ಅಮರನಾಥ ಯಾತ್ರಿಕರ ಮೇಲೆ ಉಗ್ರ ದಾಳಿ; ಗಾಯಾಳು ಮಹಿಳೆ ಸಾವು
Team Udayavani, Jul 16, 2017, 10:48 AM IST
ಶ್ರೀನಗರ : ಅಮರನಾಥ ಯಾತ್ರಿಕರ ಮೇಲೆ ಉಗ್ರ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯಾತ್ರಾರ್ಥಿ ಮಹಿಳೆಯೊಬ್ಬರು ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 8 ಕ್ಕೇರಿದೆ.
ಲಲಿತಾ ಬೆನ್ ಎನ್ನುವ 47 ವರ್ಷದ ಮಹಿಳೆ ಶ್ರೀನಗರದ ಕ್ಸಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಬಗ್ಗೆ ವರದಿಯಾಗಿದೆ.
ಜುಲೈ 10 ರಂದು ಉಗ್ರರು ಯಾತ್ರಿಕರ ಮೇಲೆ ಹೊಂಚು ದಾಳಿ ನಡೆಸಿದ್ದರು.