ಸಿಎಂ ಯೋಗಿ ಮುಂದೆ ಮಂಡಿಯೂರಿದ ಅಧಿಕಾರಿ

Team Udayavani, Jul 29, 2018, 6:00 AM IST

ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಎದುರು ಪೊಲೀಸ್‌ ಅಧಿಕಾರಿ ಮಂಡಿಯೂರಿ ಕುಳಿತು ಆಶೀರ್ವಾದ ಪಡೆಯುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗೋರಖ್‌ನಾಥ ಮಠದ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸ್‌ ಅಧಿಕಾರಿ ಪ್ರವೀಣ್‌ ಸಿಂಗ್‌ ಅವರೇ ಸಿಎಂ ಯೋಗಿ ಮುಂದೆ ಮಂಡಿಯೂರಿ ಕುಳಿತ ವರು. ಈ ಕುರಿತು ಪ್ರತಿಕ್ರಿಯಿಸಿರುವ ಪ್ರವೀಣ್‌ ಸಿಂಗ್‌, ಗುರುಪೂರ್ಣಿಮೆಯಾದ್ದರಿಂದ ನನ್ನ ಕರ್ತವ್ಯದ ಅವಧಿ ಮುಗಿದ ಬಳಿಕ ನಾನು ಮಹಾಂತ ಯೋಗಿ ಆದಿತ್ಯನಾಥ್‌ರಿಗೆ ಭಕ್ತಿಪೂರ್ವಕವಾಗಿ ನಮನ ಸಲ್ಲಿಸಿದೆ ಎಂದಿದ್ದಾರೆ.
 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ