9 ದಿನಗಳ ಬಳಿಕ ಚೀನಾ ಸೇನೆಯಿಂದ ಅಪಹೃತ ಬಾಲಕನ ಹಸ್ತಾಂತರ
ಸಿಯುಂಗ್ಲಾ ಪ್ರದೇಶದ ಲುಂಗ್ಟಾ ಜೋರ್ ಎಂಬಲ್ಲಿ ಚೀನಾ ಸೇನೆ 17ವರ್ಷದ ಮಿರಾಮ್ ನನ್ನು ಅಪಹರಿಸಿತ್ತು.
Team Udayavani, Jan 27, 2022, 3:35 PM IST
ನವದೆಹಲಿ: ಕಳೆದ 9 ದಿನಗಳ ಹಿಂದ ಅರುಣಾಚಲ ಪ್ರದೇಶದಿಂದ ಅಪಹರಿಸಲ್ಪಟ್ಟಿದ್ದ 17 ವರ್ಷದ ಬಾಲಕನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಗುರುವಾರ(ಜನವರಿ ಜನವರಿ 27) ಭಾರತೀಯ ಸೇನೆಗೆ ಹಸ್ತಾಂತರಿಸಿದೆ.
ಇದನ್ನೂ ಓದಿ:ಒಳ ಉಡುಪಿನ ವಿಚಾರಕ್ಕೆ ದೇವರ ಪ್ರಸ್ತಾಪ : ನಟಿ ಶ್ವೇತಾ ತಿವಾರಿ ವಿರುದ್ಧ ಆಕ್ರೋಶ
ವೈದ್ಯಕೀಯ ಪರೀಕ್ಷೆ ಸೇರಿದಂತೆ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅರುಣಾಚಲದ ಬಾಲಕ ಮಿರಾಮ್ ಟಾರೋನ್ ನನ್ನು ಭಾರತಕ್ಕೆ ಹಸ್ತಾಂತರಿಸಲಾಯ್ತು ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಜನವರಿ 18ರಂದು ಅರುಣಾಚಲ ಪ್ರದೇಶದ ಸಿಯುಂಗ್ಲಾ ಪ್ರದೇಶದ ಲುಂಗ್ಟಾ ಜೋರ್ ಎಂಬಲ್ಲಿ ಚೀನಾ ಸೇನೆ 17ವರ್ಷದ ಮಿರಾಮ್ ನನ್ನು ಅಪಹರಿಸಿತ್ತು. ನಾಪತ್ತೆಯಾಗಿರುವ ಅರುಣಾಚಲ ಪ್ರದೇಶದ ಬಾಲಕ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ಪತ್ತೆಯಾಗಿರುವುದಾಗಿ ಚೀನಾ ಸೇನೆ ಜನವರಿ 23ರಂದು ತಿಳಿಸಿತ್ತು.
ಅರುಣಾಚಲ ಪ್ರದೇಶದ ಬಾಲಕ ಮಿರಾಮ್ ಟಾರೋನ್ ನನ್ನು ಶೀಘ್ರವೇ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಖಚಿತಪಡಿಸಿತ್ತು ಎಂದು ಸಚಿವ ಕಿರಣ್ ರಿಜಿಜು ಬುಧವಾರ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಬಂದ ರತನ್ ಟಾಟಾ
ರಾಜೀವ್ಗಾಂಧಿ ಹಂತಕ ಪೆರಾರಿವೇಲನ್ ಬಿಡುಗಡೆ : ಕಾಂಗ್ರೆಸ್ ತೀವ್ರ ಆಕ್ಷೇಪ