ಅಯ್ಯಪ್ಪ ಸನ್ನಿಧಾನ ಪ್ರವೇಶಿಸುವ ಮಹಿಳೆಗೆ ರಕ್ಷಣೆ ಬೇಕು

2018ರಲ್ಲಿ ಮಂದಿರ ಪ್ರವೇಶಿಸಿದ ಬಿಂದೂ ನಿಂದ ಸುಪ್ರೀಂ ಗೆ ಮನವಿ

Team Udayavani, Dec 2, 2019, 11:23 PM IST

ಹೊಸದಿಲ್ಲಿ: ಶಬರಿಮಲೆಗೆ ಆಗಮಿಸುವ ಎಲ್ಲ ವಯೋಮಾನದ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಬಿಂದೂ ಅಮ್ಮಿನಿ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಎಲ್ಲ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂಬ 2018ರ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆ ನೀಡಿಲ್ಲ. ಆದ್ದರಿಂದ ಶಬರಿಮಲೆಗೆ ಬರುವ ಎಲ್ಲ ಮಹಿಳೆಯರಿಗೆ ಕೇರಳ ರಾಜ್ಯ ಸರಕಾರ ರಕ್ಷಣೆ ನೀಡಬೇಕು ಎಂದು ಅಮ್ಮಿನಿ ಅವರು ಅರ್ಜಿಯಲ್ಲಿ ಉಲ್ಲೇಖೀಸಿದ್ದಾರೆ. ಈ ಕುರಿತಂತೆ ಈ ಹಿಂದಿನ ತೀರ್ಪನ್ನು ಪಾಲಿಸಲು ರಾಜ್ಯದ ಸರಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.

ಕಳೆದ ವರ್ಷ ಶಬರಿಮಲೆ ದೇಗುಲ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಲ್ಲಿ ಕಾರ್ಯಕರ್ತೆ ಬಿಂದು ಅಮ್ಮಿನಿ ಕೂಡ ಇದ್ದರು. ವಯಸ್ಸಿನ ಮಿತಿ ಇಲ್ಲದೆ ಎಲ್ಲ ವಯೋಮಾನದ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂದು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಆ ಬಳಿಕ ಮಹಿಳೆಯರು ಪೊಲೀಸರ ರಕ್ಷಣೆಯಲ್ಲಿ ಶಬರಿಮಲೆ ಪ್ರವೇಶಿಸಿದ್ದರು.

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ಪ್ರಕರಣವನ್ನು ಸುಪ್ರೀಂಕೋರ್ಟ್‌ ನವೆಂಬರ್‌ 14ರಂದು 7ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಹಿಸಿದ ಬಳಿಕ ರಾಜ್ಯ ಸರಕಾರದ ನಿಲುವಿನಲ್ಲಿ ಬದಲಾವಣೆಯಾಗಿದೆ. ನ್ಯಾಯಾಲಯ ಹೇಳುವವರೆಗೂ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ರಕ್ಷಣೆ ಒದಗಿಸಲಾಗುವುದಿಲ್ಲ ಎಂದು ಕೇರಳ ಸರಕಾರ ಹೇಳಿದೆ. ಶಬರಿಮಲೆ ಕುರಿತಾಗಿ ಅಲ್ಲಿನ ರಾಜ್ಯಸರಕಾರ ತಾಳಿದ ನಿಲುವು ಚುನಾವಣೆಯಲ್ಲಿ ಜಾನಾಕ್ರೋಶವಾಗಿ ಆಕ್ರೋಶವಾಗಿ ಬದಲಾಗಿತ್ತು.

ಪುಣೆ ಮೂಲದ ತೃಪ್ತಿ ದೇಸಾಯಿ ಅವರೊಂದಿಗೆ ನವೆಂಬರ್‌ 26ರಂದು ಅವರು ಶಬರಿಮಲೆ ದೇಗುಲ ಪ್ರವೇಶಿಸಲು ಮುಂದಾದಾಗ ಪೆಪ್ಪರ್‌ ಸ್ಪ್ರೆà ಮಾಡುವ ಮೂಲಕ ದಾಳಿ ಮಾಡಿದ್ದರು.

ಎಲ್ಲಾ ವಯಸ್ಸಿನ ಮಹಿಳೆಯರು ಮತ್ತು ಬಾಲಕಿಯರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡುವ ಸುಪ್ರೀಂ ಕೋರ್ಟ್‌ನ 2018ರ ತೀರ್ಪನ್ನು ಕೇರಳ ಸರಕಾರ ಬಹಿರಂಗವಾಗಿ ಧಿಕ್ಕರಿಸಿದೆ. ದೇಗುಲ ಪ್ರವೇಶಿಸಿದ ಮಹಿಳೆಯರ ಮೇಲೆ ಕೆಲವು ರಾಸಾಯನಿಕ ವಸ್ತುಗಳನ್ನು ಸಿಂಪಡಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖೀಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿನ ಮಿಯಾ ಮಿಟ್ಟೂ ಹೆಸರು ಕೇಳಿದರೆ ಅಲ್ಲಿನ ಹಿಂದು, ಕ್ರಿಶ್ಚಿಯನ್‌, ಸಿಕ್ಖ್ ಕುಟುಂಬಗಳು ನಡುಗಲಾರಂಭಿಸುತ್ತವೆ. ಈ ಸಮುದಾಯಗಳ...

  • ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ, ಎಪ್ಪತ್ತರ ದಶಕದ ಮಧ್ಯಭಾಗದಿಂದ ಕೆಲವು ವರ್ಷಗಳ ಹಿಂದಿನವರೆಗೂ ಭಾರತೀಯರ ಬೆಳಗು ಮಾತ್ರ...

  • ಇತ್ತೀಚೆಗೆ ನಮ್ಮನ್ನು ಅಗಲಿದ ವಿದ್ವಾಂಸ, ಇತಿಹಾಸಕಾರ ನವರತ್ನ ಎಸ್‌. ರಾಜಾರಾಮ್‌, ಕನ್ನಡಿಗರಿಗೆ ಸಂಸ್ಕೃತಿ ಚಿಂತನೆಗಳಿಂದಲೇ ಸುಪರಿಚಿತರು. ಭಾರತದ ಪ್ರಾಚೀನ...

  • ಹಿಂದೆ ರಾಜರ ಕಾಲದಲ್ಲಿ ಶತ್ರುಗಳನ್ನು ಕೊಲ್ಲಲು, ಗೋಸುಂಬೆಯ ಜೊಲ್ಲನ್ನು ಬಳಸುತ್ತಿದ್ದರಂತೆ. ಅದನ್ನು ನೋಡಿದರೆ, ಕೆಡುಕು ಅನ್ನೋದು ರೈತನ ಮನಸೊಳಗೆ ತುಂಬಿಹೋಗಿತ್ತು....

  • ಅಲ್ಲಿಯ ತನಕ ಪ್ರಶಾಂತವಾಗಿದ್ದ ರಾಮನ ಬದುಕಿನಲ್ಲಿ ಕಾಣದ ಕಲ್ಲೊಂದು ಬೀಳುವುದು, ಇದೇ ಪಂಚವಟಿಯಲ್ಲಿಯೇ. ಸುಖೀಯಾಗಿದ್ದ ರಾಮನ ದಾಂಪತ್ಯದ ಮೇಲೆ ರಾವಣನ ದೃಷ್ಟಿ...