ಪೂರ್ವ ಕರಾವಳಿ ರೈಲ್ವೆಯಲ್ಲಿನ್ನು ಕಸವೂ ರಸ

ಸರ್ಕಾರಿ ಮಟ್ಟದಲ್ಲಿ ಮೊದಲ ಘಟಕ ಶುರು

Team Udayavani, Jan 23, 2020, 7:45 PM IST

ನವದೆಹಲಿ: ರೈಲ್ವೆಯಲ್ಲಿ ತ್ಯಾಜ್ಯ ವಿಲೇವಾರಿಯೇ ಸವಾಲಿನ ಕೆಲಸ. ಅದಕ್ಕಾಗಿ ಪೂರ್ವ ಕರಾವಳಿ ರೈಲ್ವೆ ದೇಶದಲ್ಲಿಯೇ ಮೊದಲ ಬಾರಿಗೆ ತ್ಯಾಜ್ಯದಿಂದ ಇಂಧನ ಪಡೆಯುವ ಘಟಕವನ್ನು ಶುರು ಮಾಡಿದೆ.

24 ಗಂಟೆಗಳಲ್ಲಿ ಇ- ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ನಿಂದ ಡೀಸೆಲ್‌ ಮಾದರಿಯ ತೈಲ ತೆಗೆಯಲಾಗುತ್ತಿದೆ. ಪೇಟೆಂಟ್‌ ಪಡೆಯಲಾಗಿರುವ “ಪಾಲಿಕ್ರಾಕ್‌’ ಎಂಬ ತಂತ್ರಜ್ಞಾನದಿಂದ ಅದನ್ನು ನಡೆಸಲಾಗುತ್ತಿದೆ. ಭಾರತೀಯ ರೈಲ್ವೆಯಲ್ಲಿ ಇಂಥ ಯೋಜನೆ ಜಾರಿ ಮೊದಲನೆಯದ್ದು ಮತ್ತು ದೇಶದಲ್ಲಿ ಇದು 4ನೇ ಸ್ಥಾವರವಾಗಿದೆ.

ಪೂರ್ವ ಕರಾವಳಿ ರೈಲ್ವೆಯ ವಕ್ತಾರ ಜೆ.ಪಿ.ಮಿಶ್ರಾ ಮಾತನಾಡಿ, ವಿಶ್ವದಲ್ಲಿಯೇ ಮೊದಲ ಬಾರಿಗೆ ವೈವಿಧ್ಯಮಯ ವೇಗವರ್ಧಕ ಪ್ರಕ್ರಿಯೆ ಮೂಲಕ ಹಲವು ವಸ್ತುಗಳನ್ನು ದ್ರವೀಕೃತ ಇಂಧನ, ಅನಿಲ, ಇಂಗಾಲ ಮತ್ತು ನೀರಾಗಿ ಪರಿವರ್ತಿಸುತ್ತದೆ. ಅದಕ್ಕೆ ಪೇಟೆಂಟ್‌ ಪಡೆಯಲಾಗಿದೆ ಎಂದಿದ್ದಾರೆ. ಅದಕ್ಕಾಗಿ ತ್ಯಾಜ್ಯಗಳನ್ನು ವಿಂಗಡಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಇದರಿಂದಾಗಿ ಧೂಳಿನ ವಾತಾವರಣ ಉಂಟಾಗುವುದಿಲ್ಲ ಮತ್ತು ಪರಿಸರಕ್ಕೆ ಹಾನಿಯಾಗುವ ಅಂಶಗಳು ಹೊರ ಸೂಸುವುದಿಲ್ಲ. ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಈ ಘಟಕ 450 ಡಿಗ್ರಿ ವಾತಾವರಣದಲ್ಲಿ ಕೆಲಸ ಮಾಡುತ್ತದೆ ಎಂದಿದ್ದಾರೆ. ಭುವನೇಶ್ವರ ರೈಲು ನಿಲ್ದಾಣ, ಮಂಚೇಶ್ವರ ದುರಸ್ತಿ ಕಾರ್ಯಾಗಾರ, ಕೋಚಿಂಗ್‌ ಡಿಪೋಗಳಿಂದ ಸಂಗ್ರಹಿಸಿದ ವಿವಿಧ ಮಾದರಿಯ ತ್ಯಾಜ್ಯಗಳನ್ನು ಅದಕ್ಕೆ ಬಳಸಲಾಗುತ್ತದೆ ಎಂದಿದ್ದಾರೆ.

ವಾರ್ಷಿಕ 17 ಲಕ್ಷ ಆದಾಯ:
ತ್ಯಾಜ್ಯದಿಂದ ಉತ್ಪಾದಿಸುವ ಉತ್ಪನ್ನಗಳಿಂದ ವಾರ್ಷಿಕವಾಗಿ 17.5 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ. 2011ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಇನ್ಫೋಸಿಸ್‌ನಲ್ಲಿ ಪ್ರತಿ ದಿನ 50 ಕೆಜಿ ತ್ಯಾಜ್ಯದಿಂದ ಇಂಧನ ಪಡೆಯುವ ಸ್ಥಾವರ ಸ್ಥಾಪಿಸಲಾಯಿತು. ಎರಡನೇಯದ್ದನ್ನು ನವದೆಹಲಿಯ ಮೋತಿ ಭಾಗ್‌, ಮೂರನೆಯದ್ದನ್ನು 2019ರಲ್ಲಿ ಹಿಂಡಾಲ್ಕೋದಲ್ಲಿ ಶುರು ಮಾಡಲಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...