ಬ್ಯಾಂಕ್ ಠೇವಣಿ ಮೇಲೆ ಬಡ್ಡಿ ದರ ಹೆಚ್ಚಳ ನಿರೀಕ್ಷೆ
Team Udayavani, Jan 9, 2018, 6:45 AM IST
ಮುಂಬಯಿ: ಬ್ಯಾಂಕ್ಗಳಲ್ಲಿ ಸಾಲ ನೀಡಿಕೆ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಠೇವಣಿಗಳ ಮೇಲೆ ಬಡ್ಡಿ ದರ ಹೆಚ್ಚುವ ನಿರೀಕ್ಷೆ ಮೂಡಿದೆ. 2017ರಲ್ಲಿ ಒಟ್ಟು ಸಾಲ ನೀಡಿಕೆ ಡಿಸೆಂಬರ್ 22ರ ವರೆಗೆ 81 ಲಕ್ಷ ಕೋಟಿ ರೂ. ಆಗಿದ್ದು, ಶೇ. 10.7ಕ್ಕೆ ಏರಿಕೆಯಾಗಿದೆ. 2016ರಲ್ಲಿ ಇದು ಶೇ. 4.7 ಆಗಿತ್ತು. ಆದರೆ ಠೇವಣಿ ಪ್ರಮಾಣ ಕೇವಲ ಶೇ 4ರಷ್ಟು ಏರಿಕೆಯಾಗಿದ್ದು, 109 ಕೋಟಿ ರೂ. ಆಗಿದೆ. ಇದು 2016ರ ಅವಧಿಯಲ್ಲಿ ಶೇ. 14.7 ಆಗಿತ್ತು. ಕಳೆದ ಎರಡು ವರ್ಷಗಳಲ್ಲಿ 200 ಮೂಲಾಂಶದಷ್ಟು ಬಡ್ಡಿ ದರವನ್ನು ಕಡಿಮೆ ಮಾಡಿರುವುದರಿಂದ, ಠೇವಣಿ ಇಡುವವರು ಇತರ ವಿಧಾನಗಳತ್ತ ಮೊರೆ ಹೋಗಿದ್ದಾರೆ. ಹೀಗಾಗಿ ಅವರನ್ನು ಸೆಳೆಯಲು ಬ್ಯಾಂಕ್ಗಳು ಠೇವಣಿಯ ಮೇಲೆ ಬಡ್ಡಿ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ.