ಗಣರಾಜ್ಯೋತ್ಸವಕ್ಕೂ ಕೋವಿಡ್ ಛಾಯೆ;ಕೇಂದ್ರ ಏಷ್ಯಾದ ನಾಯಕರ ಪಾಲ್ಗೊಳ್ಳುವಿಕೆ ಇಲ್ಲ
ವರ್ಚುವಲ್ ಆಗಿ ಪ್ರಧಾನಿ ಜತೆ ಮಾತುಕತೆ
Team Udayavani, Jan 19, 2022, 6:50 AM IST
ನವದೆಹಲಿ: ಕೊರೊನಾ ಸೋಂಕು ಈ ಬಾರಿ ಗಣರಾಜ್ಯೋತ್ಸವದ ಸಂಭ್ರಮವನ್ನೂ ಕಸಿದಿದೆ. ಪ್ರಸಕ್ತ ವರ್ಷದ ಗಣರಾಜ್ಯೋತ್ಸವಕ್ಕೆ ಕೇಂದ್ರ ಏಷ್ಯಾದ ರಾಷ್ಟ್ರಗಳ ಐವರು ಮುಖ್ಯಸ್ಥರನ್ನು ಆಹ್ವಾನಿಸಬೇಕು ಎಂಬ ಕೇಂದ್ರ ಸರ್ಕಾರದ ಯೋಜನೆ ಸಾಕಾರಗೊಳ್ಳುವ ಸಾಧ್ಯತೆಗಳಿಲ್ಲ.
ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ವಿದೇಶಿ ಗಣ್ಯರನ್ನು ಆಹ್ವಾನಿಸದೇ ಇರಲು ನಿರ್ಧರಿಸಲಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಜ.24 ಅಥವಾ 27ರಂದು ಕಜಕಿಸ್ತಾನ, ಕಿರ್ಗಿಸ್ತಾನ, ಉಜ್ಬೇಕಿಸ್ತಾನ, ತಜಕಿಸ್ತಾನ ಮತ್ತು ತುರ್ಕ್‌ಮೆನಿಸ್ತಾನದ ಸರ್ಕಾರಿ ಮುಖ್ಯಸ್ಥರೊಂದಿಗೆ ವರ್ಚುವಲ್ ಶೃಂಗ ನಡೆಸಿ, ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
5-8 ಸಾವಿರ ಮಂದಿಗಷ್ಟೇ ಅವಕಾಶ:
ಇದೇ ವೇಳೆ, ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಶೇ.70-80ರಷ್ಟು ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಅಂದರೆ, ಕೇವಲ 5 ಸಾವಿರದಿಂದ 8 ಸಾವಿರದಷ್ಟು ಮಂದಿಗೆ ಮಾತ್ರ ಪರೇಡ್‌ನಲ್ಲಿ ಭಾಗಿಯಾಗಲು ಅನುಮತಿ ನೀಡಲಾಗುತ್ತದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದ ಪರೇಡ್‌ನಲ್ಲಿ ಸುಮಾರು 25 ಸಾವಿರ ಮಂದಿಗೆ ಅನುಮತಿ ನೀಡಲಾಗಿತ್ತು. ಅಲ್ಲದೆ, ವಿದೇಶಿ ಮುಖ್ಯ ಅತಿಥಿಯೂ ಇರಲಿಲ್ಲ. ಈ ಬಾರಿಯೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ಇದನ್ನೂ ಓದಿ:ವಕಾರ ಸಾಲು ಮಾರಾಟ ಪ್ರಕ್ರಿಯೆಗೆ ಚಾಲನೆ! ನಗರಸಭೆ ಕೋಟ್ಯಂತರ ರೂ. ಆಸ್ತಿ ಕೈತಪುವ ಆತಂಕ
ಹಲವು ನಿರ್ಬಂಧಗಳು:
ಭದ್ರತಾ ದೃಷ್ಟಿಯಿಂದ ಜ.20ರಿಂದ ಫೆ.15ರವರೆಗೆ ದೆಹಲಿಯಲ್ಲಿ ಡ್ರೋನ್‌ಗಳು, ಪ್ಯಾರಾಗ್ಲೆ„ಡರ್‌ಗಳು, ಪ್ಯಾರಾ-ಮೋಟಾರುಗಳು, ಮೈಕ್ರೋ-ಲೈಟ್ ವಿಮಾನ, ಹಾಟ್ ಏರ್ ಬಲೂನುಗಳ ಹಾರಾಟವನ್ನು ನಿಷೇಧಿಸಲಾಗಿದೆ. ಇದೇ ವೇಳೆ, ದೇಶದ ಸ್ವಾತಂತ್ರ್ಯ ಚಳವಳಿಯ ಹೀರೋಗಳ ದಿಟ್ಟತನವನ್ನು ಬಿಂಬಿಸುವ 10 ಸೊðàಲ್‌ಗಳನ್ನು 26ರಂದು ರಾಜಪಥದಲ್ಲಿ ಪ್ರದರ್ಶಿಸಲಾಗುತ್ತದೆ. ಒಡಿಶಾ ಮತ್ತು ಚಂಡೀಗಡದ 500 ಕಲಾವಿದರು ಈ ಸೊðàಲ್‌ಗಳನ್ನು ಚಿತ್ರಿಸಿದ್ದಾರೆ.
ಟ್ಯಾಬ್ಲೋ ವಿವಾದ: ಬಂಗಾಳ, ತ.ನಾಡಿಗೆ ರಾಜನಾಥ್ ಪತ್ರ
ಸ್ತಬ್ಧಚಿತ್ರ ನಿರಾಕರಣೆ ವಿವಾದ ಸಂಬಂಧ ಮಂಗಳವಾರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರು ಪ.ಬಂಗಾಳ ಹಾಗೂ ತ.ನಾಡು ಸಿಎಂಗಳಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಲೋಕೋಪಯೋಗಿ ಇಲಾಖೆಯ ಸ್ತಬ್ಧಚಿತ್ರ ಕೂಡ ನೇತಾಜಿಗೆ ಸಂಬಂಧಿಸಿದ್ದೇ ಆಗಿತ್ತು. ಅದಕ್ಕೆ ಮೊದಲೇ ಒಪ್ಪಿಗೆ ನೀಡಲಾಗಿತ್ತು. ಹೀಗಾಗಿ ನೇತಾಜಿ ಸುಭಾಶ್ಚಂದ್ರ ಬೋಸ್ ಕುರಿತ ಬಂಗಾಳದ ಸ್ತಬ್ಧಚಿತ್ರವನ್ನು ತಿರಸ್ಕರಿಸಲಾಯಿತು ಎಂದು ದೀದಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಅದೇ ರೀತಿ, ನಿಗದಿತ ಮಾರ್ಗಸೂಚಿಯನ್ವಯವೇ ಟ್ಯಾಬ್ಲೋಗಳಿಗೆ ಅನುಮತಿ ನೀಡಲಾಗಿದೆ. ತ.ನಾಡಿನ ಸ್ತಬ್ಧಚಿತ್ರಕ್ಕೆ 2017, 2019, 2020 ಮತ್ತು 2021ರಲ್ಲಿ ಅವಕಾಶ ನೀಡಲಾಗಿತ್ತು ಎಂದು ತ.ನಾಡು ಸಿಎಂ ಸ್ಟಾಲಿನ್‌ಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.