Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

ದಿಲ್ಲಿಯಲ್ಲಿ ಬಿಸಿಗಾಳಿ ಪ್ರತಾಪ... ಕೇರಳದಲ್ಲಿ ಮುಂಗಾರು ಮುನ್ನ ಭಾರೀ ಮಳೆ

Team Udayavani, May 21, 2024, 6:45 AM IST

IMD

ಹೊಸದಿಲ್ಲಿ: ದಿಲ್ಲಿಯಲ್ಲಿ ಹಾಲಿ ಸಾಲಿನ ಗರಿಷ್ಠ ತಾಪಮಾನ ಮಂಗಳವಾರ ಕೂಡ 47 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸೋಮವಾರವೇ ಮುಂದಿನ 5 ದಿನಗಳ ಬಿಸಿಯ ಗಾಳಿಯ ಅಲರ್ಟ್‌ ಅನ್ನು ಭಾರ ತೀಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಜೂ. 30ರವರೆಗೆ ಖಾಸಗಿ ಶಾಲೆಗಳಿಗೆ ರಜೆ ನೀಡಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಬೇಸಗೆ ರಜೆ ಆದೇಶ ನೀಡಿದರೂ, ಕೆಲವೊಂದು ಖಾಸಗಿ ಶಾಲೆಗಳಲ್ಲಿ ತರಗತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಈ ನಡುವೆ, ಹೊಸದಿಲ್ಲಿಯಲ್ಲಿ ಸೋಮವಾರ ಕೂಡ ದಿನದ ತಾಪಮಾನ 47 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿಯೇ ಮುಂದುವರಿದಿದೆ. ನಜಾಫ್ಗಢದಲ್ಲಿ 47.4 ಡಿಗ್ರಿ ಸೆಲ್ಸಿಯಸ್ , ಮುಂಗೇಶ್‌ಪುರದಲ್ಲಿ 47.1, ಆಯಾ ನಗರದಲ್ಲಿ 45.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖ ಲಾಗಿದೆ. ಸಾಮಾನ್ಯ ತಾಪಮಾನ 3.7 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿದ್ಯುತ್‌ ಬಳಕೆಯಲ್ಲಿ ಭಾರಿ ಏರಿಕೆ: ಬಿಸಿ ಗಾಳಿ ಮತ್ತು ತಾಪ ಮಾನ ದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಯಲ್ಲಿ ದಿಲ್ಲಿಯಲ್ಲಿ ವಿದ್ಯುತ್‌ ಬಳಕೆ ಹೆಚ್ಚಾಗಿದೆ. ವಿದ್ಯುತ್‌ ಇಲಾಖೆ ನೀಡಿದ ಮಾಹಿತಿ ಪ್ರಕಾರ ಸೋಮವಾರದ ವರೆಗೆ 7557 ಮೆಗಾ ವ್ಯಾಟ್‌ ವಿದ್ಯುತ್‌ ಬಳಕೆಯಾಗಿದೆ. ಮೇ ತಿಂಗಳಿಗೆ ಸಂಬಂಧಿಸಿದಂತೆ ಇದು ಅತ್ಯಧಿಕ ವಿದ್ಯುತ್‌ ಬಳಕೆ. ಕಳೆದ ವರ್ಷದ ಆ.22ರಂದು 7438 ಮೆ.ವ್ಯಾ. ವಿದ್ಯುತ್‌ ಬಳಕೆಯಾಗಿತ್ತು. 2022 ಜೂ.29ರಂದು ದಿಲ್ಲಿಯಲ್ಲಿ 7695 ಮೆ.ವ್ಯಾ. ವಿದ್ಯುತ್‌ ಬಳಕೆಯಾಗಿದ್ದು ಇದುವರೆಗಿನ ದಾಖಲೆ.

ಕೇರಳದಲ್ಲಿ ಮಳೆ: ಒಬ್ಬ ನೀರು ಪಾಲು
ತಿರುವನಂತಪುರ: ಮಾಸಾಂತ್ಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ನವೇ ಮಳೆ ಬಿರುಸಾಗಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಬಿಹಾರ ಮೂಲದ ಕಾರ್ಮಿಕ ನೀರುಪಾಲಾಗಿದ್ದಾನೆ. ಪ್ರವಾಹ ಉಂಟಾಗಿದ್ದರೂ ನದಿ ಯಲ್ಲಿ ಈಜಲು ಹೋಗಿದ್ದೇ ಘಟನೆಗೆ ಕಾರಣ. ಇಡುಕ್ಕಿ ಜಿಲ್ಲೆಯಲ್ಲಿ ಮರ ಬಿದ್ದು ಇಬ್ಬರಿಗೆ ಗಾಯಗಳಾಗಿವೆ. ಆಲಪ್ಪುಳ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾ ಗಿದೆ. ಹಲವೆಡೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದು, ವಿದ್ಯುತ್‌ ಸಂಪರ್ಕ ದಲ್ಲಿ ವ್ಯತ್ಯಯವಾಗಿದೆ.

ಟಾಪ್ ನ್ಯೂಸ್

Mudhol: ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಮಹಿಳೆ ಸಾವು

Mudhol: ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಮಹಿಳೆ ಸಾವು

Thirthahalli ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು!

Thirthahalli ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು!

1-asdsadsa

Kuwait ಅಗ್ನಿ ದುರಂತ; ಸಂತ್ರಸ್ತ ಕುಟುಂಬಗಳಿಗೆ ಸಂಪೂರ್ಣ ನೆರವು: NBTC MD

MB Patil 2

Development ದೃಷ್ಟಿಯಿಂದ ಪೆಟ್ರೋಲ್-ಡಿಸೇಲ್ ದರ ಏರಿಕೆ: ಎಂ.ಬಿ.ಪಾಟೀಲ್

1-sadadasd

Yadgir: ರೀಲ್ಸ್ ಮಾಡಿದ ಯುವಕನಿಗೆ ಜೀವ ಬೆದರಿಕೆ ಹಾಕಿದ ಡಿ.ಬಾಸ್ ಸಂಘದ ಜಿಲ್ಲಾಧ್ಯಕ್ಷ!

1-sad-sada

Renuka Swamy ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ ಚಲನಚಿತ್ರ ವಾಣಿಜ್ಯ ಮಂಡಳಿ

Congress ಸರ್ಕಾರದಿಂದ ವಾಹನ ಸವಾರರಿಗೆ ಗ್ಯಾರಂಟಿ ಬರೆ: ಸಂಸದ ಈರಣ್ಣ ಕಡಾಡಿ

Congress ಸರ್ಕಾರದಿಂದ ವಾಹನ ಸವಾರರಿಗೆ ಗ್ಯಾರಂಟಿ ಬರೆ: ಸಂಸದ ಈರಣ್ಣ ಕಡಾಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsadsa

Kuwait ಅಗ್ನಿ ದುರಂತ; ಸಂತ್ರಸ್ತ ಕುಟುಂಬಗಳಿಗೆ ಸಂಪೂರ್ಣ ನೆರವು: NBTC MD

Water Supply

Delhi: ಮಾನವೀಯತೆಯಿಂದ ನೀರು ಬಿಡಲು ಹರಿಯಾಣಕ್ಕೆ ಎಎಪಿ ಸರಕಾರ ಒತ್ತಾಯ

crime (2)

Surat; ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢವಾಗಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆ

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

7

Uttarakhand: ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 12 ಮಂದಿ ದುರ್ಮರಣ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

Mudhol: ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಮಹಿಳೆ ಸಾವು

Mudhol: ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಮಹಿಳೆ ಸಾವು

Thirthahalli ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು!

Thirthahalli ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು!

1-ewewe

ಸಂಭವನೀಯ ಪ್ರವಾಹ ನಿರ್ವಹಣೆಗೆ ಸಿದ್ಧವಾಗಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ

KARADI (2)

Jagalur ; ರೈತನ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಮೂರು ಕರಡಿಗಳು

1-asdsadsa

Kuwait ಅಗ್ನಿ ದುರಂತ; ಸಂತ್ರಸ್ತ ಕುಟುಂಬಗಳಿಗೆ ಸಂಪೂರ್ಣ ನೆರವು: NBTC MD

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.