ಎಲ್‌ಐಸಿ ಷೇರು ಮಾರಲು ಕೇಂದ್ರ ಭರ್ಜರಿ ತಯಾರಿ
ಇದೇ ಮೊದಲ ಬಾರಿಗೆ ಬೃಹತ್ ವಿಮಾ ಕಂಪನಿಯಿಂದ ಈ ಹೆಜ್ಜೆ
Team Udayavani, Jan 12, 2022, 6:30 AM IST
ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇದೇ ಮೊದಲ ಬಾರಿಗೆ ತನ್ನ ಷೇರುಗಳನ್ನು ಮಾರಾಟ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರ ಮಾಲಿಕತ್ವದ ಈ ಸಂಸ್ಥೆ ಐಪಿಒ (ಆರಂಭಿಕ ಷೇರು ಮಾರಾಟ) ಮೂಲಕ 40,000 ಕೋಟಿ ರೂ.ನಿಂದ 1 ಲಕ್ಷ ಕೋಟಿ ರೂ.ವರೆಗೆ ಸಂಗ್ರಹಿಸುವ ಗುರಿ ಹೊಂದಿದೆ. ಅದಕ್ಕಾಗಿ ಹಲವಾರು ನಿಯಮಗಳನ್ನು ಬದಲಿಸಲು ಹೊರಟಿದೆ. ಹಾಗೆಯೇ ಇದನ್ನು ಪ್ರಚಾರ ಮಾಡಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಿದೆ.
ಮೊಬೈಲ್‌ನಲ್ಲಿ ಸಂದೇಶ ಕಳುಹಿಸುವುದು, ಸುದ್ದಿಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಸೇರಿದಂತೆ ಎಲ್ಲ ಆಧುನಿಕ ಮಾರ್ಗಗಳ ಮೂಲಕ ಷೇರು ಮಾರಾಟ ಪ್ರಕ್ರಿಯೆ ಭಾರೀ ಯಶಸ್ಸು ಕಾಣಲು ಪ್ರಯತ್ನಿಸುತ್ತಿದೆ. ಇನ್ನೂ ಗಮನಿಸಬೇಕಾದ ಸಂಗತಿಯೆಂದರೆ ವಿದೇಶಿ ಹೂಡಿಕೆದಾರರೂ ಷೇರು ಖರೀದಿಸಲು ಇಲ್ಲಿ ಅವಕಾಶ ನೀಡಲಾಗಿದೆ. ಅದಕ್ಕಾಗಿ ಈಗಿರುವ ನಿಯಮಗಳನ್ನು ಪರಿಶೀಲಿಸಿ, ಬದಲಿಸಲು ತೀರ್ಮಾನಿಸಲಾಗಿದೆ. ಇದುವರೆಗೆ ಈಕ್ವಿಟಿ ಷೇರುಗಳನ್ನು ವಿದೇಶೀಯರಿಗೆ ಮಾರಲು ಭಾರತದ ಎಲ್ಲ ಇತರೆ ವಿಮಾ ಕಂಪನಿಗಳಿಗೆ ಅವಕಾಶವಿತ್ತು, ಎಲ್‌ಐಸಿಗೆ ಮಾತ್ರ ಈ ಅವಕಾಶವಿರಲಿಲ್ಲ.
ಈಗ ವಿದೇಶೀಯರಿಗೆ ಷೇರು ಖರೀದಿಸಲು ಅವಕಾಶ ನೀಡಿರುವುದರಿಂದ ಎಲ್‌ಐಸಿ ಮೇಲೆ ವಿದೇಶೀ ಹೂಡಿಕೆದಾರರಿಗೆ ಹೆಚ್ಚಿನ ಅಧಿಕಾರ ಹೊಂದಲೂ ಅವಕಾಶ ನೀಡಿದಂತಾಗುತ್ತದೆ. ಈ ಹಿಂದೆ 2010ರಲ್ಲಿ ಕೇಂದ್ರ ಸರ್ಕಾರ ಶೇ.10 ಕೋಲ್ ಇಂಡಿಯಾ ಷೇರುಗಳನ್ನು ಮಾರಾಟ ಮಾಡಿತ್ತು. ಆದರೆ ಅದರ ಷೇರುಗಳಿಗೆ ಪ್ರಸ್ತುತ ಹೇಳಿಕೊಳ್ಳುವ ಮೌಲ್ಯವಿಲ್ಲ. ಈ ಹಳೆಯ ತಪ್ಪುಗಳಿಂದ ಸರ್ಕಾರ ಪಾಠ ಕಲಿಯಬೇಕೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ