ಹಾರಾಡುತ್ತಲೇ ವಿಮಾನಕ್ಕೆ ಇಂಧನ ಮರುಪೂರಣ!
Team Udayavani, Dec 1, 2017, 11:07 AM IST
ಹೊಸದಿಲ್ಲಿ: ಇಂಧನ ಮರುಪೂರಣ ಮಾಡಲು ವಿಮಾನಗಳನ್ನು ಲ್ಯಾಂಡ್ ಮಾಡುವುದು ಸಂಕೀರ್ಣ ಸನ್ನಿವೇಶದಲ್ಲಿ ಒಂದು ದೊಡ್ಡ ಸಮಸ್ಯೆ. ಹಲವು ದೇಶಗಳ ವಾಯುಪಡೆಗಳು ಈಗಾಗಲೇ ಈ ಸಮಸ್ಯೆಯನ್ನು ನಿವಾರಿಸಲು ಹಾರಾಡುತ್ತಲೇ ಇಂಧನ ಮರುಪೂರಣ ಪ್ರಯತ್ನ ಮಾಡಿ ದ್ದು, ಅದರಲ್ಲಿ ಯಶಸ್ವಿಯೂ ಆಗಿವೆ. ಆದರೆ ಭಾರತದ ವಾಯುಪಡೆ ಇದೇ ಮೊದಲ ಬಾರಿಗೆ ಎಂಬ್ರೇಯರ್ ವಿಮಾನಗಳಲ್ಲಿ ಈ ಪ್ರಯೋಗ ಮಾಡಿದ್ದು, ಯಶಸ್ವಿಯಾಗಿದೆ. ಇದು ಇಡೀ ಭಾರತೀಯ ವಾಯು ಪಡೆಗೆ ಮಹತ್ವದ ಸಾಧನೆಯಾಗಿದ್ದು, ತುರ್ತು ಸನ್ನಿವೇಶದಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ.
ಈ ಪ್ರಕ್ರಿಯೆ ಅತ್ಯಂತ ಸಂಕೀರ್ಣವಾಗಿದ್ದು, ಇಂಧನ ತುಂಬಿಸಿಕೊಳ್ಳುವ ವಿಮಾನವು, ಇಂಧನ ಪೂರೈಸುವ ಡ್ರೋಗ್ ಅನ್ನು ಸರಿಯಾದ ಸ್ಥಳಕ್ಕೆ ಜೋಡಿಸಬೇಕಿರುತ್ತದೆ. ಅಲ್ಲದೆ ಎರಡೂ ವಿಮಾನಗಳು ಸಮಾನ ಮಟ್ಟದಲ್ಲಿ ಹಾರಾಡಬೇಕು. ಅತ್ಯಂತ ಉತ್ತಮ ತರಬೇತಿ ಹೊಂದಿರುವ ಪೈಲಟ್ಗಳಿಂದ ಮಾತ್ರ ಇದು ಸಾಧ್ಯ. 10 ನಿಮಿಷ ಇಂಧನ ಮರುಪೂರಣ ಮಾಡಿದರೆ ಒಂದು ವಿಮಾನ 4 ತಾಸು ಹೆಚ್ಚುವರಿ ಹಾರಾಟ ನಡೆಸುವ ಸಾಮರ್ಥ್ಯ ಪಡೆಯುತ್ತದೆ. ಇಂಥದ್ದೊಂದು ಸಾಧನೆ ಮಾಡಿದ ಜಗತ್ತಿನ ಕೆಲವೇ ಕೆಲವು ವಾಯುಪಡೆಗಳ ಪೈಕಿ ಇದೀಗ ಭಾರತದ ವಾಯುಪಡೆಯೂ ಸ್ಥಾನ ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ