ್ತಿ ನೀಡಬೇಕಂತೆ!ಇದು ಜೋಕ್ ಅಲ್ಲ. ಹೀಗಂತ ಕೋರಿ ಬರೋಬ್ಬರಿ 4,208 ಶಿಫಾರಸುಗಳು ಬಂದಿವೆಯಂತೆ. 2017ನೇ ಸಾಲಿನ ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವಂತೆ ಸಾರ್ವಜನಿಕರಿಗೆ ಕೇಂದ್ರ ಸರಕಾರ ಕೋರಿತ್ತು.
ಅದರ ಬೆನ್ನಲ್ಲೇ ಗುರ್ಮೀತ್ಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿ ಎಂದು ಅತಿ ಹೆಚ್ಚು ಅಂದರೆ 4,208 ಮಂದಿ ನಾಮನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ಸ್ವತಃ ಬಾಬಾನೇ ಆತನ ಹೆಸರನ್ನು 5 ಬಾರಿ ಶಿಫಾರಸು ಮಾಡಿದ್ದಾನೆ. ಆ ಪೈಕಿ 3 ಶಿಫಾರಸುಗಳಲ್ಲಿ ಆತ ಸಿರ್ಸಾದ ವಿಳಾಸ ನೀಡಿದ್ದರೆ, ಇನ್ನೆರಡರಲ್ಲಿ ಹರಿಯಾಣದ ಹಿಸ್ಸಾರ್ ಮತ್ತು ರಾಜಸ್ಥಾನದ ಗಂಗಾನಗರದ ವಿಳಾಸ ನೀಡಿದ್ದಾನೆ. ಈ ಎಲ್ಲ ಶಿಫಾರಸುಗಳಲ್ಲಿ “ಸಂತ ಡಾ. ಗರ್ಮೀತ್ ರಾಂ ರಹೀಂ ಸಿಂಗ್ ಜಿ ಇನ್ಸಾನ್’ ಎಂದು ನಮೂದಿಸಲಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್