ಸಾಲ ತೀರಿಸಲು 11 ವರ್ಷದ ಮಗಳಿಗೆ ಮದುವೆ ಮಾಡಿಸಿದ ತಂದೆ!

Team Udayavani, Aug 1, 2018, 1:48 PM IST

ನವದೆಹಲಿ:ಸಾಲ ತೀರಿಸುವ ಉದ್ದೇಶದಿಂದ 11 ವರ್ಷದ ಬಾಲಕಿಯನ್ನು 25 ವರ್ಷದ ಯುವಕನ ಜೊತೆ ತಂದೆ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ 2 ತಿಂಗಳ ಹಿಂದೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಭಾನುವಾರ ರಾತ್ರಿ ಬಾಲಕಿಯ ತಾಯಿ ದೂರನ್ನು ದಾಖಲಿಸಿದ್ದಾರೆ. 2006ರ ಬಾಲ್ಯ ವಿವಾಹ ನಿಷೇಧ ಕಾಯ್ದೆ ಸೆಕ್ಷನ್ 9 ಮತ್ತು 10ರ ಅನ್ವಯ ಬಾಲಕಿಯ ತಂದೆ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ದೂರಿನ ಪ್ರಕಾರ ಬಾಲಕಿಯ ತಂದೆ, ಗಂಡ ಹಾಗೂ ಮದುವೆ ದಳ್ಳಾಳಿಯನ್ನು ಬಂಧಿಸಿರುವುದಾಗಿ ಸರ್ಜಾಪುರ್ ಪೊಲೀಸ್ ಠಾಣಾಧಿಕಾರಿ ಮನೋಜ್ ಕುಮಾರ್ ಪಂತ್ ತಿಳಿಸಿದ್ದಾರೆ.

ದಳ್ಳಾಳಿ ವಿನೋದ್ ಎಂಬಾತ ದಿನಂಪ್ರತಿ ಮನೆಗೆ ಹಾಲು ತಂದು ಕೊಡುತ್ತಿದ್ದು, ಈ ವೇಳೆ ಬಾಲಕಿಯ ತಂದೆ ಬಳಿ ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರವಾಗಬೇಕಾದರೆ ಮದುವೆ ಮಾಡಿಸಿ ಎಂದು ಸಲಹೆ ಕೊಟ್ಟಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಾಲಕಿಯನ್ನು ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಗ್ರಾಮವೊಂದರ ಕೃಷಿ ಕುಟುಂಬದ ಯುವಕನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಏತನ್ಮಧ್ಯೆ 11 ವರ್ಷದ ಬಾಲಕಿಯ ಎದೆ ಮತ್ತು ಬಲಗೈ ಮೇಲೆ ಕೆಲವು ಗಾಯದ ಕಲೆಗಳಿರುವುದನ್ನು ತಾಯಿ ಗಮನಿಸಿದ್ದಳು. ಬಾಲಕಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಲೈಂಗಿಕ ಕ್ರಿಯೆಗಾಗಿ ಬಲವಂತಪಡಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಪೋಷಕರು ಬಾಲಕಿಗೆ ಕೊಟ್ಟಿದ್ದ ಫೋನ್ ಅನ್ನು ಒಡೆದು ಅದರ ಸಿಮ್ ಅನ್ನು ಕೂಡಾ ಕಿತ್ತು ಬಿಸಾಕಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಆರಂಭದಲ್ಲಿ ಈ ಮದುವೆಗೆ ನಾನು ವಿರೋಧ ವ್ಯಕ್ತಪಡಿಸಿದ್ದೆ. ಆದರೆ ನನ್ನ ಮದುವೆಯಾಗುವ ಯುವಕ ಬಲವಂತ ಮಾಡಿಸಿ ಪೋಷಕರನ್ನು ಒಪ್ಪಿಸಿದ್ದ. ಕೊನೆಗೂ ಮದುವೆ ನಡೆದ ಮೇಲೆ ಕಿರುಕುಳ ಆರಂಭಿಸಿದ್ದರು.ಬಳಿಕ ಉತ್ತರಪ್ರದೇಶದ ಬುಲಂದ್ ಶಹಾರ್ ನ ಔರಂಗಬಾದ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಹೋದಾಗ ನಿಮ್ಮ ಊರಿನ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಎಂದು ಸಲಹೆ ನೀಡಿದ್ದರು. ಅದರಂತೆ ಸರ್ಜಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಬಾಲಕಿ ವಿವರಿಸಿದ್ದಾಳೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ