ಅಕ್ರಮ ಆಸ್ತಿ ಗಳಿಕೆ: ಹರಿಯಾಣ ಮಾಜಿ ಸಿಎಂ ಚೌಟಾಲಾಗೆ 4 ವರ್ಷಗಳ ಜೈಲು
Team Udayavani, May 27, 2022, 2:43 PM IST
ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಿಎಂ ಓಂಪ್ರಕಾಶ್ ಚೌಟಾಲಾಗೆ ದೆಹಲಿಯ ವಿಶೇಷ ಸಿಬಿಐ ಕೋರ್ಟ್ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಇದೆ ವೇಳೆ ಕೋರ್ಟ್ ಚೌಟಾಲಾ ಗೆ ಸೇರಿರುವ ನಾಲ್ಕು ಕಡೆಗಳಲ್ಲಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಆದೇಶಿಸಿದೆ.
1993ರಿಂದ 2006ರವರೆಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿರುವ ಚೌಟಾಲಾ ಹಾಗೂ ಸಿಬಿಐ ಪರ ವಕೀಲರ ವಾದವನ್ನು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಗುರುವಾರ ಆಲಿಸಿದ್ದರು. ಚೌಟಾಲಾ ಅವರ ವೈದ್ಯಕೀಯ ಸಮಸ್ಯೆ ಮತ್ತು ವೃದ್ಧಾಪ್ಯವನ್ನು ಉಲ್ಲೇಖಿಸಿ ಅವರಿಗೆ ಕನಿಷ್ಠ ಶಿಕ್ಷೆಯನ್ನು ನೀಡಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಲಾಗಿತ್ತು. ಸಿಬಿಐ, ಗರಿಷ್ಠ ಶಿಕ್ಷೆ ವಿಧಿಸುವಂತೆ ಕೋರಿ, ಇದು ಸಮಾಜಕ್ಕೆ ಸಂದೇಶವನ್ನು ನೀಡಬೇಕು ಎಂದು ಹೇಳಿತ್ತು.
ಇದನ್ನೂ ಓದಿ : ಬೆಂಗಳೂರು ಮೂಲ ಸೌಕರ್ಯ ನವೆಂಬರ್ ಹೊತ್ತಿಗೆ ಸರಿ ಪಡಿಸುತ್ತೇವೆ : ಸಿಎಂ
ಸಿಬಿಐ 2005 ರಲ್ಲಿ ಪ್ರಕರಣವನ್ನು ದಾಖಲಿಸಿತ್ತು ಮತ್ತು 1993 ಮತ್ತು 2006 ರ ನಡುವೆ ಅಕ್ರಮ ಆಸ್ತಿಯನ್ನು ಗಳಿಸಿದ ಆರೋಪದ ಮೇಲೆ ಮಾರ್ಚ್ 26, 2010 ರಂದು ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದಲ್ಲಿ 24ಗಂಟೆಯಲ್ಲಿ 18,930 ಕೋವಿಡ್ ಪ್ರಕರಣ ದೃಢ; 35 ಮಂದಿ ಸಾವು
ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡಬೇಕು: ಬಿಜೆಪಿ ಮುಖಂಡ ನೈನಾರ್
ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ
ಕೋವಿಡ್ ಲಸಿಕೆಯ 2ನೇ, ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರ 6 ತಿಂಗಳಿಗೆ ಇಳಿಕೆ
ಉತ್ತರ ನೀಡಲು ಮೂರು ವಾರಗಳ ಅವಕಾಶ: 18 ದಿನಗಳಲ್ಲಿ 8 ಬಾರಿ ಲೋಪ
MUST WATCH
ಹೊಸ ಸೇರ್ಪಡೆ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು
ಮೂರು ದಿನವಾದರೂ ಪತ್ತೆಯಾಗಿಲ್ಲ ಕೊಚ್ಚಿಹೋದ ಚಿಕ್ಕಮಗಳೂರಿನ ಬಾಲಕಿ ಸುಪ್ರೀತ
ವೃದ್ಧೆ ಕೈಕಾಲು ಕಟ್ಟಿ 10 ಲಕ್ಷ ನಗದು, 100 ಗ್ರಾಂ ಚಿನ್ನ ದೋಚಿದವರ ಸೆರೆ
ಕಡಲ್ಕೊರೆತದ ಕುರಿತು ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಿಎಂ ಬೊಮ್ಮಾಯಿ
ಭಾರತದಲ್ಲಿ 24ಗಂಟೆಯಲ್ಲಿ 18,930 ಕೋವಿಡ್ ಪ್ರಕರಣ ದೃಢ; 35 ಮಂದಿ ಸಾವು