ಬರಲಿದೆ ಭಾರತದ ಪ್ರಸಿದ್ಧ ಉದ್ಯಮಿ ರತನ್ ಟಾಟಾ ಆತ್ಮಕಥೆ!
Team Udayavani, Jan 10, 2022, 7:40 AM IST
ನವದೆಹಲಿ: ಭಾರತದ ಪ್ರಸಿದ್ಧ ಉದ್ಯಮಿ ರತ ನ್ ಟಾಟಾ ಅವರ ಆತ್ಮಕಥೆ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.
ನಿವೃತ್ತ ಐಎಎಸ್ ಅಧಿಕಾರಿ ಥಾಮಸ್ ಮ್ಯಾಥ್ಯೂ ಅವರು ಪುಸ್ತಕ ಬರೆಯಲಿದ್ದು, ಹಾರ್ಪರ್ ಕೊಲಿನ್ಸ್ ಸಂಸ್ಥೆ ಅದನ್ನು ಪ್ರಕಟಿಸಲಿದೆ. ಹಾರ್ಪರ್ ಕೊಲಿನ್ಸ್ ಸಂಸ್ಥೆ ಬರೋಬ್ಬರಿ 2 ಕೋಟಿ ರೂ.ಗೆ ಪುಸ್ತಕದ ಜಾಗತಿಕ ಹಕ್ಕನ್ನು ಖರೀದಿಸಿದೆ.
ವೀಮಗಡ್ ವಂಡರ್ನಂತಹ ಪ್ರಸಿದ್ಧ ಪುಸ್ತಕಗಳನ್ನು ಬರೆದಿರುವ ಥಾಮಸ್ ಅವರಿಗೆ ತಮ್ಮ ಆತ್ಮಕಥೆ ಬರೆಯುವುದಕ್ಕೆ ರತನ್ ಟಾಟಾ ಅವರು ಈ ಹಿಂದೆಯೇ ಅನುಮತಿ ಕೊಟ್ಟಿದ್ದರು. ಅದರಂತೆ ಟಾಟಾ ಅವರ ಬಾಲ್ಯದ ಬದುಕು, ಯೌವನ, ಉದ್ಯಮಕ್ಕೆ ಸೇರಿದಂತೆ ಅನೇಕ ದಾಖಲೆಗಳನ್ನು, ಫೋಟೋಗಳನ್ನು ಥಾಮಸ್ ಪರಿಶೀಲಿಸಿದ್ದು, ಕಥೆ ಬರೆಯುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕುಷ್ಟಗಿ ನಿಡಶೇಸಿ ಕೆರೆಗೆ ಚಳಿಗಾಲದ ಅತಿಥಿ : ಪಟ್ಟೆ ತಲೆಯ ಹೆಬ್ಬಾತುಗಳ ಆಗಮನ
ಮೊದಲಿಗೆ ಪುಸ್ತಕದ ಕಾಪಿರೈಟ್ನ ಮುಂಗಡ ಹಣವನ್ನು ಮಾತ್ರ ಥಾಮಸ್ ಹಾರ್ಪರ್ ಕೊಲಿನ್ಸ್ ಸಂಸ್ಥೆಯಿಂದ ಪಡೆಯಲಿದ್ದಾರೆ. ಪುಸ್ತಕ ಮಾರಾಟವಾದ ನಂತರ ಶೇಕಡಾವಾರು ಲೆಕ್ಕದಲ್ಲಿ ಲಾಭಾಂಶ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ