ತೈವಾನ್ ಮೇಲೆ ಯುದ್ಧ ಸಾರಲು ಚೀನ ಸಂಚು?
ಚೀನ ಕಮ್ಯುನಿಸ್ಟ್ ಪಕ್ಷದ ಪ್ರಮುಖ ನಾಯಕರಿಂದಲೇ ಧ್ವನಿಮುದ್ರಿಕೆ ಸೋರಿಕೆ?
Team Udayavani, May 24, 2022, 6:50 AM IST
ನವದೆಹಲಿ: ಉಕ್ರೇನನ್ನು ವಶಪಡಿಸಿಕೊಳ್ಳಲು ಯುದ್ಧ ಶುರು ಮಾಡಿದ ರಷ್ಯಾ ಭಾರೀ ಮುಖಭಂಗ ಅನುಭವಿಸಿದೆ. ಇದರ ಬೆನ್ನಲ್ಲೇ ಚೀನ ತನ್ನ ನೆರೆಯ ರಾಷ್ಟ್ರ ತೈವಾನನ್ನು ಕಬಳಿಸಲು ಸಂಚು ಹಾಕಿದೆಯಾ ಎಂಬ ಅನುಮಾನ ಶುರುವಾಗಿದೆ.
ಚೀನದ ಕಮ್ಯುನಿಸ್ಟ್ ಪಕ್ಷ ಹಾಗೂ ಅಲ್ಲಿನ ಸೇನಾ ನಾಯಕರ ನಡುವಿನ ಮಾತುಕತೆ ಎನ್ನಲಾದ ಅನಧಿಕೃತ ಧ್ವನಿಮುದ್ರಿಕೆಯೊಂದರಲ್ಲಿ ಈ ಸಂಗತಿಗಳಿವೆ.
ಇದನ್ನು ಕಮ್ಯುನಿಸ್ಟ್ ಪಕ್ಷದ ನಾಯಕರೊಬ್ಬರು ಉದ್ದೇಶಪೂರ್ವಕವಾಗಿಯೇ ಸೋರಿಕೆ ಮಾಡಿದ್ದಾರೆ ಎನ್ನಲಾಗಿದೆ. ಕ್ವಾಡ್ ಶೃಂಗಕ್ಕೆಂದು ಜಪಾನ್‌ಗೆ ತೆರಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಬೆಳವಣಿಗೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಒಂದೇ ಚೀನ ನೀತಿಗೆ ನಾವು ಸಹಿಹಾಕಿದ್ದೇವೆ. ಅದಕ್ಕೆ ನಾವು ಬದ್ಧರಾಗಿಯೇ ಇದ್ದೇವೆ. ಆದರೆ ಬಲಾತ್ಕಾರದಿಂದ ಚೀನ ಅದನ್ನು ಸಾಧಿಸಲು ಹೊರಟರೆ, ಅಮೆರಿಕ ಥೈವಾನ್ ಪರ ಹೋರಾಡಲಿದೆ ಎಂದು ನೇರವಾಗಿ ಬೈಡೆನ್ ಚೀನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಏನಿದು ಧ್ವನಿಮುದ್ರಿಕೆ?:
ಚೀನ ಮೂಲದ ಮಾನವ ಹಕ್ಕು ಹೋರಾಟ ಜೆನಿಫರ್ ಜೆಂಗ್ 57 ನಿಮಿಷದ ಧ್ವನಿಮುದ್ರಿಕೆಯನ್ನು ಟ್ವೀಟ್ ಮಾಡಿದ್ದಾರೆ. ಅದು ಲುಡೆ ಮೀಡಿಯಾ ಎಂಬ ಯೂಟ್ಯೂಬ್ ವಾಹಿನಿಯಲ್ಲೂ ಪ್ರಕಟವಾಗಿದೆ.
ಚೀನ ಇತಿಹಾಸದಲ್ಲೇ ಹೀಗೊಂದು ಧ್ವನಿಮುದ್ರಿಕೆ ಸೋರಿಕೆಯಾಗಿದ್ದೇ ಇಲ್ಲ. ಇದರಲ್ಲಿ ಚೀನ ಕಮ್ಯುನಿಸ್ಟ್ ಪಕ್ಷದ ಗ್ವಾಂಗ್‌ಡಾಂಗ್ ಪ್ರಾಂತ್ಯದ ನಾಯಕರು, ಆ ಭಾಗದ ಸೇನಾ ಮುಖಂಡರು ಪಾಲ್ಗೊಂಡಿದ್ದಾರೆಂದು ಹೇಳಲಾಗಿದೆ.
ಇದರಲ್ಲಿ ತೈವಾನ್ ವಿರುದ್ಧ ಯುದ್ಧ ಸಾರುವ ಮಾತುಕತೆಗಳು ನಡೆದಿವೆ. ಯುದ್ಧ ಸಾರಲು ಗ್ವಾಂಗ್‌ಡಾಂಗ್‌ನಲ್ಲಿ 1.40 ಲಕ್ಷ ಯೋಧರು, 953 ಹಡಗುಗಳು, 1653 ಡ್ರೋನ್‌ಗಳು, 20 ವಿಮಾನ ನಿಲ್ದಾಣಗಳು, ಬಂದರುಗಳು, 6 ಹಡಗು ನಿರ್ಮಾಣ ಕೇಂದ್ರಗಳು ಸಿದ್ಧ ಇವೆ ಎಂಬರ್ಥದ ಮಾಹಿತಿಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ
ವಿಶ್ವಾಸಮತ…ಮಹಾರಾಷ್ಟ್ರ ಗವರ್ನರ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ
ಗೋವಾದತ್ತ ಬಂಡಾಯ ಶಿವಸೇನೆ ಶಾಸಕರು; ನಾಳೆ ನೇರವಾಗಿ ಸದನಕ್ಕೆ
Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆ
ಶೀಘ್ರ ಸರಕಾರಿ ಬ್ಯಾಂಕ್ ಪೂರ್ಣ ಖಾಸಗೀಕರಣ? ಪಿಎಸ್ಬಿಗಳಿಂದ ನಿರ್ಗಮಿಸಲು ಸರಕಾರ ಸಿದ್ಧತೆ