ವಿದೇಶಿ ಕಾನ್ಸುಲೇಟ್ ಅಧಿಕಾರಿಣಿ ಮೇಲೆ ಲೈಂಗಿಕ ಹಲ್ಲೆ, ಆರೋಪಿ ಸೆರೆ
Team Udayavani, Apr 14, 2018, 11:56 AM IST
ಕೋಲ್ಕತ : ವಿದೇಶಿ ಕಾನ್ಸುಲೇಟ್ ಕಾರ್ಯಾಲಯದ ಹಿರಿಯ ಮಹಿಳಾ ಅಧಿಕಾರಿಯೋರ್ವರನ್ನು ಕಾರ್ಯಾಲಯದ ಪಕ್ಕದಲ್ಲೇ ವ್ಯಕ್ತಿಯೊಬ್ಬ ಲೈಂಗಿಕ ಹಲ್ಲೆ ಎಸಗಿದ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
”ದೂತಾವಾಸ ಕಚೇರಿಯ ಪಕ್ಕದ ರಸ್ತೆಯಲ್ಲಿ ನಾನು ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ನನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ” ಎಂದು ಸಂತ್ರಸ್ತ ಮಹಿಳಾ ಅಧಿಕಾರಿ ಶೇಕ್ಸ್ಪಿಯರ್ ಶರಣಿ ಪೊಲೀಸ್ ಠಾಣೆಗೆ ಕಳೆದ ಬುಧವಾರ ದೂರು ನೀಡಿದ್ದಾರೆ ಎಂದು ಪೊಲೀಸ್ ಜಂಟಿ ಆಯುಕ್ತ ಪ್ರವೀಣ್ ತ್ರಿಪಾಠಿ ಹೇಳಿದ್ದಾರೆ.
ಮಹಿಳಾ ಅಧಿಕಾರಿಯ ದೂರಿನ ಪ್ರಕಾರ ಪೊಲೀಸರು ಒಡನೆಯೇ ಸಿಸಿಟಿವಿ ಚಿತ್ರಿಕೆಯನ್ನು ಪರಿಶೀಲಿಸಿದಾಗ ಆರೋಪಿ ವ್ಯಕ್ತಿಯ ಕೃತ್ಯ ಹಾಗೂ ಗುರುತು ಪತ್ತೆಯಾಗಿದ್ದು ಆತನು ದಕ್ಷಿಣ ಕೋಲ್ಕತದ ಕಾಲೇಜೊಂದರ ಮೂರನೇ ವರ್ಷದ ವಾಣಿಜ್ಯ ಪದವಿ ತರಗತಿ ವಿದ್ಯಾರ್ಥಿ ಎಂದು ಗೊತ್ತಾಗಿದೆ.
ಪೊಲೀಸರು ಆತನನ್ನು ಗುರುವಾರ ಬಂಧಿಸಿದ್ದು ಆತ ಪ್ರಕೃತ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ ಎಂದು ತ್ರಿಪಾಠಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ