ಅಕ್ರಮ ಸಂಪತ್ತು: ಗೋವಾ ಕೈ ನಾಯಕನ ವಿರುದ್ಧ ಎಸಿಬಿ ಎಫ್ಐಆರ್
Team Udayavani, Sep 16, 2017, 11:44 AM IST
ಪಣಜಿ : ಘೋಷಿತ ಆದಾಯಕ್ಕಿಂತ 4 ಕೋಟಿ ರೂ. ಹೆಚ್ಚು ಸಂಪತ್ತನ್ನು ಕಲೆಹಾಕಿರುವ ಆರೋಪದ ಮೇಲೆ ಗೋವೆಯ ಕಾಂಗ್ರೆಸ್ ನಾಯಕ ಚಂದ್ರಕಾಂತ ಕಾವಳೇಕರ್ ವಿರುದ್ಧ ಗೋವಾ ಪೊಲೀಸ್ ಭ್ರಷ್ಟಾಚಾರ ನಿಗ್ರಹ ದಳ ಎಫ್ಐಆರ್ ದಾಖಲಿಸಿಕೊಂಡಿದೆ.
ಕಾವಳೇಕರ್ ಅವರು ಅಕ್ರಮ ನಿವೇಶನಗಳನನ್ನು ಹಂಚುವ ಮೂಲಕ ಅಪಾರ ಪ್ರಮಾಣದ ಸಂಪತ್ತನ್ನು ಶೇಖರಿಸಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳ ಆಧಾರದ ಮೇಲೆ ಗೋವೆಯ ಭ್ರಷ್ಟಾಚಾರ ನಿಗ್ರಹ ದಳ 2012ರಲ್ಲೇ ಕಾವಳೇಕರ್ ವಿರುದ್ಧ ಸ್ವಯಂ ಪ್ರೇರಣೆಯಿಂದ ಭ್ರಷ್ಟಾಚಾರ ತಡೆ ಕಾಯಿದೆಯ ಹಲವಾರು ಸೆಕ್ಷನ್ಗಳಡಿ ಕೇಸು ದಾಖಲಿಸಿಕೊಂಡಿತು.
ಆ ಪ್ರಕಾರ 2012ರಲ್ಲೇ ತನಿಖೆ ಆರಂಭಿಸಿದ್ದ ಎಸಿಬಿ, ಕಾವಳೇಕರ್ ಅವರು ಕೇರಳದಲ್ಲಿ ಹೊಂದಿರುವ ಆಸ್ತಿಯ ವಿರುದ್ಧವೂ ತನಿಖೆ ನಡೆಸಿ ತನ್ನ ಪ್ರಾಥಮಿಕ ವರದಿಯನ್ನು ರಾಜ್ಯ ಸರಕಾರಕ್ಕೆ 2013ರಲ್ಲೇ ನೀಡಿತ್ತು.
ಇದೀಗ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಎಸಿಬಿ ಇಂದು ಕಾವಳೇಕರ್ ಅವರ ಗೋವೆಯಲ್ಲಿನ ಕ್ವೆಪೆಂ ನ ಬೇತುಲ್ ನಿವಾಸದ ಮೇಲೆ ದಾಳಿ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ