ಬಾಲಿವುಡ್ ನಟಿ ಶಬಾನಾ ಅಜ್ಮಿ ಎಸ್ ಯುವಿ ಕಾರು ಟ್ರಕ್ ಗೆ ಡಿಕ್ಕಿ; ಗಂಭೀರ ಗಾಯ

ಎಸ್ ಯುವಿ ಡಿಕ್ಕಿ ಹೊಡೆದ ರಭಸಕ್ಕೆ ಎಸ್ ಯುವಿಯ ಮುಂಭಾಗ, ಬಾನೆಟ್ ಸಂಪೂರ್ಣ ನಜ್ಜುಗುಜ್ಜಾಗಿದೆ

Team Udayavani, Jan 18, 2020, 6:20 PM IST

ನವದೆಹಲಿ:ಬಾಲಿವುಡ್ ಹಿರಿಯ ನಟಿ ಶಬಾನಾ ಅಜ್ಮಿ ಪ್ರಯಾಣಿಸುತ್ತಿದ್ದ ಎಸ್ ಯುವಿ ಕಾರು ಟ್ರಕ್ ವೊಂದರ ಹಿಂಭಾಗಕ್ಕೆ ಗುದ್ದಿದ ಪರಿಣಾಮ ನಟಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ರಾಯ್ ಗಢ್ ಜಿಲ್ಲೆಯ ಮುಂಬೈ-ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಘಟನೆ ಸಂದರ್ಭದಲ್ಲಿ ಅಜ್ಮಿ ಪತಿ ಜಾವೇದ್ ಅಖ್ತರ್ ಕೂಡಾ ಕಾರಿನೊಳಗೆ ಇದ್ದು, ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಎಎನ್ ಐ ವರದಿ ಮಾಡಿದೆ. ಮುಂಬೈಗಿಂತ 60 ಕಿಲೋ ಮೀಟರ್ ದೂರದಲ್ಲಿ ಖಾಲಾಪುರ್ ಎಂಬಲ್ಲಿ ಅಜ್ಮಿ ಪ್ರಯಾಣಿಸುತ್ತಿದ್ದ ಟಾಟಾ ಸಫಾರಿ ಎಸ್ ಯುವಿ ಕಾರು ಟ್ರಕ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿರುವುದಾಗಿ ವರದಿ ತಿಳಿಸಿದೆ.

ಎಸ್ ಯುವಿ ಡಿಕ್ಕಿ ಹೊಡೆದ ರಭಸಕ್ಕೆ ಎಸ್ ಯುವಿಯ ಮುಂಭಾಗ, ಬಾನೆಟ್ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ವರದಿ ಹೇಳಿದೆ. ಶಬಾನಾ ಅಜ್ಮಿಯನ್ನು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ