ಬಿಜೆಪಿ ಕಾರ್ಯಕರ್ತನ ಹತ್ಯೆ: 5 ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ

Team Udayavani, Jun 25, 2018, 7:35 PM IST

ಕಣ್ಣೂರು : ಉತ್ತರ ಕೇರಳದ ರಾಜಕೀಯ ಸೂಕ್ಷ್ಮತೆಯ ಕಣ್ಣೂರು ಜಿಲ್ಲೆಯಲ್ಲಿ 2008ರಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕೊಂದ ಅಪರಾಧಕ್ಕಾಗಿ ಐವರು ಸಿಪಿಎಂ ಕಾರ್ಯಕರ್ತರಿಗೆ ತಲಶೇರಿಯ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಮತ್ತು ತಲಾ 50,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. 

ಶಿಕ್ಷೆಗೆ ಗುರಿಯಾದವರೆಂದರೆ  ಕೆ ಶ್ರೀಜಿತ್‌ (39), ವಿ ಬಿನಯ್‌ (31),  ಕೆ ಪಿ ಮನಾಫ್ (42), ಪಿ ಪಿ ಸುನೀಲ್‌ ಕುಮಾರ್‌ (51) ಮತ್ತು ಸಿ ಕೆ ಮಸೂದ್‌ (34).

ಈ ಕೊಲೆ ಕೇಸಿನಲ್ಲಿ ಒಟ್ಟು ಎಂಟು ಮಂದಿ ಆರೋಪಿಗಳಿದ್ದರು. ಅವರ ಪೈಕಿ ಒಬ್ಟಾತ ವಿಚಾರಣೆ ನಡೆಯುತ್ತಿದ್ದಾಗ ಮೃತಪಟ್ಟಿದ್ದ; ಉಳಿದಿಬ್ಬರನ್ನು ನ್ಯಾಯಾಲಯ ಸಾಕ್ಷ್ಯಾಧಾರಾದ ಕೊರತೆಯಿಂದಾಗಿ ಖುಲಾಸೆಗೊಳಿಸಿತ್ತು. 

2008ರ ಮಾರ್ಚ್‌ 5ರಂದು ಲಾರಿ ಕ್ಲೀನರ್‌, 23ರ ಹರೆಯದ ನಿಖೀಲ್‌ ಎಂಬಾತನನ್ನು ರಾಜಕೀಯ ದ್ವೇಷದಲ್ಲಿ, ವಾಹನದಿಂದ ಹೊರಗೆಳೆದು ಕೊಚ್ಚಿ ಕೊಲೆಗೈಯಲಾಗಿತ್ತು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ