ಬಿಎಸ್ಸೆನ್ನೆಲ್ನಿಂದ 333 ರೂ.ಗೆ, 90 ದಿನ 3ಜಿಬಿ ಡಾಟಾ
Team Udayavani, Apr 22, 2017, 3:45 AM IST
ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋಗೆ ಸಡ್ಡು ಹೊಡೆಯುವಂತೆ ಮತ್ತೆ ಮೂರು ಭರ್ಜರಿ ಆಫರ್ಗಳನ್ನು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಪ್ರಕಟಿಸಿದೆ.
ದಿಲ್ ಖೋಲ್ ಕೆ ಬೋಲ್ (ಎಸ್ಟಿವಿ 349), ಟ್ರಿಪಲ್ ಏಸ್ (ಎಸ್ಟಿವಿ 333), ನೆಹೆÉ ಪರ್ ದೆಹ್ಲಾ (ಎಸ್ಟಿವಿ 395) ಹೆಸರಿನ ಆಫರ್ಗಳನ್ನು ಘೋಷಿಸಿದೆ. ದಿಲ್ ಖೋಲ್ ಕೆ ಬೋಲ್ ಪ್ಲಾನ್ನಲ್ಲಿ ಅನಿಯಮಿತ ಎಸ್ಟಿಡಿ, ಲೋಕಲ್ ಕರೆ ಮತ್ತು ನಿತ್ಯ 2ಜಿಬಿ ಡಾಟಾ ಇದ್ದು, 28 ದಿನ ವ್ಯಾಲಿಡಿಟಿ ಇರಲಿದೆ. ಟ್ರಿಪಲ್ ಏಸ್ ಪ್ಲಾನ್ 90 ದಿನಗಳದ್ದಾಗಿದ್ದು ನಿತ್ಯ 3ಜಿಬಿ ಡಾಟಾ ಲಭ್ಯವಿರಲಿದೆ. ನೆಹೆÉ ಪರ್ ದೆಹ್ಲಾ ಪ್ಲಾನ್ 71 ದಿನ ವ್ಯಾಲಿಡಿಟಿ ಹೊಂದಿದ್ದು, ನಿತ್ಯ 2ಜಿಬಿ ಡಾಟಾ, 3 ಸಾವಿರ ನಿಮಿಷ ಬಿಎಸ್ಎನ್ಎಲ್ನಿಂದ ಬಿಎಸ್ಎನ್ಎಲ್ಗೆ ಉಚಿತ ಕರೆ, ಬಿಎಸ್ಎನ್ಎಲ್ನಿಂದ ಇತರ ನೆಟ್ವರ್ಕ್ಗೆ 1800 ನಿಮಿಷ ಉಚಿತ ಕರೆ ಇರಲಿದೆ.