ಪ್ರೇಮಿಗಳ ದಿನವೇ ಯುವ ಜೋಡಿಯ ದಾರುಣ ಅಂತ್ಯ: ನೀರಿನಲ್ಲಿ ಮುಳುಗಿ ಮೃತ್ಯು
Team Udayavani, Feb 15, 2023, 8:54 AM IST
ಪಣಜಿ: ಪ್ರೇಮಿಗಳ ದಿನದಂದು ಜೊತೆಯಾಗಿ ತಿರುಗಾಡಲು ಬಂದ ಯುವ ದಂಪತಿಯೊಂದು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಗೋವಾದ ಪಲೋಲೆಮ್ ಬೀಚ್ ನಲ್ಲಿ ಮಂಗಳವಾರ (ಫೆ.14 ರಂದು) ನಡೆದಿದೆ.
ಸುಪ್ರಿಯಾ ದುಬೆ (26) ಮತ್ತು ವಿಭು ಶರ್ಮಾ (27) ಮೃತ ಜೋಡಿ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಉತ್ತರ ಪ್ರದೇಶದ ಮೂಲದವರು ಎನ್ನಲಾಗಿದೆ.
ಕಳೆದ ಕೆಲದಿನಗಳಿಂದ ಗೋವಾ ಪ್ರವಾಸದಲ್ಲಿದ್ದ ದಂಪತಿ ಸೋಮವಾರ ರಾತ್ರಿಯೇ ಬೀಚ್ ನಲ್ಲಿ ಈಜುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅದರಂತೆ ಮೊದಲು ಸುಪ್ರಿಯಾ ದುಬೆ ಈಜುವಾಗ ಮುಳುಗಿದ್ದಾರೆ. ಮುಳುಗುತ್ತಿದ್ದ ಆಕೆಯನ್ನು ರಕ್ಷಿಸಲು ಇಳಿದ ವಿಭು ಶರ್ಮಾ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ರಕ್ಷಣಾ ಸಿಬ್ಬಂದಿಗಳು ಇಬ್ಬರ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಸುಪ್ರಿಯಾ ಮತ್ತು ವಿಭು ಸಂಬಂಧಿಕರಾಗಿದ್ದು, ಅವರು ಗೋವಾದಲ್ಲಿದ್ದಾರೆ ಎಂಬುದು ಅವರ ಕುಟುಂಬದವರಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ