ಪೂರ್ಣ ಶಕ್ತಿಯೊಂದಿಗೆ ಗುಜರಾತ್‌ನತ್ತ ಧಾವಿಸಿ ಬರುತ್ತಿದೆ ವಾಯು ಚಂಡಮಾರುತ

Team Udayavani, Jun 12, 2019, 11:25 AM IST

ಮುಂಬಯಿ : ವಾಯು ಚಂಡಮಾರುತ ತನ್ನ ಪೂರ್ಣಶಕ್ತಿಯೊಂದಿಗೆ ಗುಜರಾತ್‌ ಕರಾವಳಿಗೆ ಅಪ್ಪಳಿಸುವ ಸಿದ್ಧತೆ ನಡೆಸುತ್ತಿರುವಂತೆಯೇ ಮುಂಬಯಿ ಮತ್ತು ನೆರೆಕರೆಯ ಮಹಾರಾಷ್ಟ್ರದ ಕೆಲವು ಕರಾವಳಿ ಪ್ರದೇಶಗಳಲ್ಲಿ ಇಂದು ಬುಧವಾರ ಬೆಳಗ್ಗಿನಿಂದ ಅತ್ಯಂತ ಪ್ರಬಲ ಗಾಳಿ ಬೀಸುತ್ತಿದೆ.

ಪ್ರಕೃತ ವಾಯು ಚಂಡ ಮಾರುತ ಗುಜರಾತ್‌ ಆಸುಪಾಸಿನ ಸೌರಾಷ್ಟ್ರ ಮತ್ತು ಕಚ್‌ ಪ್ರದೇಶಗಳತ್ತ ಧಾವಿಸುವುದನ್ನು ಮುಂದುವರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ವಾಯು ಚಂಡಮಾರುತ ಅತ್ಯಂತ ಪ್ರಬಲ ಚಂಡಮಾರುತವಾಗಿ ಶಕ್ತಿ ಪಡೆಯುತ್ತಿದ್ದು ನಾಳೆ ಗುರುವಾರ ಬೆಳಗಿನೊಳಗೆ ಗಂಟೆಗೆ 145ರಿಂದ 170 ಕಿ.ಮೀ. ವೇಗವನ್ನು ಪಡೆಯಲಿದೆ ಎಂದು ಐಎಂಡಿ ಹೇಳಿದೆ.

ಈಚೆಗೆ ಅತ್ಯಂತ ವಿನಾಶಕಾರಿ ಫೋನಿ ಚಂಡಮಾರುತ ಒಡಿಶಾದ ಪುರಿ ಕರಾವಳಿಗೆ ಅಪ್ಪಳಿಸುವ ಮುನ್ನ ಯಾವ ರೀತಿಯ ಮುನ್ನೆಚ್ಚರಿಕೆ, ಸ್ಥಳಾಂತರ, ಕಟ್ಟೆಚ್ಚರದ ಕ್ರಮವನ್ನು ವಹಿಸಲಾಗಿತ್ತೋ ಅದೇ ಮಾದರಿಯ ಕ್ರಮಗಳನ್ನು ಗುಜರಾತ್‌ನಲ್ಲಿ ಈಗಾಗಲೇ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ