ವ್ಯಾಪಾರಕ್ಕಾಗಿ ವೈದ್ಯರಿಗೆ ಸಾವಿರ ಕೋಟಿ ಮೌಲ್ಯದ ಉಚಿತ ಉಡುಗೊರೆ!: ಡೋಲೊ ವಿರುದ್ಧ ಆರೋಪ
Team Udayavani, Aug 19, 2022, 6:40 AM IST
ನವದೆಹಲಿ: ಕೊರೊನಾ ಸಮಯದಲ್ಲಿ ಅತಿ ಹೆಚ್ಚು ಬಳಕೆಯಾದ “ಡೋಲೊ’ ಮಾತ್ರೆಯ ಉತ್ಪಾದಕ ಸಂಸ್ಥೆಯು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ವೈದ್ಯರಿಗೆ ಉಚಿತ ಉಡುಗೊರೆಗಳನ್ನು ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಸುಪ್ರೀಂ ಕೋರ್ಟ್ಗೆ ಹೇಳಿದೆ. ವೈದ್ಯರು ರೋಗಿಗಳಿಗೆ ಡೋಲೊ ಮಾತ್ರೆಯನ್ನೇ ನಿರ್ದೇಶಿಸುವಂತೆ ಮಾಡಲು ಒಟ್ಟು 1000 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳನ್ನು ಸಂಸ್ಥೆ ವೈದ್ಯರಿಗೆ ನೀಡಿದೆ ಎಂದು ಸಂಘವು ದೂರಿದೆ.
ದೇಶದಲ್ಲಿ ಔಷಧಗಳ ಬೆಲೆ ನಿಯಂತ್ರಣ ವಿಚಾರದಲ್ಲಿ ಸಂಘವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದೇ ಸಮಯದಲ್ಲಿ ಔಷಧೀಯ ಸಂಸ್ಥೆಗಳು ವೈದ್ಯರಿಗೆ ಉಚಿತ ಉಡುಗೊರೆಗಳನ್ನು ಲಂಚದ ರೂಪದಲ್ಲಿ ಕೊಡುತ್ತಿವೆ ಎಂದು ಸಂಘ ದೂರಿದ್ದು, ಅದಕ್ಕೆ ಡೋಲೊ ಅನ್ನು ಉದಾಹರಣೆಯಾಗಿ ಕೊಟ್ಟಿದೆ. ಇದೇ ರೀತಿ ಇನ್ನೂ ಅನೇಕ ಸಂಸ್ಥೆಗಳು ಮಾಡುತ್ತಿದ್ದು ಅವುಗಳ ಮೇಲೆ ನಿಯಂತ್ರಣಕ್ಕೆ ಸಂಘ ಕೋರಿದೆ. ಸದ್ಯ ಔಷಧೀಯ ಸಂಸ್ಥೆಗಳಿಗೆ ನಿಯಮಗಳನ್ನು ಮಾಡುವಂತೆ ಕೇಂದ್ರಕ್ಕೆ ಸೂಚಿಸಬೇಕೆಂದು ಕೋರಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ