EPFO;ಜನನ ದಿನಾಂಕಕ್ಕೆ ಆಧಾರ್ ಕಾರ್ಡ್ ದಾಖಲೆಯಲ್ಲ! ;ಅದು ಗುರುತಿನ ದೃಢೀಕರಣವಷ್ಟೆ
ಜನನ ದಿನಾಂಕಕ್ಕೆ ಏನೇನು ದಾಖಲೆ ನೀಡಬಹುದು?
Team Udayavani, Jan 19, 2024, 6:25 AM IST
ಹೊಸದಿಲ್ಲಿ: ಜನನ ದಿನಾಂಕದ ದಾಖಲೆಯಾಗಿ ಇನ್ನು ಮುಂದೆ ಆಧಾರ್ ಕಾರ್ಡ್ ಅನ್ನು ಪರಿಗಣಿಸಲಾಗುವುದಿಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಗುರುವಾರ ಸ್ಪಷ್ಟಪಡಿಸಿದೆ.
ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ(ಯುಐಡಿಐಎ)ದ ನಿರ್ದೇಶನದ ಅನ್ವಯ ಈ ನಿರ್ಧಾರ ಕೈಗೊಂಡಿರುವುದಾಗಿ ಇಪಿಎಫ್ಒ ತಿಳಿಸಿದೆ. ಜತೆಗೆ, ಜನನ ದಿನಾಂಕದ ತಿದ್ದುಪಡಿಗೆ ಸ್ವೀಕಾರಾರ್ಹವಾದ ದಾಖಲೆಗಳ (ಪ್ರೂಫ್) ಪಟ್ಟಿಯಿಂದ ಆಧಾರ್ ಕಾರ್ಡ್ ಅನ್ನು ತೆಗೆದುಹಾಕಲಾಗಿದೆ.
ಆಧಾರ್ ಸಂಖ್ಯೆಯನ್ನು ಒಬ್ಬ ವ್ಯಕ್ತಿಯ ಗುರುತನ್ನು ದೃಢಪಡಿಸುವ ಉದ್ದೇಶದಿಂದ ನೀಡಲಾಗಿದೆಯೇ ವಿನಾ ಅದು ಆತನ ಜನನ ದಿನಾಂಕಕ್ಕೆ ಪುರಾವೆಯಾಗಲ್ಲ ಎಂದು ಕಳೆದ ವರ್ಷದ ಡಿಸೆಂಬರ್ನಲ್ಲಿ ಯುಐಡಿಐಎ ಸುತ್ತೋಲೆ ಹೊರಡಿಸಿತ್ತು.
ಜನನ ದಿನಾಂಕಕ್ಕೆ ಏನೇನು ದಾಖಲೆ ನೀಡಬಹುದು?
ಶಾಲಾ ವರ್ಗಾವಣೆ ಪ್ರಮಾಣಪತ್ರ
ಪ್ಯಾನ್ ಕಾರ್ಡ್
ಕೇಂದ್ರ/ರಾಜ್ಯ ಪಿಂಚಣಿ ಪಾವತಿ ಆದೇಶ
ಸರಕಾರ ನೀಡಿರುವ ವಾಸ್ತವ್ಯ ಪ್ರಮಾಣಪತ್ರ
ಪಾಸ್ಪೋರ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ