ವೈಫೈ ಬಳಕೆದಾರರಿಗೆ ಕ್ರಾಕ್ ವೈರಸ್ ಭೀತಿ!
Team Udayavani, Oct 17, 2017, 7:10 AM IST
ಹೊಸದಿಲ್ಲಿ: ಡಬ್ಲೂಪಿಎ 2 ಪ್ರೊಟೊಕಾಲ್‌ನಡಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಆಧುನಿಕ ವೈಫೈ ಮೋಡೆಮ್‌ಗಳು ಶೀಘ್ರದಲ್ಲೇ ಕ್ರಾಕ್ ಎಂಬ ವೈರಸ್‌ಗೆ ತುತ್ತಾಗಲಿವೆ ಎಂದು ಅಂತರ್ಜಾಲ ತಜ್ಞರು ಎಚ್ಚರಿಸಿದ್ದಾರೆ.
ಒಮ್ಮೆ ಈ ವೈರಸ್ ಮೋಡೆಮ್‌ನೊಳಕ್ಕೆ ಕಾಲಿಟ್ಟರೆ, ಮೋಡೆಮ್‌ನೊಂದಿಗೆ ಸಂಪರ್ಕ ಹೊಂದುವ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಇತ್ಯಾದಿ ಸಾಧನಗಳಲ್ಲಿನ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ, ಪಾಸ್‌ವರ್ಡ್, ಗುಪ್ತ ಪದಗಳು, ಇಮೇಲ್ ಮಾಹಿತಿ, ಫೋಟೋ ಇತ್ಯಾದಿಗಳು ಸೋರಿಕೆಯಾಗುವ ಅಪಾಯವಿದೆ. ಸಾಫ್ಟ್ವೇರ್ ಅಪ್‌ಡೇಟ್ ಒಂದೇ ಇದರ ಪರಿಹಾರ ಮಾರ್ಗ ಎಂದಿದ್ದಾರೆ ತಜ್ಞರು. ಕ್ರಾಕ್ ಭಯದಿಂದ ಮೋಡೆಮ್ ಪಾಸ್‌ವರ್ಡ್ ಬದಲಿಸುವ ಅಗತ್ಯವಿಲ್ಲವೆಂದೂ ತಜ್ಞರು ಸೂಚಿಸಿದ್ದಾರೆ.