ಎಂಎಸ್‌ಎಂಇಗೆ ಈಗ “ಚಾಂಪಿಯನ್ಸ್’ ಬಲ
Team Udayavani, Jun 2, 2020, 7:12 AM IST
ಪ್ರಧಾನಿ ನರೇಂದ್ರ ಮೋದಿ "ಚಾಂಪಿಯನ್ಸ್' ಎಂಬ ತಂತ್ರಜ್ಞಾನ ಆಧಾರಿತ ವೇದಿಕೆಗೆ ಚಾಲನೆ ನೀಡಿದರು.
ಹೊಸದಿಲ್ಲಿ: ತೀವ್ರ ಸಂಕಷ್ಟದಲ್ಲಿರುವ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ವಲಯವನ್ನು ಮೇಲೆತ್ತಲು ಪ್ರಧಾನಿ ನರೇಂದ್ರ ಮೋದಿ “ಚಾಂಪಿಯನ್ಸ್’ ಎಂಬ ತಂತ್ರಜ್ಞಾನ ಆಧಾರಿತ ವೇದಿಕೆಗೆ ಸೋಮವಾರ ಚಾಲನೆ ನೀಡಿದರು. ಕ್ರಿಯೇಷನ್ ಆ್ಯಂಡ್ ಹಾರ್ಮೊನಿಯಸ್ ಅಪ್ಲಿಕೇಶನ್ ಆಫ್ ಮಾಡರ್ನ್ ಪ್ರೊಸೆಸಸ್ ಫಾರ್ ಇನ್‌ಕ್ರೀಸಿಂಗ್ ದಿ ಔಟ್‌ಪುಟ್ ಆ್ಯಂಡ್ ನ್ಯಾಷನಲ್ ಸ್ಟ್ರೆಂಥ್- ಎಂಬ ವಿವ ರಣೆಯ “ಚಾಂಪಿಯನ್ಸ್’ ಸಣ್ಣ, ಮಧ್ಯಮ ಕೈಗಾರಿಕೆ ಗಳ ಕುಂದುಕೊರತೆ ಪರಿಹರಿಸುವ ಕೆಲಸ ಮಾಡಲಿದೆ.
ಹೇಗೆ ಕೆಲಸ ಮಾಡುತ್ತೆ?: “ಚಾಂಪಿಯನ್ಸ್’ ತಂತ್ರ ಜ್ಞಾನ ಆಧಾರಿತ ಮಾಹಿತಿ ನಿರ್ವಹಣಾ ವ್ಯವಸ್ಥೆಯ ಕಂಟ್ರೋಲ್ ರೂಮ್ ಹೊಂದಿದೆ. ದೂರವಾಣಿ, ಅಂತರ್ಜಾಲ ಹಾಗೂ ವಿಡಿಯೊ ಕಾನ್ಫರೆನ್ಸ್‌ಗಳ ಮೂಲಕ ಎಂಎಸ್‌ಎಂಇಗಳು ಸಂಪರ್ಕ ಸಾಧಿಸಬಹುದಾಗಿದೆ.
ಚಾಂಪಿಯನ್ಸ್‌ನ ಕೆಲಸಗಳೇನು?
ಹಣಕಾಸು, ಕಚ್ಚಾವಸ್ತುಗಳು, ಕಾರ್ಮಿಕರ ಕೊರತೆ- ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸಲು ಈ ವೇದಿಕೆ ನೆರವಾಗಲಿದೆ.
ವೈದ್ಯಕೀಯ ಪರಿಕರಗಳ ತಯಾರಿಕೆ, ಅವುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ಗುರಿ ಹೊಂದಿದೆ.