ಸಚಿವ ರಾಜಭಾರ್‌ ಉಚ್ಚಾಟನೆಗೆ ರಾಜ್ಯಪಾಲರಿಗೆ ಸಿಎಂ ಯೋಗಿ ಆದಿತ್ಯನಾಥ್‌ ಶಿಫಾರಸು

Team Udayavani, May 20, 2019, 11:33 AM IST

ಲಕ್ನೋ : ಎನ್‌ಡಿಎ ಮೈತ್ರಿಕೂಟದ ಹಿರಿಯ ಪಾಲುದಾರ ಪಕ್ಷವಾಗಿರುವ ಬಿಜೆಪಿ ವಿರುದ್ಧ ಬಹಿರಂಗ ಅವಮಾನಕರ ಹೇಳಿಕೆ ನೀಡಿರುವ ಎಸ್‌ಬಿಎಸ್‌ಪಿ ನಾಯಕ ಓಂ ಪ್ರಕಾಶ್‌ ರಾಜಭಾರ್‌ ಅವರನ್ನು ತತ್‌ಕ್ಷಣವೇ ತನ್ನ ಸಚಿವ ಸಂಪುಟದಿಂದ ಕಿತ್ತು ಹಾಕುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

ಮಾತ್ರವಲ್ಲದೆ ರಾಜ್ಯದಲ್ಲಿ ಸಂಪುಟ ಸಚಿವ ಸ್ಥಾನಮಾನ ಹೊಂದಿರುವ ಸುಹೇಲ್‌ದೇವ್‌ ಭಾರತೀಯ ಸಮಾಜ್‌ ಪಾರ್ಟಿ (ಎಸ್‌ಬಿಎಸ್‌ಪಿ) ಇದರ ಎಲ್ಲ ಇತರ ಸದಸ್ಯರನ್ನು ಅವರು ಹೊಂದಿರುವ ಹುದ್ದೆಯಿಂದ ಕಿತ್ತು ಹಾಕುವಂತೆಯೂ ಸಿಎಂ ಯೋಗಿ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

ರಾಜಭಾರ್‌ ಅವರು ಈಚೆಗೆ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಸದಸ್ಯರಿಗೆ ಬೂಟೇಟು ಕೊಡಬೇಕು ಎಂಬ ಅವಮಾನಕಾರಿ ಹೇಳಿಕೆ ನೀಡಿದ್ದರು.

ಮಾತ್ರವಲ್ಲದೆ ತಾನು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿಯೂ ಅವರು ಸಿಎಂ ಗೆ ಪತ್ರ ಬರೆದಿದ್ದರು. ರಾಜಭಾರ್‌ ಅವರು ಸಿಎಂ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಮತ್ತು ದಿವ್ಯಾಂಗಿಗಳ ಕಲ್ಯಾಣ ಸಚಿವರಾಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ