2ನೇ ಹಂತದ ಕಕ್ಷೆಗೆ ಚಂದ್ರಯಾನ-2 ನೌಕೆ
Team Udayavani, Jul 27, 2019, 5:35 AM IST
ಹೊಸದಿಲ್ಲಿ: ಚಂದ್ರಯಾನ -2ರ ಯೋಜನೆಯ ಅಂಗವಾಗಿ ಹಾರಿಬಿಡಲಾಗಿರುವ ಗಗನನೌಕೆಯನ್ನು ಈವರೆಗೆ ಇದ್ದ ಕಕ್ಷೆಯಿಂದ ಉನ್ನತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ. ಜು. 25ರ ಮಧ್ಯರಾತ್ರಿ 1:03 ನಿಮಿಷಕ್ಕೆ ಸರಿಯಾಗಿ, ಗಗನ ನೌಕೆಯಲ್ಲಿನ ಇಂಜಿನ್ ಅನ್ನು 15 ನಿಮಿಷಗಳ ಕಾಲ ಚಾಲನೆಗೊಳಿಸುವ ಮೂಲಕ 251 X 5 4,829 ಕಿ.ಮೀ. ಕಕ್ಷೆಗೆ ಏರಿಸಲಾಯಿತು. ಜು. 24ರಂದು ಗಗನನೌಕೆಯ ಕಕ್ಷೆಯನ್ನು ಮೊದಲ ಹಂತಕ್ಕೇರಿಸಲಾಗಿತ್ತು. ಜು. 29ರಂದು, ಮೂರನೇ ಹಂತದ ಕಕ್ಷೆಗೆ ಏರಿಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಸಮ್ಮಾನಕ್ಕೆ ನಿರ್ಧಾರ: ಚಂದ್ರಯಾನ-2 ನಿರ್ದೇಶಕಿ ರಿತು ಕರಿದಾಳ್ರನ್ನು ಸಮ್ಮಾನಿಸಲು ಲಕ್ನೋ ವಿಶ್ವವಿದ್ಯಾಲಯ ನಿರ್ಧರಿಸಿದೆ. ‘ಚಂದ್ರಯಾನ-2’ರಲ್ಲಿ ಇರುವ ಇಬ್ಬರೇ ಮಹಿಳಾ ವಿಜ್ಞಾನಿಗಳಲ್ಲಿ ರಿತೂ ಒಬ್ಬರಾಗಿದ್ದು, ಲಕ್ನೋ ವಿವಿಯ ಮಾಜಿ ವಿದ್ಯಾರ್ಥಿ.