
ಸುಲ್ತಾನ್ ಪುರಿ ಮಾದರಿ ಘಟನೆ: ಅಪ್ರಾಪ್ತೆಗೆ ಢಿಕ್ಕಿ ಹೊಡೆದು ಸುಮಾರು ದೂರ ಎಳೆದೊಯ್ದ ಕಾರು ಚಾಲಕ
Team Udayavani, Jan 7, 2023, 8:44 AM IST

ಲಕ್ನೋ: ದೆಹಲಿಯ ಸುಲ್ತಾನ್ ಪುರಿಯಲ್ಲಿ ಕಾರಿನಡಿಯಲ್ಲಿ ಸಿಲುಕಿಕೊಂಡು ಯುವತಿಯೊಬ್ಬಳು ದಾರುಣ ಅಂತ್ಯವಾದ ಘಟನೆ ಪ್ರಚಲಿತದಲ್ಲಿರುವಾಗಲೇ ಅದೇ ಮಾದರಿಯ ಮತ್ತೊಂದು ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಕೊತ್ವಾಲಿ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಅಪ್ರಾಪ್ತ ಬಾಲಕಿ ಸೈಕಲ್ ನಲ್ಲಿ ಹೋಗುತ್ತಿರುವಾಗ ಕಾರೊಂದು ಢಿಕ್ಕಿ ಹೊಡೆದು, ಬಾಲಕಿಯ ಕಾಲು ಕಾರಿನಡಿಗೆ ಸಿಲುಕಿಕೊಂಡು ಆಕೆಯನ್ನು ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದೆ. ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಲಕ್ಷ್ಯವಾಗಿ ಕಾರು ಚಲಾಯಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ದೆಹಲಿಯ ಸುಲ್ತಾನ್ ಪುರಿಯಲ್ಲಿ ಅಂಜಲಿ ಎನ್ನುವ ಯುವತಿಯ ಸ್ಕೂಟಿಗೆ ಕಾರು ಢಿಕ್ಕಿಯಾಗಿ, ಕಾರಿನಲ್ಲಿದ್ದವರು ಆಕೆಯನ್ನು ಸುಮಾರು ದೂರದವರೆಗೂ ಎಳೆದುಕೊಂಡು ಹೋಗಿದ್ದರು. ಈ ಪ್ರಕರಣದ ಎಲ್ಲಾ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
UP | Due to a collision b/w a cycle & a car in Kotwali city area, the cyclist’s leg got stuck in the car & he was dragged by the car for some distance. Minor victim admitted to hospital & the car driver taken into custody. Action to be taken as per law: CO Baghauli, Hardoi(06.01) pic.twitter.com/L1AGdP3KOJ
— ANI UP/Uttarakhand (@ANINewsUP) January 6, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Monsoon; ಒಂದು ವಾರ ವಿಳಂಬವಾಗಿ ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು: ಐಎಂಡಿ

Madhya Pradesh: ಜೀಪ್ ಮೇಲೆ ಉರುಳಿ ಬಿದ್ದ ಸಿಮೆಂಟ್ ಬಲ್ಕರ್ ವಾಹನ; 7 ಮಂದಿ ಮೃತ್ಯು

500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ

Bihar: ಮದುವೆಯಾದ ಎರಡನೇ ದಿನಕ್ಕೆ ಪತಿಯ ಖಾಸಗಿ ಅಂಗಕ್ಕೆ ಚೂರಿಯಿಂದ ಇರಿದ ಪತ್ನಿ.!

Madhya Pradesh: ಮದುವೆಯಾಗಿ 17 ದಿನದಲ್ಲೇ ಪತ್ನಿಯ ಕತ್ತು ಸೀಳಿ ಹತ್ಯೆಗೈದ ಪತಿ
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
