50,000 ರೂ. ಲಂಚ: ಪೌರಾಡಳಿತೆ ಹಿರಿಯ ಮಹಿಳಾ ಅಧಿಕಾರಿ ವಿರುದ್ಧ ಕೇಸು
Team Udayavani, May 16, 2018, 12:19 PM IST
ಥಾಣೆ, ಮಹಾರಾಷ್ಟ್ರ : ದೂರುದಾರ ವ್ಯಕ್ತಿಯಿಂದ ಲಂಚ ಕೇಳಿದ ಆರೋಪದ ಮೇಲೆ ಉಲ್ಲಾಸನಗರ ಮುನಿಸಿಪಲ್ ಕಾರ್ಪೊರೇಶನ್ನ ಹಿರಿಯ ಮಹಿಳಾ ಅಧಿಕಾರಿಯ ವಿರುದ್ಧ ಥಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಉಲ್ಲಾಸನಗರದಲ್ಲಿನ ತನ್ನ ಮನೆಯ ವರೆಗಿನ ರಸ್ತೆ ಬದಿಯ ಅತಿಕ್ರಮಣವನ್ನು ತೆರವು ಗೊಳಿಸಬೇಕೆಂದು ದೂರುದಾರ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ 50,000 ರೂ. ಲಂಚ ಕೊಡಬೇಕು ಎಂದು ಹಿರಿಯ ಮಹಿಳಾ ಅಧಿಕಾರಿ ತಾಕೀತು ಮಾಡಿದ್ದರು ಎಂದು ಥಾಣೆ ಪೊಲೀಸ್ ವಕ್ತಾರ ಹೇಳಿದರು.
ದೂರುದಾರ ವ್ಯಕ್ತಿ ಅನಂತರ ಈ ಸಂಬಂಧ ಕೋರ್ಟ್ ಮೆಟ್ಟಲು ಏರಿದ್ದರು. ಆ ಪ್ರಕಾರ ಕೋರ್ಟ್ ಥಾಣೆ ಪೊಲೀಸರಿಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶಿಸಿತ್ತು.