ಡಾಲರ್‌, ದಿರ್ಹಮ್‌ ಡ್ರಗ್‌ ಕೋಡ್‌ವರ್ಡ್‌!

ರಹಸ್ಯ ಹೆಸರುಗಳಿಂದ ನಡೆಯುತ್ತಿತ್ತು ಘಾತಕ ಮಾದಕ ವಹಿವಾಟು

Team Udayavani, Sep 3, 2020, 9:13 AM IST

ಡಾಲರ್‌, ದಿರ್ಹಮ್‌ ಡ್ರಗ್‌ ಕೋಡ್‌ವರ್ಡ್‌!

ಮುಂಬೈ/ನವದೆಹಲಿ: ಡಾಲರ್‌, ದಿರ್ಹಮ್‌, ಬ್ರಿಟಿಷ್‌ ಪೌಂಡ್‌, ಐಎನ್‌ಆರ್‌… ಇವುಗಳು ವಿವಿಧ ದೇಶಗಳ ಕರೆನ್ಸಿಗಳಲ್ಲವೇ ಎಂದು ನೀವು ಪ್ರಶ್ನಿಸಬಹುದು. ನಿಜ. ಆದರೆ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು ಮಾತ್ರ ಈ ‘ಕರೆನ್ಸಿ’ ಗಳ ಹಿಂದಿನ ಸತ್ಯವನ್ನು ಬಯಲು ಮಾಡಿವೆ.

ಬಿ-ಟೌನ್‌ನಲ್ಲಿನ ಮಾದಕದ್ರವ್ಯ ಜಾಲವು ವಿವಿಧ ಡ್ರಗ್‌ಗಳಿಗೆ ಇಟ್ಟಿರುವ ಕೋಡ್‌ವರ್ಡ್ ಗಳಿವು. ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಮಾದಕದ್ರವ್ಯಗಳನ್ನು ಪೂರೈಸುತ್ತಿರುವ ಡ್ರಗ್‌ ಪೆಡ್ಲರ್‌ಗಳು, ಒಂದೊಂದು ಡ್ರಗ್‌ಗೂ ಒಂದೊಂದು ಕರೆನ್ಸಿಯ ಹೆಸರನ್ನು ಕೋಡ್‌ವರ್ಡ್‌ ಗಳಾಗಿ ಬಳಸುತ್ತಿದ್ದರು.

ಇಲ್ಲಿ ವೀಡ್‌ ಎಂಬ ಡ್ರಗ್‌ ಅನ್ನು ಡಾಲರ್‌ ಎಂದೂ, ಸ್ಟ್ರಾಬೆರಿ ಕುಶ್‌ ಅನ್ನು ದಿರ್ಹಮ್‌ ಎಂದೂ, ಬ್ಲೂಬೆರಿ ಕುಷ್‌ ಅನ್ನು ಬ್ರಿಟಿಷ್‌ ಪೌಂಡ್‌ ಎಂದೂ, ಲೋಕಲ್‌ ವೀಡ್‌ ಅನ್ನು ಐಎನ್‌ಆರ್‌ ಎಂದೂ ರಹಸ್ಯ ಹೆಸರುಗಳಿಂದ ಕರೆಯಲಾಗುತ್ತಿತ್ತು.

ಕರಣ್‌ ವಿರುದ್ಧ ಕಂಗನಾ ಗಂಭೀರ ಆರೋಪ:
ಬಾಲಿವುಡ್‌ನ‌ಲ್ಲಿರುವ ಮಾಫಿಯಾದ ಮೂಲ ಸೂತ್ರಧಾರಿ, ನಟ-ನಿರ್ದೇಶಕ ಕರಣ್‌ ಜೋಹರ್‌ ಎಂದು ನಟಿ ಕಂಗನಾ ರಣೌತ್‌ ಮತ್ತೂಮ್ಮೆ ಆಪಾದಿಸಿದ್ದಾರೆ. ನಟ ಸುಶಾಂತ್‌ ಸಿಂಗ್‌ ರಜಪೂತ್‌ರ ನಿಧನದ ನಂತರ ಉದ್ಭವಿಸಿರುವ ಬಾಲಿವುಡ್‌ನ‌ ನೆಪೋಟಿಸಂ ಬಗ್ಗೆ ಆರಂಭದಿಂದಲೂ ಹೇಳಿಕೆ ನೀಡುತ್ತಾ ಬಂದಿರುವ ಕಂಗನಾ, ಈ ಬಾರಿ ಮತ್ತಷ್ಟು ಗಾಢ ವಾದ ಆರೋಪ ಮಾಡಿದ್ದಾರೆ.

ಬಾಲಿವುಡ್‌ನ‌ ನಟ- ನಟಿಯ ಮಕ್ಕಳಿಗೆ ಸಿಗುವಂಥ ಪ್ರೋತ್ಸಾಹ ಹೊರಗಿನಿಂದ ಬಂದ ಕಲಾವಿದರಿಗೆ ಸಿಗುವು ದಿಲ್ಲ..ಇದನ್ನು ರೂಪಿಸುವ ದೊಡ್ಡ ದೊಂದು
ಮಾಫಿಯಾವನ್ನು ಕರಣ್‌ ಜೋಹರ್‌ ಅವರೇ  ನಿಯಂತ್ರಿಸುತ್ತಿದ್ದಾರೆ ಎಂದು ಅವರ ಟೀಕಿಸಿದ್ದಾರೆ.

ರಿಯಾ ತಮ್ಮನಿಗೆ ಡ್ರಗ್‌ ಪೂರೈಸುತ್ತಿದ್ದವರ ಬಂಧನ
ಡ್ರಗ್‌ ಮಾಫಿಯಾದ ಉರುಳು ಬಾಲಿವುಡ್‌ನ‌ ಕೊರಳಿಗೆ ಸುತ್ತಲಾರಂಭಿಸಿದ್ದು, ಬುಧವಾರ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಮುಂಬೈನಲ್ಲಿ ಇಬ್ಬರು ಡ್ರಗ್‌ ಪೂರೈಕೆದಾರರನ್ನು ಬಂಧಿಸಿದೆ. ರಿಯಾ ಚಕ್ರವರ್ತಿಯ ಸಹೋದರ ಶೋವಿಕ್‌ಗೆ ಡ್ರಗ್‌ ಪೂರೈಸುತ್ತಿದ್ದ ಬಾಂದ್ರಾದ ಅಬ್ದುಲ್‌ ಬಾಸಿತ್‌ ಪರಿಹಾರ್‌ ಮತ್ತು ಅಂಧೇರಿಯ ಜೈದ್‌ ವಿಲಾತ್ರಾ ಎಂಬವರೇ ಬಂಧಿತರು. ಈ ಆರೋಪಿಗಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮನೆಯ ಮ್ಯಾನೇಜರ್‌ ಸ್ಯಾಮುವೆಲ್‌ ಮಿರಾಂಡಾ ಎಂಬವರಿಗೆ ಡ್ರಗ್‌ಗಳನ್ನು ಹಸ್ತಾಂತರಿಸುತ್ತಿದ್ದರು ಎಂದು ಎನ್‌ಸಿಬಿ ಹೇಳಿದೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.