ಸಂಘರ್ಷ ತ್ಯಜಿಸಿ ಸ್ನೇಹಯಾತ್ರೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿ ಕರೆ

ಎಲ್ಲ ಸಮುದಾಯಗಳನ್ನೂ ತಲುಪುವತ್ತ ಗಮನ ಹರಿಸಿ

Team Udayavani, Jul 4, 2022, 5:50 AM IST

ಸಂಘರ್ಷ ತ್ಯಜಿಸಿ ಸ್ನೇಹಯಾತ್ರೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿ ಕರೆ

ಹೈದರಾಬಾದ್‌: ಸಂಘರ್ಷವಲ್ಲ, ಇದು ಸ್ನೇಹ ಯಾತ್ರೆಯ ಸಮಯ. ದೇಶಾದ್ಯಂತ ಸ್ನೇಹ ಯಾತ್ರೆಗಳನ್ನು ಆಯೋಜಿಸಿ ಜನರೊಂದಿಗೆ ಸಂಪರ್ಕ ಹೆಚ್ಚಿಸಿಕೊಳ್ಳಿ…

ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯ ಕಾರಿಣಿಯ ಕೊನೆಯ ದಿನವಾದ ರವಿವಾರ ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳಿಗೆ ಪ್ರಧಾನಿ ಮೋದಿ ಅವರು ನೀಡಿರುವ ಕರೆಯಿದು.

ಈಗ ನಾವು ವಿಪಕ್ಷ ಸ್ಥಾನದಲ್ಲಿಲ್ಲ, ಆಡಳಿತ ಪಕ್ಷವಾಗಿದ್ದೇವೆ. ಹಾಗಾಗಿ ಇದು “ಸಂಘರ್ಷ ಯಾತ್ರೆ’ ನಡೆಸುವ ಸಮಯವಲ್ಲ, ಬದಲಾಗಿ ಈಗ ಸ್ನೇಹಯಾತ್ರೆ ನಡೆಸಿ ಸಮಾಜದ ಎಲ್ಲ ವರ್ಗ ಗಳನ್ನೂ ತಲುಪಬೇಕಾಗಿದೆ ಎಂದು ಮೋದಿ ಸಲಹೆ ನೀಡಿದ್ದಾರೆ.

ನಾವು ದೀರ್ಘ‌ಕಾಲ ವಿಪಕ್ಷ ಸ್ಥಾನದಲ್ಲಿದ್ದೆವು. ಹೋರಾಟ ಎನ್ನುವುದು ನಮ್ಮ ಸ್ವಭಾವದಲ್ಲೇ ಬಂದು ಬಿಟ್ಟಿದೆ. ಈಗ ಜನರು ನಮ್ಮ ಮೇಲೆ ವಿಶ್ವಾಸ ಇರಿಸಿದ್ದಾರೆ. ಅದನ್ನು ಉಳಿಸಿ ಕೊಂಡು ಮುಂದಡಿ ಇರಿಸಬೇಕು. ಇನ್ನು ನಮ್ಮ ಪ್ರಯತ್ನ ವೇನಿದ್ದರೂ ಜನರೊಂದಿಗೆ ಸಂಪರ್ಕ, ಸೇವೆ, ಸಮತೋಲನ, ಸಕಾರಾತ್ಮಕತೆ ಮತ್ತು ಸಮನ್ವಯವನ್ನು ಸಾಧಿಸುವುದು. ಈ ನಿಟ್ಟಿನಲ್ಲಿ ಸ್ನೇಹಯಾತ್ರೆ ಕೈಗೊಳ್ಳುವ ಕಾರ್ಯವನ್ನು ನಾವು ಮಾಡಬೇಕು ಎಂದು ಮೋದಿ ಹೇಳಿದ್ದಾರೆ. ಆದರೆ ಈ ಯಾತ್ರೆಯ ಕುರಿತು ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.

ಹಿಂದೂಗಳು ಮಾತ್ರವಲ್ಲದೆ ಇತರ ಸಮುದಾಯಗಳಲ್ಲಿ ಇರುವ ಬಡ, ತುಳಿತಕ್ಕೆ ಒಳಗಾದ ವರ್ಗಗಳನ್ನು ತಲುಪ ಬೇಕು, ಅವರಿಗಾಗಿ ಕೆಲಸ ಮಾಡಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. ಉ.ಪ್ರದೇಶದ ಅಜಂಗಢ ಮತ್ತು ರಾಂಪುರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಈ ಮಾತುಗಳು ಮಹತ್ವ ಪಡೆದಿವೆ. ಇವೆರಡೂ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಾಗಿದ್ದು, ಬಿಜೆಪಿಯ ಗೆಲುವಿನಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸಿವೆ ಎನ್ನಲಾಗಿದೆ. ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದಿರುವ ಪಸ್ಮಂದಾ ಮುಸ್ಲಿಮರಂಥ ಸಮುದಾಯಗಳನ್ನು ಕೂಡ ತಲುಪಬೇಕು ಎನ್ನುವ ಸಂದೇಶವನ್ನು ಮೋದಿ ನೀಡಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಕನ್ಹಯ್ಯಗೆ ಶ್ರದ್ಧಾಂಜಲಿ
ಕಾರ್ಯಕಾರಿಣಿಯ ವೇಳೆ ರಾಜಸ್ಥಾನದ ಉದಯಪುರದಲ್ಲಿ ಧರ್ಮಾಂಧರಿಂದ ಹತ್ಯೆಗೀಡಾದ ಟೈಲರ್‌ ಕನ್ಹಯ್ಯಲಾಲ್‌ ಮತ್ತು ಇತ್ತೀಚೆಗೆ ಪಂಜಾಬ್‌ನಲ್ಲಿ ಕೊಲೆಗೀಡಾದ ಗಾಯಕ ಸಿಧು ಮೂಸೆವಾಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅವನತಿಯತ್ತ ಸಾಗಿದ ಪಕ್ಷಗಳ ತಪ್ಪಿನಿಂದ ಕಲಿತುಕೊಳ್ಳಿ
ದೇಶವು ಕುಟುಂಬ ರಾಜಕಾರಣ ದಿಂದ ಬೇಸತ್ತಿದೆ. ಅಂಥ ಪಕ್ಷಗಳು ಹೆಚ್ಚು ಕಾಲ ಬದುಕಲಾರವು. ಹಲವು ದಶಕಗಳ ಕಾಲ ಅಧಿಕಾರ ದಲ್ಲಿದ್ದ ಕೆಲವು ಪಕ್ಷಗಳು ಈಗ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಅವನತಿಯತ್ತ ಸಾಗುತ್ತಿರುವ ಪಕ್ಷಗಳನ್ನು ನಾವು ನೋಡುತ್ತಿದ್ದೇವೆ. ನಾವು ಆ ಪಕ್ಷಗಳನ್ನು ಅಪಹಾಸ್ಯ ಮಾಡಬಾರದು. ಬದಲಾಗಿ ಅವರು ಮಾಡಿದ ತಪ್ಪುಗಳಿಂದ ಪಾಠ ಕಲಿತು, ಅಂತಹ ತಪ್ಪು ನಮ್ಮಿಂದ ಆಗದಂತೆ ನೋಡಿಕೊಳ್ಳಬೇಕು ಎಂದು ಯಾವುದೇ ಪಕ್ಷದ ಹೆಸರು ಎತ್ತದೆಯೇ ಪ್ರಧಾನಿ ಮೋದಿ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಭಾಗ್ಯನಗರ ಎಂದ ಮೋದಿ
ಹೈದರಾಬಾದನ್ನು ಪ್ರಧಾನಿ ತಮ್ಮ ಭಾಷಣದಲ್ಲಿ “ಭಾಗ್ಯನಗರ’ ಎಂದು ಕರೆದು ಅಚ್ಚರಿ ಮೂಡಿಸಿದ್ದಾರೆ. ಇದು ನಿಜವಾಗಿಯೂ ಭಾಗ್ಯನಗರ. ಇಲ್ಲಿಂದ ನಮಗೆಲ್ಲರಿಗೂ ಭಾಗ್ಯವಿದೆ. ಸರ್ದಾರ್‌ ಪಟೇಲ್‌ ಅವರು “ಏಕ ಭಾರತ’ ಎಂದು ಪರಿಕಲ್ಪನೆಯನ್ನು ನೀಡಿದ್ದು ಇದೇ ನೆಲದಿಂದ. ಜೆ.ಪಿ. ನಡ್ಡಾ ನೇತೃತ್ವದ ಬಿಜೆಪಿಯು ಈಗ ಇದನ್ನು “ಶ್ರೇಷ್ಠ ಭಾರತ’ವನ್ನಾಗಿ ರೂಪಿಸಬೇಕಿದೆ ಎಂದು ಮೋದಿ ಹೇಳಿರುವುದಾಗಿ ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ತಿಳಿಸಿ
ದ್ದಾರೆ. “ಹೈದರಾಬಾದ್‌ ಹೆಸರನ್ನು ಭಾಗ್ಯನಗರವೆಂದು ಬದಲಾಯಿಸಲಾಗು ವುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್‌, “ಇಲ್ಲಿ ನಮ್ಮ ಸರಕಾರ ರಚನೆ ಯಾದ ಬಳಿಕ ಮುಖ್ಯಮಂತ್ರಿ ಆ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದಿದ್ದಾರೆ.

ಮೋದಿ ಮಾತಿನ ಝಲಕ್‌
1 ದೀರ್ಘ‌ಕಾಲ ದೇಶ ಆಳಿರುವ ಪಕ್ಷಗಳು ಈಗ ಅಸ್ತಿತ್ವ ಕ್ಕಾಗಿ ಹೋರಾಡುತ್ತಿವೆ. ಅವುಗಳ ತಪ್ಪುಗಳಿಂದ ನಾವು ಪಾಠ ಕಲಿಯಬೇಕು.
2 ನಾವೇನಿದ್ದರೂ ಪಿ2-ಜಿ2 (ಜನ-ಪರ ಮತ್ತು ಆಡಳಿತ-ಪರ) ಮಂತ್ರವನ್ನಷ್ಟೇ ಪಾಲಿಸಬೇಕು.
3 ನಮ್ಮದು ಓಲೈಕೆಯ ರಾಜಕಾರಣವಾಗಿರದೆ ಸಂತೃಪ್ತಿಯ ರಾಜಕಾರಣವಾಗಿರಬೇಕು.
4 ಇತರ ಸಮುದಾಯಗಳ ವಂಚಿತ – ತುಳಿತಕ್ಕೆ ಒಳಗಾದ ವರ್ಗಗಳಿಗಾಗಿ ಕೆಲಸ ಮಾಡಬೇಕು.
5 ಹೈದರಾಬಾದ್‌ ಎನ್ನುವುದು “ಭಾಗ್ಯನಗರ’. ಈ ನಗರದಿಂದಲೇ ಸರ್ದಾರ್‌ ಪಟೇಲ್‌ ಅವರು “ಏಕ ಭಾರತ’ದ ಪರಿಕಲ್ಪನೆಯನ್ನು ಘೋಷಿಸಿದರು. ಬಿಜೆಪಿ ಅದನ್ನೀಗ “ಶ್ರೇಷ್ಠ ಭಾರತ’ವನ್ನಾಗಿ ರೂಪಿಸಬೇಕು.

ಮುಂದಿನ 30-40 ವರ್ಷಗಳು ಬಿಜೆಪಿಯ ಯುಗವಾಗಿರಲಿವೆ. ಆಂಧ್ರ, ತಮಿಳುನಾಡು, ಕೇರಳ ಮತ್ತು ಒಡಿಶಾಗಳಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಏರಲಿದೆ. ಭಾರತವನ್ನು ಬಿಜೆಪಿಯು “ವಿಶ್ವಗುರು’ವನ್ನಾಗಿ ಬದಲಾಯಿಸಲಿದೆ.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಟಾಪ್ ನ್ಯೂಸ್

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

ಬೇದೂರು ಗ್ರಾಮದಲ್ಲಿ ಗುಡ್ಡ ಕುಸಿತ ಶುರು ; ಆತಂಕ ವ್ಯಕ್ತಪಡಿಸಿದ ವೃಕ್ಷ ಲಕ್ಷ ಆಂದೋಲನ

ಬೇದೂರು ಗ್ರಾಮದಲ್ಲಿ ಗುಡ್ಡ ಕುಸಿತ ; ಆತಂಕ ವ್ಯಕ್ತಪಡಿಸಿದ ವೃಕ್ಷ ಲಕ್ಷ ಆಂದೋಲನ

thumb 5 mamata banarjee

ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ: ಲೋಕಾಯುಕ್ತಕ್ಕೆ ಮತ್ತೆ ಪವರ್

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ: ಲೋಕಾಯುಕ್ತಕ್ಕೆ ಮತ್ತೆ ಪವರ್

3tikayath

ಹೆಸರು ಗಳಿಸಲು ಟಿಕಾಯತ್‌ಗೆ ಮಸಿ ಬಳಿದಿದ್ದ ಆರೋಪಿಗಳು!: ಮೂವರ ವಿರುದ್ಧ ಜಾರ್ಚ್‌ಶೀಟ್

ಸುರತ್ಕಲ್ :ಮಿತ್ರಪಟ್ಟಣ ಭಾಗದಲ್ಲಿ ಭಾರಿ ಕಡಲ್ಕೊರೆತ : ಅಪಾಯದ ಅಂಚಿನಲ್ಲಿ ಮೀನುಗಾರಿಕಾ ರಸ್ತೆ

ಸುರತ್ಕಲ್ :ಮಿತ್ರಪಟ್ಟಣ ಭಾಗದಲ್ಲಿ ಭಾರಿ ಕಡಲ್ಕೊರೆತ : ಅಪಾಯದ ಅಂಚಿನಲ್ಲಿ ಮೀನುಗಾರಿಕಾ ರಸ್ತೆ

1-asdadad

ನಿಗದಿತ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹಕ್ಕೆ ಗಮನ ಕೊಡಿ:ಅಧಿಕಾರಿಗಳಿಗೆ ಸಚಿವ ಎಂಟಿಬಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 5 mamata banarjee

ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!

ರಾಜಕೀಯ ಪಕ್ಷಗಳ ಉಚಿತ ಕೊಡುಗೆ ದೇಶದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ: ಸುಪ್ರೀಂಕೋರ್ಟ್

ರಾಜಕೀಯ ಪಕ್ಷಗಳ ಉಚಿತ ಕೊಡುಗೆ ದೇಶದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ: ಸುಪ್ರೀಂಕೋರ್ಟ್

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 16,299 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 16,299 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ

ದೇಶದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಪ್ರಮಾಣವಚನ ಸ್ವೀಕಾರ

ದೇಶದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಪ್ರಮಾಣವಚನ ಸ್ವೀಕಾರ

ಮದುವೆಗೆ ಬರುವಂತೆ ಅಲಂಕರಿಸಿದ ಕಾರುಗಳಲ್ಲಿ ಬಂದು ಐಟಿ ದಾಳಿ; 390 ಕೋಟಿ ರೂ. ಪತ್ತೆ!

ಮದುವೆಗೆ ಬರುವಂತೆ ಅಲಂಕರಿಸಿದ ಕಾರುಗಳಲ್ಲಿ ಬಂದು ಐಟಿ ದಾಳಿ; 390 ಕೋಟಿ ರೂ. ಪತ್ತೆ!

MUST WATCH

udayavani youtube

ವರ್ಗಾವಣೆಗೊಂಡ ಚಿಕ್ಕಮಗಳೂರು ಎಸ್.ಪಿ ಗೆ ಹೂಮಳೆಗೈದು ಬೀಳ್ಕೊಟ್ಟ ಸಿಬ್ಬಂದಿ…

udayavani youtube

3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

udayavani youtube

ಪ್ರವೀಣ್‌ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ

udayavani youtube

ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್

ಹೊಸ ಸೇರ್ಪಡೆ

1-sssdd

ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜದ ಇನ್ನೂ ಎರಡು ಪೀಠ

7rain

ಮಳೆ ಹಾನಿ ಜಂಟಿ ಸಮೀಕ್ಷೆಗೆ ಒತ್ತಾಯ

6-canel

ಮಳೆ ಬಂದ್ರೆ ನಾಲಾ ದಾಟೋದೇ ಸಮಸ್ಯೆ

1-asddsadasd

ದೋಣಿಗಲ್ ಸಮೀಪ ಭೂಕುಸಿತ: ಪರಿಹಾರಕ್ಕೆ ಆಗ್ರಹಿಸಿ ರಾ. ಹೆದ್ದಾರಿ ತಡೆದು ಆಕ್ರೋಶ

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.