ಪಾಕಿಸ್ಥಾನದ ಕರಾಚಿಯಲ್ಲೇ ದಾವೂದ್‌ ಇಬ್ರಾಹಿಂ : ಹೊಸ ಸಾಕ್ಷ್ಯ

Team Udayavani, Jul 6, 2019, 11:20 AM IST

Dawood-Ibrahim-730

ಹೊಸದಿಲ್ಲಿ : 1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದ ಸೂತ್ರಧಾರ ದಾವೂದ್‌ ಇಬ್ರಾಹಿಂ ಪಾಕಿಸ್ಥಾನದ ಕರಾಚಿಯಲ್ಲೇ ಅಡಗಿಕೊಂಡಿರುವ ಬಗ್ಗೆ ಭಾರತೀಯ ರಾಷ್ಟ್ರೀಯ ಮಾಧ್ಯಮಗಳಿಗೆ ಹೊಸ ಸಾಕ್ಷ್ಯ ಲಭಿಸಿದೆ.

51ರ ಹರೆಯದ ದಾವೂದ್‌ ಇಬ್ರಾಹಿಂನ ಡಿ ಕಂಪೆನಿಯ ಅಂತಾರಾಷ್ಟ್ರೀಯ ಸಂಚಾಲಕನಾಗಿರುವ ಝಬೀರ್‌ ಮೋತಿವಾಲಾ , ದಾವೂದ್‌ ಇಬ್ರಾಹಿಂ ನನ್ನು ಈಚೆಗೆ ಕರಾಚಿಯ ಆತನ ಅಡಗುದಾಣದಲ್ಲಿ ಭೇಟಿಯಾದ ಚಿತ್ರಗಳು ಈಗ ಭಾರತೀಯ ಮಾಧ್ಯಮಗಳಿಗೆ ದೊರಕಿದ್ದು ದಾವೂದ್‌ ಪಾಕಿಸ್ಥಾನದಲ್ಲೇ ಇರುವುದು ಇದೀಗ ಮತ್ತೆ ಸಾಬೀತಾಗಿದೆ.

1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದ ಬಳಿಕ ಪಾಕಿಸ್ಥಾನಕ್ಕೆ ಪಲಾಯನ ಗೈದು ಕಳೆದ 25 ವರ್ಷಗಳಿಂದ ಅಲ್ಲೇ ತನ್ನ ಕಾಯಂ ನೆಲೆಯನ್ನು ಕಂಡುಕೊಂಡು ಅಲ್ಲಿಂದಲೇ ತನ್ನ ಜಾಗತಿಕ ಭೂಗತ ಕ್ರಿಮಿನಲ್‌ ಚಟುವಟಿಕೆಗಳನ್ನು ನಡೆಸುತ್ತಿರುವ ದಾವೂದ್‌ ಇಬ್ರಾಹಿಂ, ಪಾಕಿಸ್ಥಾನದಲ್ಲಿ ಇಲ್ಲವೇ ಇಲ್ಲ ಎಂದು ಪಾಕ್‌ ಸರಕಾರ ಹೇಳುತ್ತಿರುವುದೆಲ್ಲ ಕೇವಲ ಬೊಗಳೆ ಎಂದು ಈಚೆಗೆ ಅಮೆರಿಕ ಕೂಡ ಬ್ರಿಟನ್‌ ಕೋರ್ಟಿನಲ್ಲಿ ಹೇಳಿತ್ತು.

ಅದಕ್ಕೆ ಪೂರಕವಾಗಿ ಇದೀಗ ಭಾರತೀಯ ಮಾಧ್ಯಮಗಳಿಗೆ ಲಭಿಸಿರುವ ದಾವೂದ್‌ ಮತ್ತು ಆತನ ಬಲಗೈ ಬಂಟ, ಅತ್ಯಂತ ನಂಬಿಗಸ್ಥ ನಿಕಟವರ್ತಿ, ಝಬೀರ್‌ ಮೋತಿವಾಲಾ ಜೊತೆಯಾಗಿ ಕಾಣಿಸಿಕೊಂಡಿರುವ ತಾಜಾ ಫೋಟೋಗಳು ದಾವೂದ್‌ ಪಾಕಿಸ್ಥಾನದ ಕರಾಚಿಯಲ್ಲೇ ಇರುವುದನ್ನು ದೃಢಪಡಿಸಿವೆ ಎಂದು ವರದಿಗಳು ಹೇಳಿವೆ.

ಮಾಧ್ಯಮಗಳ ಕೈವಶವಾಗಿರುವ ಈ ಫೋಟೋದಲ್ಲಿ ಕ್ಲೀನ್‌ ಶೇವ್‌ ಮಾಡಿಕೊಂಡಿರುವ ದಾವೂದ್‌ ಇಬ್ರಾಹಿಂ, ತನ್ನ ನಂಬಿಗಸ್ಥ ನಿಕಟವರ್ತಿ ಮೋತಿವಾಲಾ ಜತೆಗೆ ಮಾತುಕತೆಯಲ್ಲಿ ನಿರತವಾಗಿರುವುದು ಕಂಡು ಬರುತ್ತದೆ.

ಈ ಮೊದಲು ದಾವೂದ್‌ ಅಸ್ವಸ್ಥನಿರುವುದಾಗಿಯೂ ಮೊಣಕಾಲ ಗಂಟು ನೋವಿನಿಂದ ತೀವ್ರವಾಗಿ ಬಳಲುತ್ತಿರುವುದಾಗಿಯೂ ಹೇಳಲಾಗಿತ್ತು. ಆದರೆ ಈ ತಾಜಾ ಫೋಟೋಗಳ‌ಲ್ಲಿ ದಾವೂದ್‌ ಆರೋಗ್ಯವಂತನಿರುವುದು ಕಂಡು ಬರುತ್ತದೆ.

ಅಂದ ಹಾಗೆ ಮೋತಿವಾಲಾ ಕರಾಚಿಯಲ್ಲಿ ದಾವೂದ್‌ ವಾಸವಾಗಿರುವ ಕ್ಲಿಫ್ಟನ್‌ ಹೌಸ್‌ ಸನಿಹದ ಬಂಗ್ಲೆಯಲ್ಲೇ ವಾಸಿಸುತ್ತಿದ್ದಾನೆ. ದಾವೂದ್‌ ಪತ್ನಿ ಮೆಹಜಬೀನ್‌ ಮತ್ತು ಪುತ್ರ ಮೊಯಿನ್‌ ನವಾಜ್‌ ಜತಗೆ ಮೋತಿವಾಲಾಗೆ ಕೌಟುಂಬಿಕ ನಂಟು ಇದೆ ಎಂದು ವರದಿಗಳು ತಿಳಿಸಿವೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.