ಗೋವಾ: ಕಜಕಿಸ್ತಾನದಿಂದ ಪ್ರವಾಸಿಗರನ್ನು ಹೊತ್ತು ಬಂದ ಚಾರ್ಟರ್ ವಿಮಾನ
Team Udayavani, Dec 15, 2021, 1:41 PM IST
ಪಣಜಿ: ಕೋವಿಡ್ ಮಹಾಮಾರಿಯ ನಂತರ ಇದೀಗ ಗೋವಾದಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಸೃಷ್ಠಿಯಾಗಿದೆ ಎಂಬ ಭರವಸೆ ವ್ಯಕ್ತವಾಗುತ್ತಿದೆ. ಪ್ರಸಕ್ತ ಗೋವಾ ಪ್ರವಾಸಿ ಸೀಜನ್ನ ಮೊದಲ ಚಾರ್ಟರ್ ವಿಮಾನವು ಬುಧವಾರ ಬೆಳಿಗ್ಗೆ ಗೋವಾ ದಾಬೋಲಿಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಈ ಕುರಿತು ವಿಮಾನ ನಿಲ್ದಾಣದ ನಿರ್ದೇಶಕ ಗಗನ್ ಮಲಿಕ್ ಮಾಹಿತಿ ನೀಡಿ, “ಏರ್ ಸ್ತಾನಾ” ಚಾರ್ಟರ್ ವಿಮಾನವು ಕಜಕಿಸ್ತಾನದಿಂದ 159 ಪ್ರವಾಸಿಗರನ್ನು ಹೊತ್ತು ಬುಧವಾರ ಬೆಳಿಗ್ಗೆ ಗೋವಾಕ್ಕೆ ಬಂದಿಳಿದಿದೆ. ಪ್ರಸಕ್ತ ಪ್ರವಾಸಿ ಸೀಜನ್ನ ಮೊದಲ ಚಾರ್ಟರ್ ವಿಮಾನ ಇದಾಗಿದೆ ಎಂದರು.
ಗೋವಾ ರಾಜ್ಯವು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಕರೋನಾ ಮಹಾಮಾರಿಯಿಂದಾಗಿ ಕಳೆದ ಸುಮಾರು ಒಂದೂವರೆ ವರ್ಷಗಳ ಕಾಲ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟುಬೀಳುವಂತಾಗಿತ್ತು. ಆದರೆ ಇದೀಗ ಪ್ರವಾಸೋದ್ಯವು ಚೇತರಿಕೆ ಕಾಣುತ್ತಿದೆ. ಗೋವಾ ಪ್ರವಾಸೋದ್ಯಮಕ್ಕೆ ಮೊದಲಿನಂತೆಯೇ ಚೈತನ್ಯ ದೊರೆಯುತ್ತಿದೆ. ಪ್ರಸಕ್ತ ಪ್ರವಾಸಿ ಸೀಜನ್ನ ಮೊದಲ ಚಾರ್ಟರ್ ವಿಮಾನ ಗೋವಾಕ್ಕೆ ಆಗಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!