ಜು.1-15ರ ವರೆಗೆ ನಡೆಯಲಿದೆ ಸಿಬಿಎಸ್‌ಇ ಬಾಕಿ ಪರೀಕ್ಷೆ

ಆಗಸ್ಟ್‌ ಅಂತ್ಯಕ್ಕೆ ಫ‌ಲಿತಾಂಶ ಪ್ರಕಟ ಸಾಧ್ಯತೆ; ಕೋವಿಡ್-19 ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಪರೀಕ್ಷೆ

Team Udayavani, May 8, 2020, 7:17 PM IST

ಜು.1-15ರ ವರೆಗೆ ನಡೆಯಲಿದೆ ಸಿಬಿಎಸ್‌ಇ ಬಾಕಿ ಪರೀಕ್ಷೆ

ಸಾಂದರ್ಭಿಕ ಚಿತ್ರ.

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10, 12ನೇ ತರಗತಿಯ ಬಾಕಿ ಉಳಿದ 29 ವಿಷಯಗಳಲ್ಲಿನ ಪರೀಕ್ಷೆಗಳನ್ನು ಜು.1-15ರ ನಡುವೆ ನಡೆಸಲಾಗುತ್ತದೆ. ಆಗಸ್ಟ್‌ ಅಂತ್ಯದ ಒಳಗಾಗಿ ಫ‌ಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಶುಕ್ರವಾರ ನವದೆಹಲಿಯಲ್ಲಿ ಪ್ರಕಟಿಸಿದ್ದಾರೆ.

ಐಐಟಿ, ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಗಳಿಗೆ ನಡೆಯುವ ಜಾಯಿಂಟ್‌ ಎಂಟ್ರೆನ್ಸ್‌ ಎಕ್ಸಾಮಿನೇಷನ್‌ ಜು.18-23ರ ನಡುವೆ ನಡೆಯಲಿದೆ. ಅದಕ್ಕೆ ಮೊದಲು ಬಾಕಿ ಉಳಿದಿರುವ ಪರೀಕ್ಷೆ ನಡೆಸಲು ಸಿಬಿಎಸ್‌ಇ ತೀರ್ಮಾನಿಸಿದೆ.

ದೇಶದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಬಾಕಿ ಉಳಿದಿರುವ ಪರೀಕ್ಷೆ ಮುಂದೂಡಲಾಗಿತ್ತು.

ಟೀವಿ ಪಾಠಕ್ಕೆ 12 ಹೊಸ ಚಾನಲ್‌: ಒಂದೂವರೆ ತಿಂಗಳಿನಿಂದ ಮನೆಯಲ್ಲೇ ಕುಳಿತು, ಶಾಲೆ ಯಾವಾಗ ಶುರುವಾಗುತ್ತೆ ಎಂದು ಕಾಯುತ್ತಾ ಕುಳಿತಿರುವ ವಿದ್ಯಾರ್ಥಿಗಳ ನೆರವಿಗೆ ಧಾವಿಸಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಸದ್ಯದಲ್ಲೇ 12 ಹೊಸ ಡೈರೆಕ್ಟ್-ಟು-ಹೋಮ್‌ (ಡಿಟಿಎಚ್‌) ಚಾನಲ್‌ಗ‌ಳನ್ನು ಆರಂಭಿಸಲು ನಿರ್ಧರಿಸಿದೆ. ಇಲ್ಲಿ ಒಂದೊಂದು ಚಾನಲ್‌ ಒಂದೊಂದು ತರಗತಿಗೆ ಮೀಸಲಿರಲಿದೆ ಎಂದು ಸಚಿವಾಲಯ ತಿಳಿಸಿದೆ.

ಈಗಾಗಲೇ ಆನ್‌ ಲೈನ್ ಮೂಲಕ ಪಾಠ ನಡೆಯುತ್ತಿದ್ದರೂ ಅಂತರ್ಜಾಲ ಸಂಪರ್ಕದ ಅಲಭ್ಯತೆ ಮತ್ತು ನಿಧಾನ ಗತಿಯ ಇಂಟರ್‌ನೆಟ್‌ನಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅದು ತಲುಪುತ್ತಿಲ್ಲ. ಹೀಗಾಗಿ ಒನ್‌ ಕ್ಲಾಸ್‌, ಒನ್‌ ಚಾನಲ್‌ ಯೋಜನೆ ಆರಂಭಿಸಲಾಗಿದೆ. ಪ್ರತಿಯೊಂದು ಚಾನಲ್‌ನಲ್ಲಿ ಏನೇನು ವಿಷಯ ಇರಬೇಕೆಂದು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಲಿದೆ. ಜತೆಗೆ ವಿಷಯ ಅಭಿವೃದ್ಧಿಪಡಿಸಲು ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಸಂಸ್ಥೆಗಳ ತಜ್ಞರ ನೆರವು ಪಡೆಯಲು ಇಲಾಖೆ ಚಿಂತನೆ ನಡೆಸಿದೆ.

1ರಿಂದ 12ನೇ ತರಗತಿಗೆ ಮೀಸಲಾಗಿರುವ ಈ ಚಾನಲ್‌ಗ‌ಳು ಉಚಿತವಾಗಿರಲಿದ್ದು, ಇವು ಆರಂಭವಾದ ಬಳಿಕ ಕೇಬಲ್‌ ಆಪರೇಟರ್‌ಗೆ ತಿಳಿಸಿ, ಚಾನಲ್‌ ಸಂಪರ್ಕ ಪಡೆಯಬಹುದು.

ಟಾಪ್ ನ್ಯೂಸ್

thumb-3

ವಿದಾಯದ ಸೂಚನೆ ನೀಡಿದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ

thumb-2

ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿಯಲ್ಲಿ ಅತೃಪ್ತಿಯ ಹೊಗೆ

2-vijayapura

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ: ಮತ್ತೆ ಭಯದಲ್ಲಿ ಜನ

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

tdy-40

ಜನಪ್ರಿಯತೆಗೆ ಚಿತ್ತ, ಸಂಪನ್ಮೂಲ ಎತ್ತ

nalin-kumar

ಫೆ.11ರಂದು ಪುತ್ತೂರಿಗೆ ಕೇಂದ್ರ ಸಚಿವ ಅಮಿತ್‌ ಶಾ ಭೇಟಿ, ಸಹಕಾರಿ ಸಮಾವೇಶ ಯಶಸ್ಸಿಗೆ ಸಂಸದ ನಳಿನ್‌ ಸೂಚನೆ

TDY-26

ಟ್ರಾಫಿಕ್‌ ದಂಡ ಪಾವತಿಗೆ ಭರ್ಜರಿ ರಿಯಾಯಿತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-37

 ಮುಂದೆ ವಿನಾಯಿತಿ ರಹಿತ ತೆರಿಗೆ ವ್ಯವಸ್ಥೆ ಖಚಿತ

Tax

ತೆರಿಗೆ ರಿಯಾಯ್ತಿ ಪಡೆಯಿರಿ; ವಾಹನ ಬೇರೆಯವರಿಗೆ ವರ್ಗಾಯಿಸಿರಿ!

ಎಜಿ ಹೂಡಿಕೆ: ವರದಿ ಕೇಳಿದ ಆರ್‌ಬಿಐ

ಎಜಿ ಹೂಡಿಕೆ: ವರದಿ ಕೇಳಿದ ಆರ್‌ಬಿಐ

ಜಂಟಿ ಕಾರ್ಯಾಚರಣೆ: 7 ನಕ್ಸಲರ ಬಂಧನ

ಜಂಟಿ ಕಾರ್ಯಾಚರಣೆ: 7 ನಕ್ಸಲರ ಬಂಧನ

1-sadsadasd

ಮಾಜಿ ಸಚಿವ ಪಾರ್ಥ ಚಟರ್ಜಿ ಜಾಮೀನು ಅರ್ಜಿ ತಿರಸ್ಕರಿಸಿದ ಸಿಬಿಐ ನ್ಯಾಯಾಲಯ

MUST WATCH

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

ಹೊಸ ಸೇರ್ಪಡೆ

thumb-3

ವಿದಾಯದ ಸೂಚನೆ ನೀಡಿದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ

thumb-2

ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿಯಲ್ಲಿ ಅತೃಪ್ತಿಯ ಹೊಗೆ

2-vijayapura

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ: ಮತ್ತೆ ಭಯದಲ್ಲಿ ಜನ

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

tdy-40

ಜನಪ್ರಿಯತೆಗೆ ಚಿತ್ತ, ಸಂಪನ್ಮೂಲ ಎತ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.