ದಿಲ್ಲಿ ಹೈಕೋರ್ಟಿನಿಂದ ಗೌತಮ್ ನವಲಾಖಾ ಗೃಹ ಬಂಧನ ಮುಕ್ತಿ
Team Udayavani, Oct 1, 2018, 5:20 PM IST
ಹೊಸದಿಲ್ಲಿ : ಭೀಮಾ ಕೋರೇಗಾಂವ್ ಪ್ರಕರಣಕ್ಕೆ ಸಂಬಂಧಿ ಬಂಧಿಸಲ್ಪಟ್ಟಿದ್ದ ಐವರು ಮಾನವ ಹಕ್ಕು ಕಾರ್ಯಕರ್ತರ ಪೈಕಿ ಓರ್ವರಾಗಿರುವ ಗೌತಮ್ ನವಲಾಖಾ ಅವರನ್ನು ದಿಲ್ಲಿ ಹೈಕೋರ್ಟ್ ಇಂದು ಗೃಹ ಬಂಧನದಿಂದ ಮುಕ್ತಗೊಳಿಸಿದೆ.
ಈ ಪ್ರಕರಣದಲ್ಲಿ ಸಂಬಂಧಿತ ಕೋರ್ಟಿನಿಂದ ಪರಿಹಾರ ಪಡೆಯಲು ಸುಪ್ರೀಂ ಕೋರ್ಟ್ ಕಳೆದ ವಾರ ನೀಡಿದ್ದ ನಾಲ್ಕು ವಾರಗಳ ಕಾಲಾವಕಾಶವನ್ನು ನವಾಲಾಖಾ ಅವರು ಬಳಸಿಕೊಂಡಿದ್ದಾರೆ; ಅಂತೆಯೇ ತಾನು ಅವರನ್ನು ಬಂಧ ಮುಕ್ತಗೊಳಿಸುತ್ತಿದ್ದೇನೆ ಎಂದು ದಿಲ್ಲಿ ಹೈಕೋಟ್ ಹೇಳಿದೆ.
ಕಾನೂನು ಪ್ರಕಾರ ನವಾಲಾಖ ಅವರ ಬಂಧನವು 24 ತಾಸು ಮೀರಿದೆ; ಹಾಗಾಗಿ ಅನಂತರದ ಅವರ ಬಂಧನ ಅವಧಿ ಸಿಂಧುವಲ್ಲ; ಅಂತೆಯೇ ಅವರ ಗೃಹ ಬಂಧನ ಈಗ ಕೊನೆಗೊಂಡಿದೆ ಎಂದು ಹೈಕೋರ್ಟ್ ಪೀಠ ಹೇಳಿತು.