ಲೈಸೆನ್ಸ್ ರದ್ದು ಕೇಸ್; ಕಚೇರಿಯೊಳಗೆ ನುಗ್ಗಿ ಗುಂಡು ಹಾರಿಸಿ ಅಧಿಕಾರಿ ಹತ್ಯೆ!

Team Udayavani, Mar 30, 2019, 3:14 PM IST

ಚಂಡೀಗಢ್: ಕಚೇರಿಯೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮಹಿಳಾ ಅಧಿಕಾರಿಯನ್ನು ಗುಂಡಿಟ್ಟು ಕೊಂದ ಘಟನೆ ಪಂಜಾಬ್ ನ ಮೋಹಾಲಿ ಸಮೀಪದ ಖಾರರ್ ನಲ್ಲಿ ನಡೆದಿದೆ.

ದಶಕಗಳಿಂದ ಫಾರ್ಮಸಿಯನ್ನು ನಡೆಸುತ್ತಿದ್ದ ಮಾಲೀಕನ ಫಾರ್ಮಸಿ ಲೈಸೆನ್ಸ್ ಅನ್ನು ಮಹಿಳಾ ಅಧಿಕಾರಿ ರದ್ದುಪಡಿಸಿದ್ದರು. ಇದೇ ಘಟನೆ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ ಎಂಬುದಾಗಿ ವರದಿ ಹೇಳಿದೆ.

ಖಾರರ್ ಕಚೇರಿಯೊಳಕ್ಕೆ ನುಗ್ಗಿದ್ದ ವ್ಯಕ್ತಿ ಏಕಾಏಕಿ ನೇಹಾ ಶೋರೀ(36) ಎಂಬ ಅಧಿಕಾರಿ ಮೇಲೆ 2 ಸುತ್ತು ಗುಂಡು ಹಾರಿಸಿದ್ದ. ಘಟನೆ ನಂತರ ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಸುತ್ತುವರಿದು ಸೆರೆಹಿಡಿದಿರುವುದಾಗಿ ವರದಿ ವಿವರಿಸಿದೆ.

2016ರಿಂದ ಎಫ್ ಡಿಎನ ಝೋನಲ್ ಅಧಿಕಾರಿಯಾಗಿ ನೇಹಾ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಯನ್ನು ಬಲ್ವಿಂದರ್ ಸಿಂಗ್(50) ಎಂದು ಗುರುತಿಸಲಾಗಿದೆ. ಈತ ಮೋರಿಂಡಾದಲ್ಲಿ ಔಷಧದ ಅಂಗಡಿ ಹೊಂದಿದ್ದ. ಏತನ್ಮಧ್ಯೆ ಸಿಂಗ್ ಮಾಲೀಕತ್ವದ ಔಷಧ ಮಳಿಗೆಯ ಪರವಾನಿಗೆಯನ್ನು ನೇಹಾ ರದ್ದುಗೊಳಿಸಿದ್ದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ತಪಾಸಣೆ ನಡೆಸಿದ ನಂತರ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ, ಆರೋಪಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ