ಮನೆಯ ಮಗುವನ್ನೇ ಅಪಹರಿಸಿದ ಪ್ರೇಮಿಗಳು…ಯಾಕೆ ಗೊತ್ತಾ ?
Team Udayavani, Mar 6, 2021, 10:20 PM IST
ಉತ್ತರ ಪ್ರದೇಶ : ಪ್ರಿಯಕರನ ಜತೆ ಮನೆ ಬಿಟ್ಟು ಓಡಿ ಹೋಗುವ ವೇಳೆ 3 ವರ್ಷದ ಹೆಣ್ಣು ಮಗು ಅಪಹರಿಸಿದ್ದ ಯುವತಿಯೋರ್ವಳನ್ನು ಪಂಜಾಬ್ ನಲ್ಲಿ ವಶಕ್ಕೆ ಪಡೆಯಲಾಗಿದೆ.
ಉತ್ತರ ಪ್ರದೇಶದ ಫತ್ತೆಪುರ ನಿವಾಸಿ ನಿಶು ದ್ವಿವೇದಿ (20) ತನ್ನ ಬಾಯ್ ಫ್ರೆಂಡ್ ನವದೀಪ್ ಸಿಂಗ್ (25) ಜತೆ ಮಂಗಳವಾರ ಮನೆ ಬಿಟ್ಟು ಓಡಿ ಹೋಗಿದ್ದರು. ಮನೆಯಿಂದ ಪಲಾಯನ ಮಾಡುವ ಮುನ್ನ ತಮ್ಮ ಮನೆಯ 3 ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿದ್ದರು. ಇದರಿಂದ ಗಾಬರಿಗೊಂಡಿದ್ದ ಆಕೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಮಗು ಅಪಹರಣದ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಪಂಜಾಜ್‍ನಲ್ಲಿ ಪ್ರೇಮಿಗಳನ್ನು ಬಂಧಿಸಿ, ಮಗುವನ್ನು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯಕ್ಕೆ ಪ್ರೇಮಿಗಳಿಬ್ಬರನ್ನು ಹಾಜರು ಪಡಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಕಡಿವಾಣಕ್ಕೆ Test, Track, Treat ಮಂತ್ರ ಪಾಲಿಸಿ : ರಾಜ್ಯಗಳಿಗೆ ಕೇಂದ್ರ ಸೂಚನೆ
ಮಗು ಕರೆದೊಯ್ದದ್ದು ಯಾಕೆ ?
ಇನ್ನು ಪೊಲೀಸ್ ಎದುರು ಸತ್ಯ ಬಾಯಿ ಬಿಟ್ಟಿರುವ ನಿಶು, ಲಾಡ್ಜ್ ಗಳಲ್ಲಿ ದಂಪತಿಗಳಿಗೆ ಮಾತ್ರ ರೂಂ ಕೊಡುತ್ತಾರೆ. ನಾವಿಬ್ಬರೆ ಹೋದರೆ ರೂಂ ಸಿಗುವುದಿಲ್ಲ ಅಂತಾ ಗೊತ್ತಿತ್ತು. ಅದಕ್ಕಾಗಿ ಮಗುವನ್ನು ಕರೆದುಕೊಂಡು ಹೋಗಿದ್ದೇವು. ಮಗುವಿಗೆ ಯಾವುದೇ ತೊಂದರೆ ಕೊಡುವುದು ನಮ್ಮ ಉದ್ದೇಶವಾಗಿರಲಿಲ್ಲ ಎಂದಿದ್ದಾಳೆ.